ಇಂದು ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆ

ಮೈಸೂರು: ಜೂನ್ 2ರಂದು 2019ನೇ ಸಾಲಿನ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮೀಷನ್ (ಯುಪಿ ಎಸ್‍ಸಿ) ಪೂರ್ವಭಾವಿ ಪರೀಕ್ಷೆ ನಡೆಯ ಲಿದ್ದು, ಪರೀಕ್ಷಾ ಕೇಂದ್ರದ ಬಳಿ ಅಕ್ರಮ ಗಳು, ಕಾನೂನುಬಾಹಿರ ಚಟುವಟಿಕೆ ಗಳು ನಡೆಯದಂತೆ ತಡೆಯಲು, ಪರೀಕ್ಷೆ ಯನ್ನು ಸುಸೂತ್ರವಾಗಿ ನಡೆಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾ ಡುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯ ಪ್ರದೇಶ ದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆದೇ ಶಿಸಿದ್ದಾರೆ. ಮೈಸೂರು ನಗರದಲ್ಲಿ 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪರೀಕ್ಷಾ ಸಿಬ್ಬಂದಿ ಹಾಗೂ ಪರೀಕ್ಷಾರ್ಥಿ ಗಳನ್ನು ಹೊರತುಪಡಿಸಿ, ಅನಧಿಕೃತ ವ್ಯಕ್ತಿ ಗಳು ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪರೀಕ್ಷಾ ಕೇಂದ್ರಗಳು: ಲಕ್ಷ್ಮೀಪುರಂನ ಎಂಎಂಕೆ ಮತ್ತು ಎಸ್‍ಡಿಎಂ ಬಾಲಕಿ ಯರ ಪಿಯು ಕಾಲೇಜು, ಮಹಾರಾಣಿ ಬಾಲಕಿಯರ ವಿಜ್ಞಾನ ಮತ್ತು ಕಲಾ ಕಾಲೇಜು, ಮಹಾರಾಜ ಸರ್ಕಾರಿ ಪಿಯು, ಮಹಾ ರಾಜ ಮತ್ತು ಯುವರಾಜ ಕಾಲೇಜು, ದೇವ ರಾಜ ವ್ಯಾಪ್ತಿಯ ಮರಿಮಲ್ಲಪ್ಪ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು, ನಾರಾ ಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಪದವಿ ಪೂರ್ವ ಕಾಲೇಜು, ಜಯಲಕ್ಷ್ಮೀ ಪುರಂನ ಸಂತ ಜೋಸೆಫ್ ಶಾಲೆ, ವಿವಿ ಪುರಂನ ನಿರ್ಮಲಾ ಪ್ರೌಢಶಾಲೆ, ಮಂಡಿ ಮೊಹಲ್ಲಾದ ಶೇಷಾದ್ರಿ ಅಯ್ಯರ್ ರಸ್ತೆಯ ಲ್ಲಿರುವ ವಿದ್ಯಾವರ್ಧಕ ಪಿಯು ಕಾಲೇಜು, ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜು, ಬನ್ನಿಮಂಟಪದ ಸಂತ ಮಥಾಯಿಸ್ ಪ್ರೌಢಶಾಲೆ, ಸಂತ ಜೋಸೆಫ್ ಪ್ರೌಢಶಾಲೆ ಹಾಗೂ ಸಿದ್ದಾರ್ಥ ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಪರೀಕ್ಷೆ ನಡೆಯಲಿದೆ.