ಶಂಕರ ಜಯಂತಿಯೊಟ್ಟಿಗೆ ಆಚಾರ್ಯತ್ರಯರ ಜಯಂತಿ ಆಚರಣೆಗೆ ಒತ್ತಾಯ

ಮೈಸೂರು: ಮೈಸೂರಿನ ತ್ಯಾಗರಾಜ ರಸ್ತೆ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಆಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಮಧ್ವಾ ಚಾರ್ಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚಾರ್ಯತ್ರಯರ ಜಯಂತಿಯನ್ನು ಆಚರಿಸಲಾಯಿತು.

ಶಂಕರ ಜಯಂತಿ ಮತ್ತು ರಾಮಾನುಜಾ ಚಾರ್ಯ ಜಯಂತಿ ಅಂಗವಾಗಿ ಮೈಸೂರು ರಾಮಾನುಜ ಸಹಸ್ರಮಾನೋತ್ಸವ ಸಮಿತಿ, ಮೈಸೂರು ನಗರ ಬ್ರಾಹ್ಮಣ ಸಂಘದ ವತಿ ಯಿಂದ ಏರ್ಪಡಿಸಿದ್ದ ಆಧ್ಯಾತ್ಮಿಕ ಜಗತ್ತು’ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಮಾತನಾಡಿದರು.

ವಿಶ್ವಕ್ಕೆ ಶಂಕರಾಚಾರ್ಯ, ರಾಮಾನುಜಾ ಚಾರ್ಯ, ಮಧ್ವಾಚಾರ್ಯರ ಕೊಡುಗೆ ಯನ್ನು ಸ್ಮರಿಸುವ ದಿನ. ಅವರು ಕೊಟ್ಟಿ ರುವ ವಿಚಾರಗಳು ಇಂದಿಗೂ ಪ್ರಸ್ತುತ. ಅವರ ಅಮೂಲ್ಯ ಬೋಧನೆಯನ್ನು ಎಲ್ಲರೂ ಪಾಲಿಸಬೇಕು. ಶಂಕರ ಜಯಂತಿ ಆಚರಿ ಸುತ್ತಿರುವ ಸರ್ಕಾರ ಜೊತೆಯಲ್ಲಿಯೇ ರಾಮಾನುಜಾಚಾರ್ಯರು ಮತ್ತು ಮಧ್ವಾ ಚಾರ್ಯರ ಜಯಂತಿಯನ್ನು ಆಚರಿಸ ಬೇಕು. ಈ ಮೂಲಕ ಅವರ ವಿಚಾರಧಾರೆ ಗಳ ಸ್ಮರಣೆ ಮಾಡಿದಂತಾಗುತ್ತದೆ ಎಂದರು.

ಮೈಸೂರು ಜಿಲ್ಲಾ ಸಹಕಾರ ಯೂನಿ ಯನ್ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತ ನಾಡಿ, ಧಾರ್ಮಿಕತೆಯ ಮೂಲಕ ನೆಮ್ಮದಿ ಪಡೆಯಲು ಸಾಧ್ಯ. ಆದರೆ ಅದು ಅಂಗಡಿ ಯಲ್ಲಿ ಸಿಗುವುದಿಲ್ಲ. ಇಂತಹ ಧಾರ್ಮಿಕ ಆಚರಣೆಗಳು ನೆಮ್ಮದಿಯನ್ನು ತಂದು ಕೊಡುತ್ತವೆ. ಎಲ್ಲರೂ ಒಟ್ಟುಗೂಡಿ ಇಂತಹ ಕಾರ್ಯಕ್ರಮಗಳ ಮೂಲಕ ನೆಮ್ಮದಿಯ ಜೀವನವನ್ನು ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಮೈಸೂರು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರ ಶಂಕರ ಜಯಂತಿಯನ್ನು ಆಚ ರಿಸುತ್ತಿರುವುದು ಮತ್ತು ಬ್ರಾಹ್ಮಣ ಅಭಿ ವೃದ್ಧಿ ನಿಗಮ ಮಂಡಳಿ ಸ್ಥಾಪಿಸಿರುವುದು ಶ್ಲಾಘನೀಯ. ಹಾಗೆಯೇ ಮುಂದಿನ ದಿನದಲ್ಲಿ ಶಂಕರ ಜಯಂತಿ ಜೊತೆಯಲ್ಲೇ ರಾಮಾನುಜರ ಮಧ್ವರ ಜಯಂತಿಯನ್ನು ಆಚರಿಸಬೇಕೆಂದು ಅಭಿಪ್ರಾಯಪಟ್ಟರು.

ಮಾಜಿ ಮೇಯರ್ ಆರ್.ಜೆ.ನರಸಿಂಹ ಅಯ್ಯಂಗಾರ್, ನಗರಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್, ಮಾಜಿ ಸದಸ್ಯ ರಾದ ಎಂ.ಡಿ.ಪಾರ್ಥಸಾರಥಿ, ಎಕೆ ಬಿಎಂಎಸ್ ರಾಜ್ಯ ಸಂಘಟನಾ ಕಾರ್ಯ ದರ್ಶಿ ನಂ. ಶ್ರೀಕಂಠಕುಮಾರ್, ಬಿ.ವಿ.ಮಂಜುನಾಥ್, ರಘುರಾಂ ವಾಜಪೇಯಿ, ಸೌಭಾಗ್ಯ ಮೂರ್ತಿ, ರಾಮಾನುಜ ಸಹಸ್ರಮಾನೋತ್ಸವ ಸಮಿತಿ ಕಾರ್ಯದರ್ಶಿ ಪುಟ್ಟಸ್ವಾಮಿ, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ರಾಜ ಗೋಪಾಲ್ ಕಡಕೊಳ ಜಗದೀಶ್, ರಂಗ ನಾಥ್, ಸುಚೀಂದ್ರ, ಪ್ರಶಾಂತ್, ಅರುಣ್, ಚಕ್ರಪಾಣಿ ಇನ್ನಿತರರು ಉಪಸ್ಥಿತರಿದ್ದರು