ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ನಿವೇಶನಗಳ ದಾಖಲೆ ಪುಟಗಳೇ ಮಂಗಮಾಯ ಪ್ರಕರಣ

ಮುಡಾ ಸಿಬ್ಬಂದಿಯ ನೆರವಿನಿಂದಲೇ ೩೦ ವರ್ಷದಿಂದ ನಡೆದಿದೆ ಭಾರೀ ಅಕ್ರಮ
ವಿಶೇಷ ಕಾರ್ಯಾಚರಣೆ ನಂತರ ಸಮಗ್ರ ತನಿಖೆ: ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ
ಮೈಸೂರು, ಏ.೨೫(ಆರ್‌ಕೆ)- ನೂರಾರು ನಿವೇಶನಗಳ ದಾಖಲೆಯ ಪುಟಗಳೇ ನಾಪತ್ತೆಯಾಗಿರುವ ಪ್ರಕರಣ ಸಂಬAಧ ವಿಶೇಷ ಕಾರ್ಯಾಚರಣೆ ನಂತರ ಸಮಗ್ರ ತನಿಖೆಗೆ ಆದೇಶಿಸಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಇಂದಿಲ್ಲಿ ತಿಳಿಸಿದ್ದಾರೆ.

ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿ ಗೋಷ್ಠಿ ನಡೆಸಿದ ಅವರು, ಏ.೨೩ ಮತ್ತು ೨೪ ರಂದು ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದಾಗ ೨೧೬ ಕಡತಗಳಲ್ಲಿನ ಹಾಳೆಗಳು ನಾಪತ್ತೆಯಾಗಿರುವುದು ಕಂಡು ಬಂದಿದ್ದು, ಕಾರ್ಯ ದರ್ಶಿಗಳ ನೇತೃತ್ವದಲ್ಲಿ ೬ ಮಂದಿ ವಿಶೇಷ ಪರಿಶೀಲನಾ ಕಾರ್ಯ ಮುಂದುವರಿಸಿದ್ದಾರೆ. ಎಷ್ಟು ಕಡತಗÀಳ ಪುಟಗಳು ಕಣ್ಮರೆಯಾ ಗಿವೆ ಎಂಬ ಸಂಪೂರ್ಣ ಮಾಹಿತಿ ತಿಳಿದ ನಂತರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತನಿಖೆ ಮಾಡಿಸುವ ಬಗ್ಗೆ ತೀರ್ಮಾ ನಿಸಿ, ಒಂದು ಬಲಿಷ್ಠ ಸಂಸ್ಥೆ(Ageಟಿಛಿಥಿ)ಗೆ ಒಪ್ಪಿಸುತ್ತೇವೆ ಎಂದರು.

ಕಳೆದ ೨೫-೩೦ ವರ್ಷಗಳಿಂದಲೂ ವಿವಿಧ ಹಂತದಲ್ಲಿ ಈ ಅಕ್ರಮ ನಡೆದಿದ್ದು, ಮುಡಾ ಅಧಿಕಾರಿಗಳು, ಸಿಬ್ಬಂದಿ ಶಾಮೀ ಲಾಗದೇ ಇದು ಸಾಧ್ಯವಿಲ್ಲ ಎಂಬುದು ಖಾತರಿಯಾಗಿದೆ. ತನಿಖೆಯಲ್ಲಿ ದೃಢಪಟ್ಟರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ತಾವುಅಧ್ಯಕ್ಷರಾದ ನಂತರ ಕಡತ ಗಳನ್ನು ಸ್ಕಾö್ಯನ್ ಮಾಡಿಸಿ ಕಂಪ್ಯೂಟರೀಕರಣಗೊಳಿಸುವ ಮೂಲಕ ಕ್ಯಾಟ್‌ಲಾಗ್-ಇಂಡೆಕ್ಸ್ ಪ್ರಕ್ರಿಯೆ ಮಾಡಿಸಲು ಮುಂದಾದ ವೇಳೆ ನಿವೇಶನಗಳ ದಾಖಲೆಗಳಲ್ಲಿನ ಹಾಳೆಗಳು ನಾಪತ್ತೆಯಾ ಗಿರುವುದು ಪತ್ತೆಯಾಗಿದೆ ಎಂದು ವಿವರಿಸಿದರು. ಹಿಂದಿನ ಸಿಐಟಿಬಿ ಮತ್ತು ಮುಡಾ ವ್ಯಾಪ್ತಿಯಲ್ಲಿ ರಚಿಸಲಾದ ವಸತಿ ಬಡಾವಣೆಗಳಲ್ಲಿ ಹಂಚಿಕೆಯಾದ ನಿವೇಶನಗಳ ಸಂಬAಧ ಪ್ರಾಧಿಕಾರದಲ್ಲಿ ನಿರ್ವಹಿಸಲಾದ ಕಡತಗಳಲ್ಲಿನ ಮಾಹಿತಿ ತಾಳೆಯಾಗದಿರುವುದರಿಂದ ಪ್ರಾಧಿಕಾರದ ಅಭಿಲೇಖಾಲಯ ದಲ್ಲಿರಿಸಿರುವ ಕಡತಗಳನ್ನು ಪರಿಶೀಲಿಸಲಾಗುತ್ತದೆ ಎಂದರು.

