ಸ್ಕೂಟರ್‍ಗೆ ಸಾರಿಗೆ ಬಸ್ ಡಿಕ್ಕಿ: ವಿದ್ಯಾರ್ಥಿಗಳ ದುರ್ಮರಣ

ಮಂಡ್ಯ, ಜೂ.22(ಆರ್‍ಕೆ)- ಹೋಂಡಾ ಆಕ್ಟೀ ವಾಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲೇ ಸಾವ ನ್ನಪ್ಪಿರುವ ಘೋರ ದುರಂತ ಕೊತ್ತತ್ತಿ ಸಮೀಪದ ಪಿ.ಹಳ್ಳಿ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಶ್ರೀರಂಗಪಟ್ಟಣ ತಾಲೂಕು ಬನ್ನಹಳ್ಳಿ ಗ್ರಾಮದ ಶಂಕರ್ ಮಗ ಬಿ.ಎಸ್.ಮಹೇಂದ್ರ (15) ಹಾಗೂ ಅದೇ ಗ್ರಾಮದ ಮನೋಹರ್ ಮಗ ಬಿ.ಎಂ. ಸಂದೇಶ (16) ದುರಂತ ಸಾವಿಗೀಡಾದ ದುರ್ದೈವಿಗಳು. ಕೊತ್ತತ್ತಿಯ ಶಿಕ್ಷಣ ಸಂಸ್ಥೆ ಯೊಂದರಲ್ಲಿ ಮಹೇಂದ್ರ 10ನೇ ತರಗತಿ ಓದುತ್ತಿ ದ್ದರೆ, ಮಹೇಂದ್ರ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಬನ್ನಹಳ್ಳಿಯಿಂದ ಹೋಂಡಾ ಆಕ್ಟೀವಾ ಸ್ಕೂಟರ್‍ನಲ್ಲಿ ಕೊತ್ತತ್ತಿಗೆ ಹೋಗುತ್ತಿ ದ್ದಾಗ ಮುಂದಿನ ಖಾಸಗಿ ಬಸ್ ಓವರ್‍ಟೇಕ್ ಮಾಡಲೆತ್ನಿಸಿದ ಸ್ಕೂಟರ್‍ಗೆ ಎದುರಿನಿಂದ ಬಂದ ಕೆಎಸ್‍ಆರ್‍ಟಿಸಿ ಬಸ್ ಕೊತ್ತತ್ತಿ. ಮಂಡ್ಯ ರಸ್ತೆಯ ಪಿ.ಹಳ್ಳಿ ಬಳಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಡಿಕ್ಕಿ ಹೊಡೆಯಿತು. ಬಸ್ ಅಪ್ಪಳಿಸಿದ ರಭಸಕ್ಕೆ ಸ್ಕೂಟರ್ ಸವಾರರಾದ ಮಹೇಂದ್ರ ಮತ್ತು ಸಂದೇಶ ಸ್ಥಳದಲ್ಲೇ ಅಸುನೀಗಿದರು. ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಕೆರೆ ಠಾಣೆ ಪೊಲೀಸರು ಮಹಜರು ನಡೆಸಿ, ಬಸ್ಸನ್ನು ವಶಕ್ಕೆ ಪಡೆದರು. ಪ್ರಕರಣ ದಾಖಲಿಸಿಕೊಂಡಿರುವ ಅರಕೆರೆ ಪೊಲೀಸರು ವಿದ್ಯಾರ್ಥಿಗಳ ದೇಹವನ್ನು ಮಂಡ್ಯ ಸಾರ್ವಜನಿಕ ಆಸ್ಪತ್ರೆಯ ಶವಾಗಾರ ದಲ್ಲಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೊಪ್ಪಿಸಿದರು.