ಇಬ್ಬರು ವಿಕಲಚೇತನರ ಸಾಧನೆಯ ಅದಮ್ಯ ವಿಶ್ವಾಸ

ಮೈಸೂರು: ಹುಟ್ಟು ವಾಗಲೇ ವಿಕಲಚೇತನರಾಗಿದ್ದರೆ ಮನಸ್ಸಿಗೆ ಆಘಾತವಾಗುವುದಿಲ್ಲ. ಆದರೆ, ಅಪ ಘಾತದಲ್ಲಿ ಕೈ-ಕಾಲು ಕಳೆದುಕೊಂಡರೆ ಜೀವನವೇ ಮುಗಿಯಿತೆಂದು ಪ್ರಾಣಕ್ಕೆ ಕುತ್ತು ತಂದುಕೊಳ್ಳುವವರ ಮಧ್ಯೆ ಅಪಘಾತ ದಲ್ಲಿ 2 ಕಾಲುಗಳು ತುಂಡಾದರೂ ಆತ್ಮ ಸ್ಥೈರ್ಯದಿಂದ ಮುನ್ನಡೆದು ಕುಸ್ತಿಯಲ್ಲಿ ತರಬೇತಿ ಪಡೆದು ಜೂ.19ರಿಂದ ಛತ್ತೀಸ್ ಗಢ್‍ನಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂಜಕುಸ್ತಿಗೆ ಆಯ್ಕೆಯಾಗಿದ್ದಾರೆ.

ಮೈಸೂರು ಕುಂಬಾರಕೊಪ್ಪಲು ನಿವಾಸಿ, ಆಟೋ ಚಾಲಕ ಕೃಷ್ಣ ಮತ್ತು ಗೌರಿ ದಂಪತಿ ಪುತ್ರ ಪವನ್ ಈ ಸಾಧಕ. ಇವರು ಹುಟ್ಟು ವಿಕಲಚೇತನರಲ್ಲ. ವಿಜಯ ನಗರದಲ್ಲಿನ ಜೆಎಸ್‍ಎಸ್ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೇಳೆ ಈಜಲೆಂದು ಬಲಮುರಿಗೆ ಹೋಗಲು ಮೇಟಗಳ್ಳಿಯ ಬಳಿ ರೈಲ್ವೆ ಟ್ರ್ಯಾಕ್ ಮೇಲೆ ಕಿವಿಗೆ ಇಯರ್‍ಫೋನ್ ಹಾಕಿಕೊಂಡು ನಡೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಅರಸೀಕೆರೆ ಕಡೆಯಿಂದ ಬಂದ ರೈಲು ಪವನ್‍ಗೆ ಡಿಕ್ಕಿ ಹೊಡೆದ ಪರಿಣಾಮ 2 ಕಾಲುಗಳು ತುಂಡಾಗಿವೆ. ಇದರಿಂದ ಮನನೊಂದ ಪವನ್ ಮನೆ ಯಲ್ಲೇ ಇದ್ದರು. ಕೆಲವು ವರ್ಷದಿಂದ ಮನೋಸ್ಥೈರ್ಯ ವೃದ್ಧಿಸಿಕೊಂಡು ಏನಾ ದರೂ ಸಾಧಿಸಬೇಕೆಂಬ ಛಲದಿಂದ ಸಿದ್ದಾರ್ಥಬಡಾವಣೆಯ ನಿತೀಶ್ ಎಂಬುವರ ಬಳಿ ಕುಸ್ತಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸದ್ಯ ಹೆಬ್ಬಾಳ್‍ನ ಎಲ್ ಅಂಡ್ ಟಿ ಕಂಪೆನಿಯಲ್ಲಿ ಕೆಲಸ ಮಾಡು ತ್ತಿರುವ ಪವನ್‍ಗೆ, ಮೈಸೂರು ಜಿಲ್ಲಾ ವಿಶೇಷ ಚೇತನರ ಒಕ್ಕೂಟದಿಂದ ಉಚಿತವಾಗಿ ಕೃತಕ ಕಾಲುಗಳನ್ನು ನೀಡಲಾಗಿದೆ.

ಪಂಜಕುಸ್ತಿಗೆ ಗೀತಾ ಆಯ್ಕೆ: ವಿಶೇಷ ಚೇತನ ಮಹಿಳೆಯೊಬ್ಬರು ಸಹ ಛತ್ತೀಸ್ ಗಢ್‍ನ ಬಿಲ್ಲಿಯಲ್ಲಿ ನಡೆಯುವ ಪಂಜ ಕುಸ್ತಿಗೆ ಆಯ್ಕೆಯಾಗಿದ್ದಾರೆ. ವಿಕಲಚೇತನ ಮೆಟ್ಟಿ ನಿಂತು ಆತ್ಮವಿಶ್ವಾಸದಿಂದ ಸಾಧನೆಗೈದ ದಿಟ್ಟ ಮಹಿಳೆ ಕಲ್ಯಾಣಗಿರಿ ನಿವಾಸಿ, ರಾಷ್ಟ್ರೀಯ ಕ್ರೀಡಾಪಟು ಬಿ.ಗೀತಾ. ಇವರು ಕಳೆದ 7 ವರ್ಷಗಳಿಂದ ನಜರ್‍ಬಾದ್‍ನಲ್ಲಿರುವ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಕಚೇರಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಕಲಚೇತನರ ಸಂಘಟನೆಗಳ ಒಕ್ಕೂಟ ಮಹಿಳಾ ಘಟಕದ ಉಪಾಧ್ಯಕ್ಷೆ ಯಾಗಿರುವ ಗೀತಾ, ಕಳೆದ 3 ವರ್ಷ ಗಳಿಂದ ರಾಜ್ಯ ವಿಕಲಚೇತನರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಆರ್.ಮಂಜು ನಾಥ್ ಬಳಿ ಪಂಜಕುಸ್ತಿ, ವಾಲಿಬಾಲ್, ಜಾವಲಿನ್ ಥ್ರೋ ತರಬೇತಿ ಪಡೆಯುತ್ತಿದ್ದಾರೆ.

2019ರ ಜೂ.19ರಿಂದ 24ರವರೆಗೆ ಛತ್ತೀಸ್‍ಗಢ್‍ನ ಬಿಲ್ಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂಜಕುಸ್ತಿಗೆ ಆಯ್ಕೆಯಾಗಿ ದ್ದಾರೆ. ಅಲ್ಲದೆ, 2018ರ ಡಿ.22-28 ರವರೆಗೆ ಕೊಯಮತ್ತೂರಿನಲ್ಲಿ ನಡೆದ 10 ರಾಜ್ಯಗಳ ರಾಷ್ಟ್ರೀಯ ಮಟ್ಟದ ಸಿಟ್ಟಿಂಗ್ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಜ್ಯ ವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆ ಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿ ದ್ದಾರೆ. ಹಾಗೆಯೇ 2019ರ ಫೆ.3ರಂದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕರ್ನಾ ಟಕ ಪಂಜ ಕುಸ್ತಿ ಸಂಘ ಆಯೋಜಿಸಿದ್ದ ಪಂಜ ಕುಸ್ತಿಯಲ್ಲಿ ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.