ಒಟ್ಟಾರೆ ಪರಿಶೀಲನಾ ಕಾರ್ಯವನ್ನು ಆದಷ್ಟು ಬೇಗ ಮುಗಿಸಿ ಯಾವ ಮಟ್ಟದಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿ ತಿಳಿದ ನಂತರ ತನಿಖೆ ಮಾಡಿಸಲಾಗುವುದು. ವರದಿ ಬಂದ ನಂತರ ಅದರಲ್ಲಿ ಭಾಗಿಯಾಗಿರುವ ಅಧಿಕಾರಿ, ಸಿಬ್ಬಂದಿ, ಮಧ್ಯವರ್ತಿ ಗಳು ಯಾರೇ ಇರಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಐವರು ವಿಶೇಷ ತಹಸೀಲ್ದಾರ್, ಓರ್ವ ಸಹಾಯಕ ಕಾರ್ಯದರ್ಶಿ, ಇಬ್ಬರು ಡೇಟಾ ಎಂಟ್ರಿ ಆಪರೇಟರ್‌ಗಳು ಹಾಗೂ ಇಬ್ಬರು ‘ಡಿ’ ಗ್ರೂಪ್ ನೌಕರರನ್ನೊಳಗೊಂಡ ತಂಡವು ವಿಶೇಷ ಕಾರ್ಯಾಚರಣೆನಡೆಸುತ್ತಿದ್ದು, ಕಾರ್ಯದರ್ಶಿ ವೆಂಕಟರಾಜು ಅದರ ನೇತೃತ್ವ ವಹಿಸಿಕೊಂಡಿದ್ದಾರೆ ಎಂದರು.

