ರೈಲು ಪ್ರಯಾಣಿಕರ ಆಭರಣ ಕಳವು: ಆರೋಪಿ ಸೆರೆ

ಮೈಸೂರು: ರೈಲಿನಲ್ಲಿ ಪ್ರಯಾಣಿಕರ ಆಭರಣ ಕದ್ದು ತಲೆಮರೆಸಿ ಕೊಂಡಿದ್ದ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಮಂಡ್ಯ ಜಿಲ್ಲೆಯ ಹುಲಿವಾನ ಗ್ರಾಮದ ಹೆಚ್.ಎಂ.ನಾಗರಾಜ ಬಂಧಿತ ಆರೋಪಿ. ಕೇರಳದ ವೈನಾಡು ಜಿಲ್ಲೆ ಶರ್ಲಿ ಎಂಬುವರು ಅಜ್ಮೀರ್-ಮೈಸೂರು ಎಕ್ಸ್‍ಪ್ರೆಸ್ ರೈಲಿನ ಎಸ್-3 ಬೋಗಿಯಲ್ಲಿ ಅಕ್ಕನೊಂ ದಿಗೆ ಪ್ರಯಾಣಿಸುತ್ತಿದ್ದಾಗ ನವೆಂಬರ್ 4ರಂದು ಬೆಳಿಗ್ಗೆ 6 ಗಂಟೆ ವೇಳೆಗೆ ವ್ಯಾನಿಟಿ ಬ್ಯಾಗಿನ ಲ್ಲಿದ್ದ 2 ಚಿನ್ನದ ಸರ, 2 ಮೊಬೈಲ್, 2900 ರೂ. ನಗದು ಸೇರಿದಂತೆ 1,33,400 ರೂ. ಮೌಲ್ಯದ ಆಭರಣ ಕಳವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರು ವೃತ್ತದ ರೈಲ್ವೆ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಎನ್.ಜಯಕುಮಾರ್ ಅವರು `ಆಪರೇ ಷನ್ ಕಾವೇರಿ’ ತಂಡ ರಚಿಸಿ ಕಾರ್ಯಾ ಚರಣೆ ನಡೆಸಿದಾಗ ನವೆಂಬರ್ 13ರಂದು ಕಾವೇರಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಸಂಶಯಾ ಸ್ಪದವಾಗಿ ಓಡಾಡುತ್ತಿದ್ದ ನಾಗರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಭ ರಣವನ್ನು ಕದ್ದಿರುವುದಾಗಿ ಒಪ್ಪಿಕೊಂಡ.

ಆತನಿಂದ 1,20,000 ರೂ. ಮೌಲ್ಯದ 42 ಗ್ರಾಂ ತೂಕದ ಚಿನ್ನದ ಸರ, ಓಲೆಯನ್ನು ಪೊಲೀಸರು ವಶಪಡಿಸಿಕೊಂಡರು. ಬಂಧಿ ತನನ್ನು ನ್ಯಾಯಾಧೀಶರ ಮುಂದೆ ಹಾಜ ರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಪತ್ತೆ ಕಾರ್ಯದಲ್ಲಿ ರೈಲ್ವೆ ಸರ್ಕಲ್ ಇನ್ಸ್‍ಪೆಕ್ಟರ್ ಜಯಕುಮಾರ್, ಎಸ್‍ಐ ಆರ್.ಜಗದೀಶ, ಸಿಬ್ಬಂದಿಗಳಾದ ಬಿ.ಆರ್.ಬೀರೇಶ, ಬಿ.ಎಸ್.ಮೋಹನ್, ಆರ್. ಪ್ರಶಾಂತ, ಸಿ.ಟಿ.ಮಧು, ಆರ್.ಜಗದೀಶ, ಫಯಾಜ್‍ಖಾನ್, ಚುಂಚೇಗೌಡ ಹಾಗೂ ಮಂಜುನಾಥ ಅವರು ಪಾಲ್ಗೊಂಡಿದ್ದರು.