ಅಳಿವಿನಂಚಿನಲ್ಲಿರುವ ಎರಡು ಕಾಡುಪಾಪ ರಕ್ಷಣೆ; ಮೂವರ ಬಂಧನ

ಮೈಸೂರು,ಜ.22(ಎಂಟಿವೈ)- ಮೈಸೂ ರಿನ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಅಳಿವಿನಂಚಿನಲ್ಲಿರುವ ಕಾಡುಪಾಪ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವ ರನ್ನು ಬಂಧಿಸಿ, ಎರಡು ಜೀವಂತ ಕಾಡುಪಾಪ ಪ್ರಾಣಿಯನ್ನು ರಕ್ಷಿಸಿದ್ದಾರೆ.

ಟಿ.ನರಸೀಪುರದಿಂದ ತಾಯೂರಿಗೆ ಹೋಗುವ ರಸ್ತೆಯಲ್ಲಿ ಮೂವರು ಕಾಡು ಪಾಪ ಮಾರಾಟ ಮಾಡಲು ಯತ್ನಿಸು ತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದಲ್ಲಿ ದಾಳಿ ನಡೆಸಿದಾಗ ಎರಡು ಜೀವಂತ ಕಾಡು ಪಾಪಗಳು ಇದ್ದುದು ಕಂಡು ಬಂದಿದೆ. ಕೂಡಲೇ ಆರೋಪಿಗಳಾದ ನಂಜನ ಗೂಡು ತಾಲೂಕಿನ ಹೆಮ್ಮರಗಾಲ ನಿವಾಸಿ ಕಿರಣ್, ಚಾಮರಾಜನಗರದ ಮೇಗಲ ನಾಯಕನ ಬೀದಿ ನಿವಾಸಿ ಮನೋ ಹರ್ ಹಾಗೂ ಟಿ.ನರಸೀಪುರ ತಾಲೂ ಕಿನ ರಂಗನಾಥಪುರ ನಿವಾಸಿ ಸಿದ್ದರಾಜು ಎಂಬುವರನ್ನು ಬಂಧಿಸಿದ್ದಾರೆ. 2 ಕಾಡು ಪಾಪಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸಿಎಫ್ ಮನೋಹರ್, ಡಿಆರ್‍ಎಫ್‍ಓಗಳಾದ ಲಕ್ಷ್ಮೀಶ್, ಮೋಹನ್, ಸುಂದರ್, ಪ್ರಮೋದ್, ನಾಗರಾಜು ಸಿಬ್ಬಂದಿ ಗಳಾದ ಸತೀಶ್, ಕೊಟ್ರೇಶ್, ಶರಣಪ್ಪ, ರವಿನಂದನ್, ಮಹಾಂತೇಶ್, ಗೋವಿಂದ, ರವಿಕುಮಾರ್, ಚನ್ನ ಬಸ ವಯ್ಯ ಪಾಲ್ಗೊಂಡಿದ್ದರು.