ವಿವಿಧ ಬಡಾವಣೆಗಳಲ್ಲಿನ ನಿವೇಶನ ಹಂಚಿಕೆ ಸಂಬAಧ ನಿರ್ವಹಿಸಲಾದ ಲೆಡ್ಜರ್‌ಗಳಲ್ಲಿ ಹರಾಜಾದ ನಿವೇಶನಗಳ ಮಾಹಿತಿ ನಮೂದಾಗಿದ್ದು, ಭೂಮಿ ಕಳೆದು ಕೊಂಡವರಿಗೆ ನೀಡಲಾದ ಪ್ರೋತ್ಸಾಹದಾಯಕ ನಿವೇಶನಗಳ ಮಾಹಿತಿ ಇರುವುದೂ ಪರಿಶೀಲನೆ ವೇಳೆ ಕಂಡು ಬಂದಿದೆ. ಕೆಲವು ಕಡತಗಳಲ್ಲಿ ಯಾವುದೇ ಮಾಹಿತಿಯೂ ಇಲ್ಲದೇ ಖಾಲಿ ಬಿಟ್ಟಿದ್ದು, ಲಭ್ಯವೇ ಇಲ್ಲದ ಕಡತಗಳನ್ನು ಅಭಿಲೇಖಾಲಯದಿಂದ ಪಡೆದು ಅವುಗಳ ನೈಜತೆ ಮತ್ತು ವಿವರಗಳನ್ನು ಬೇರೆ ಕಡತದÀಲ್ಲಿ ನಮೂದಿಸಿರುವುದೂ ತಿಳಿದುಬಂದಿದೆ ಎಂದು ರಾಜೀವ್ ಹೇಳಿದರು. ಮುಡಾ ಮತ್ತು ಸಿಐಟಿಬಿಯಿಂದ ಈವರೆಗೆ ೯೬,೦೦೦ ನಿವೇಶನಗಳ ಹಂಚಿಕೆ ಮಾಡಲಾಗಿದ್ದು, ಆ ಪೈಕಿ ನಕಲಿ ದಾಖಲೆ ಸೃಷ್ಟಿಸಿ ಕೆಲವು ನಿವೇಶನಗಳನ್ನು ಪರಭಾರೆ ಮಾಡಿದ್ದು, ಹೀಗೆ ಖರೀದಿಸಿದವರು ಬೇರೆಯವರಿಗೆ ಮಾರಾಟ ಮಾಡಿರುವ ಪ್ರಕರಣಗಳೂ ಇವೆ. ಕೆಲವರು ಮನೆ ಕಟ್ಟಿ ಮಾರಿದ್ದಾರೆ. ಆದರೆ ಖರೀದಿಸಿದವರಿಗೆ ತೊಂದರೆಯಾಗುತ್ತಿದೆ ಎಂದು ನುಡಿದರು. ಮುಡಾ ಕಾರ್ಯದರ್ಶಿ ವೆಂಕಟರಾಜು, ಸದಸ್ಯರಾದ ಲಕ್ಷಿö್ಮÃದೇವಿ, ಮಾದೇಶ್, ನವೀನ್‌ಕುಮಾರ್, ನಿಂಗಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಡಾ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿದರು. ಸದಸ್ಯರಾದ ಲಕ್ಷಿö್ಮÃದೇವಿ, ಮಾದೇಶ್, ನವೀನ್‌ಕುಮಾರ್, ನಿಂಗಣ್ಣ ಉಪಸ್ಥಿತರಿದ್ದರು.

