ದ್ವಿಚಕ್ರ ವಾಹನ ಕಳ್ಳರ ಬಂಧನ: 15 ಬೈಕ್, 200 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ ವಶ

ಹಾಸನ:  ದ್ವಿಚಕ್ರ ವಾಹನ ಕಳ್ಳತನ ಜತೆಗೆ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಗಳಿಬ್ಬರನ್ನು ಬಂಧಿಸಿ, ಅವರಿಂದ 20 ಲಕ್ಷ ರೂ. ಮೌಲ್ಯದ ಬೈಕ್‍ಗಳು ಹಾಗೂ ಚಿನ್ನಾಭರಣ ಗಳನ್ನು ಚನ್ನರಾಯಪಟ್ಟಣ ನಗರ ಠಾಣೆಯ ಪೆÇಲೀಸರು ವಶಪಡಿಸಿಕೊಡಿದ್ದಾರೆ.
ಇಲ್ಲಿನ ಕೃಷ್ಣ ನಗರದ ನಿವಾಸಿ ಆಟೋ ಚಾಲಕ ಸಾದಿಕ್ ಪಾಷಾ ಅಲಿಯಾಸ್ ಅಡ್ಡು(20) ಮತ್ತು ಸಾಲಗಾಮೆಯ ಆಲದಹಳ್ಳಿ ನಿವಾಸಿ ಟ್ರಾಕ್ಟರ್ ಚಾಲಕ ರಾಕೇಶ್ ಅಲಿಯಾಸ್ ರಾಕಿ(21) ಬಂಧಿತ ಆರೋಪಿಗಳು.

ಇವರಿಂದ 15 ದ್ವಿಚಕ್ರ ವಾಹನ ಹಾಗೂ 200 ಗ್ರಾಂ ಚಿನ್ನ ಜೊತೆಗೆ 200 ಗ್ರಾಂ ಬೆಳ್ಳಿ ಸೇರಿ ಒಟ್ಟು 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಮೇಲೆ 20 ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಇಬ್ಬರು ಆರೋಪಿಗಳು ಹಾಸನ, ಮದ್ದೂರು, ತಾವರೆಕೆರೆ, ಶ್ರವಣಬೆಳಗೊಳ ಸೇರಿ ದಂತೆ ಇತರೆಡೆ ಸುಮಾರು 5 ಮನೆ ಕಳ್ಳತನ ಮತ್ತು ಹಾಸನ, ಮೈಸೂರು, ಮಂಡ್ಯ ಜಿಲ್ಲೆಯ ವಿವಿಧೆಡೆ 15 ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ನ.15ರಂದು ಚನ್ನರಾಯಪಟ್ಟಣದ ಮಖಾನ್ ಸಮೀಪ ನಡುರಾತ್ರಿ ಅನುಮಾನಾಸ್ಪದ ವಾಗಿ ಬೈಕ್‍ನಲ್ಲಿ ತಿರುಗುತ್ತಿದ್ದ ವೇಳೆ ಪೆÇಲೀಸ್ ವಾಹನ ಕಂಡು ಓಡಿ ಹೋಗಲು ಪ್ರಯತ್ನಿಸಿದರು. ಈ ವೇಳೆ ಪೆÇಲೀಸರು ಅವರನ್ನು ಹಿಡಿದು ವಿಚಾರಣೆಗೊಳಪಡಿಸಿ ದಾಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಚನ್ನರಾಯಪಟ್ಟಣ ನಗರ ಠಾಣೆಯ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ 10 ಸಾವಿರ ರೂ. ನಗದು ಬಹುಮಾನ ಪ್ರಕಟಿಸಿದ್ದಾರೆ.