ಮುಡಾ ಕಚೇರಿಯೊಳಗಿನ ಕಳ್ಳರ ಕೈವಾಡವೇ ಹೆಚ್ಚಿದೆ!
ಮೈಸೂರು: ನಿವೇಶನಗಳ ಸಂಬAಧ ಕಡತ, ಲೆಡ್ಜರ್‌ಗಳಲ್ಲಿನ ಪ್ರಮುಖ ದಾಖಲೆಗಳ ಪುಟಗಳನ್ನು ತೆಗೆದು, ನಕಲಿ ದಾಖಲೆ ಸೇರಿಸಿರುವ ಪ್ರಕರಣಗಳಲ್ಲಿ ಮುಡಾ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಕಚೇರಿಯ ಅಭಿಲೇಖಾಲಯದಲ್ಲಿ ಸಂರಕ್ಷಿಸಿ ರುವ ಮೂಲ ಕಡತ ಹಾಗೂ ಲೆಡ್ಜರ್‌ಗಳು, ಲೆಕ್ಕ ಶಾಖೆಯಲ್ಲಿರುವ ಹಣ ಪಾವತಿ ಚಲನ್‌ಗಳಿರುವ ಫೈಲ್‌ಗಳ ಕೆಲ ಹಾಳೆಗಳು ನಾಪತ್ತೆಯಾಗಲು ಸಂಬAಧಪಟ್ಟ ಅಧಿಕಾರಿ, ಸಿಬ್ಬಂದಿಗಳಿAದ ಮಾತ್ರ ಸಾಧ್ಯ. ಮನೆಯವರಲ್ಲದೇ, ಹೊರಗಿನವರಿಂದ ಈ ಕೆಲಸ ಸಾಧ್ಯವಾಗುವುದಿಲ್ಲ. ಮಧ್ಯವರ್ತಿಗಳಿಗೆ ಸಹಾಯ ಮಾಡಲು ಮುಡಾದವರೇ ಈ ಕೃತ್ಯವೆಸಗಿ ಭಾರೀ ಪ್ರಮಾಣದ ಹಣದ ಅವ್ಯವಹಾರ ನಡೆಸಿರುವ ಶಂಕೆ ಇದೆ ಎಂದರು. ಕಳೆದ ೨೫-೩೦ ವರ್ಷಗಳಿಂದ ಹಂತ-ಹAತವಾಗಿ ಈ ಅಕ್ರಮಗಳು ನಡೆದಿರುವುದರಿಂದ ಯಾವ ಅವಧಿಯಲ್ಲಿ ಯರ‍್ಯಾರು ಈ ದಾಖಲೆಗಳನ್ನು ನೋಡಿಕೊಳ್ಳುತ್ತಿದ್ದರು? ಆ ವೇಳೆ ಎಷ್ಟೆಷ್ಟು ನಿವೇಶನಗಳು ಪರಭಾರೆಯಾಗಿವೆ ಎಂಬುದರ ಬಗ್ಗೆ ವಿಶೇಷ ತಂಡವು ಪರಿಶೀಲನೆ ನಡೆಸುತ್ತಿದ್ದು, ಸಮಗ್ರ ವರದಿ ಬಂದ ಮೇಲೆ ತಪ್ಪಿತಸ್ಥರು ಯಾರು ಎಂಬುದು ತಿಳಿಯುತ್ತದೆ ಎಂದು ಹೇಳಿದರು. ಪರಿಶೀಲನೆಯನ್ನು ತರಾತುರಿಯಾಗಿ ಮಾಡಲಾಗದು. ಪ್ರತಿಯೊಂದು ಲೆಡ್ಜರ್, ಕಡತಗಳಲ್ಲಿನ ಪ್ರತಿ ಹಾಳೆಗಳ ಪುಟಗಳನ್ನೂ ನೋಡಿ ಸ್ಕಾö್ಯನ್ ಮಾಡಿ ಅದರ ಮಾಹಿತಿಯನ್ನು ಪ್ರತ್ಯೇಕವಾಗಿ ದಾಖಲಿಸುತ್ತಿರುವುದರಿಂದ ಪ್ರಕ್ರಿಯೆ ವಿಳಂಬವಾಗುತ್ತದೆ. ಮೂಲ ಕಡತಗಳೊಂದಿಗೆ ತಾಳೆ ಮಾಡಿ ಕಂಡು ಬರುವ ಲೋಪದೋಷಗಳನ್ನು ಪಟ್ಟಿ ಮಾಡಲಾಗುತ್ತದೆ. ದಾಖಲೆಗಳಿಗೆ ಸಹಿ ಮಾಡಿರುವ ಅಧಿಕಾರಿ, ಕೇಸ್ ವರ್ಕರ್‌ಗಳಾರು ಎಂಬುದನ್ನೂ ಪತ್ತೆ ಮಾಡಲಾಗುತ್ತದೆ ಎಂದ ಅವರು, ಈ ಹಗರಣದಲ್ಲಿ ಹೊರಗಿನವರಿಗಿಂತ ಮುಡಾ ಕಚೇರಿ ಒಳಗಿನ ಕಳ್ಳರ ಕೈವಾಡವೇ ಪ್ರಧಾನವಾಗಿದೆ ಎಂದರು.

ನಿವೇಶನ ಖರೀದಿಸುವಾಗ ಮುಡಾದಲ್ಲಿ ದಾಖಲೆ ನೈಜತೆ ದೃಢಪಡಿಸಿಕೊಳ್ಳಿ
ಮೈಸೂರು: ಮುಡಾದಿಂದ ಅಭಿವೃದ್ಧಿಯಾಗಿರುವ ಬಡಾವಣೆಗಳ ನಿವೇಶನ, ಕಟ್ಟಡಗಳನ್ನು ಖರೀದಿಸುವ ಮುನ್ನ ಪ್ರಾಧಿಕಾರದ ಕಚೇರಿಯಲ್ಲಿ ದಾಖಲಾತಿಗಳ ನೈಜತೆಯನ್ನು ದೃಢಪಡಿಸಿಕೊಳ್ಳಿ ಎಂದು ಅಧ್ಯಕ್ಷ ಹೆಚ್.ವಿ.ರಾಜೀವ್, ಸಾರ್ವಜನಿಕ ರಿಗೆ ಸಲಹೆ ನೀಡಿದ್ದಾರೆ. ಮುಡಾ ಕಾರ್ಯದರ್ಶಿಗಳಿಗೆ ಅರ್ಜಿ ಸಲ್ಲಿಸಿ ನೀವು ಖರೀದಿಸ ಬೇಕೆಂದಿರುವ ನಿವೇಶನದ ಮಾಹಿತಿ ನೀಡಿ, ಅದರ ಮೂಲ ಕಡತ, ಲೆಡ್ಜರ್‌ಗಳಲ್ಲಿ ಲಭ್ಯವಿರುವ ದಾಖಲೆಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು ಲಿಖಿತ ರೂಪದ ದೃಢೀಕರಣ ಪಡೆದು ವಂಚನೆಯಿAದ ಪಾರಾಗಿ ಎಂದು ತಿಳಿಸಿದ್ದಾರೆ. ಮೋಸ ಮಾಡುವವರು ತೋರಿಸುವ ದಾಖಲೆಗಳು ಮೂಲ ದಾಖಲೆ ರೀತಿಯೇ ಕಾಣುತ್ತವೆ. ಅದನ್ನು ನಂಬಿ ಪರಿಶೀಲಿಸದೇ ಖರೀದಿಸಿದರೆ ನೀವು ವಂಚನೆಗೊಳ ಗಾಗುವುದು ಖಚಿತ. ನಂತರ ಮುಡಾಗೆ ಬಂದು ಕೇಳಿದರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.

 

ಬದಲಿ ನಿವೇಶನದಲ್ಲೂ ಭಾರೀ ಅಕ್ರಮ
ಮೈಸೂರು: ಬದಲಿ ನಿವೇಶನಗಳ ಹಂಚಿಕೆಯಲ್ಲಿ ಭಾರೀ ಅವ್ಯವಹಾರವಾಗಿರುವುದು ಕಂಡು ಬಂದಿದ್ದು, ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ಮೂಲ ಕಡತ ಇಲ್ಲದಿ ದ್ದರೂ ನಕಲಿ ದಾಖಲೆ ಸೃಷ್ಟಿಸಿ ಹಲವು ಬದಲಿ ನಿವೇಶನ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಹೆಚ್.ವಿ.ರಾಜೀವ್ ತಿಳಿಸಿದರು.

ಬಲಮುರಿಯಲ್ಲಿ ಬೆಂಗಳೂರಿನ ವ್ಯಕ್ತಿ ನೀರುಪಾಲು
ಶ್ರೀರಂಗಪಟ್ಟಣ,ಏ೨೫(ವಿನಯ್‌ಕಾರೇಕುರ)-ತಾಲೂಕಿನ ಬೆಳಗೂಳ ಗ್ರಾಮದ ಬಳಿಯ ಬಲಮರಿ ಪ್ರವಾಸಿ ತಾಣದಲ್ಲಿನ ಕಾವೇರಿ ನದಿಯಲ್ಲಿ ಮುಳುಗಿ ಬೆಂಗಳೂರು ಬನ್ನೇರು ಘಟ್ಟ ರಸ್ತೆಯ ನಿವಾಸಿ ಪುನೀತ್‌ಕುಮಾರ್ (೩೩) ಸಾವನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಪುನೀತ್‌ಕುಮಾರ್ ಆಟೋ ಚಾಲಕನಾ ಗಿದ್ದು, ಭಾನುವಾರ ತನ್ನ ಸ್ನೇಹಿತರ ಜೊತೆ ಯಲ್ಲಿ ಬಲಮುರಿಗೆ ಪ್ರವಾಸಕ್ಕೆ ಬಂದಿದ್ದ. ಈ ವೇಳೆ ನದಿಯಲ್ಲಿ ಈಜಾಡುತ್ತಿದ್ದಾಗ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತನ ಜೊತೆ ಬಂದಿದ್ದ ಸ್ನೇಹಿತರು ನೀಡಿದ್ದ ದೂರಿನ ಮೇರೆಗೆ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿÀ ಸಬ್‌ಇನ್‌ಸ್ಪೆಕ್ಟರ್ ಲಿಂಗರಾಜು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಸೋಮವಾರ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ, ದೇಹ ವನ್ನು ವಾರಸುದಾರರಿಗೆ ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.