ಮನುಸ್ಮøತಿ ಹೊರತಾಗಿ ವಚನಸ್ಮøತಿ ನಮ್ಮ ಬದುಕಿನ ಭಾಗವಾಗಬೇಕು

ಮೈಸೂರು, ಆ.5(ಪಿಎಂ)- ಬಸವಾದಿ ಶರಣರ 12ನೇ ಶತಮಾನದ ಚಳವಳಿ ಮಾರ್ಗವನ್ನು ಮತ್ತೆ ಕಂಡುಕೊಳ್ಳುವ ಉದ್ದೇ ಶದ ಶರಣರ ಚಳವಳಿ ಪ್ರತಿಬಿಂಬಿಸುವ ವೈವಿ ಧ್ಯಮಯ ಕಾರ್ಯಕ್ರಮ `ಮತ್ತೆ ಕಲ್ಯಾಣ’ಕ್ಕೆ ಸೋಮವಾರ ಚಾಲನೆ ದೊರೆಯಿತು.
ಸಹಮತ ವೇದಿಕೆ ವತಿಯಿಂದ ಸಾಣೇ ಹಳ್ಳಿ ಶ್ರೀಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ `ಮತ್ತೆ ಕಲ್ಯಾಣ’ ಆಯೋಜನೆಗೊಂಡಿದ್ದು, ಮೈಸೂರಿನಲ್ಲಿ ನಡೆಯಲಿರುವ ಎರಡು ದಿನಗಳ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ವಚನ ಚಳವಳಿ ಸಂದರ್ಭದ ಚಿತ್ರ ಪ್ರದರ್ಶನ ಉದ್ಘಾಟಿ ಸುವ ಮೂಲಕ ಕನ್ನಡ ಸಾಹಿತ್ಯ ಅಕಾ ಡೆಮಿ ಮಾಜಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಮೈಸೂರಿನ ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಅಂತ ರ್ಜಾತಿ ವಿವಾಹಗಳ ಮೂಲಕ ಜಾತಿ ವಿನಾಶ, ಅಸ್ಪøಶ್ಯತೆ ನಿರ್ಮೂಲನೆ ಹಾಗೂ ಮೌಢ್ಯ ನಿವಾರಣೆಗೆ ಮತ್ತೆ ಚಳವಳಿ ಮುನ್ನಲೆಗೆ ಬರುವಂತಾಗುವುದೇ `ಮತ್ತೆ ಕಲ್ಯಾಣ’ ಎಂಬುದು ನನ್ನ ಅಭಿಪ್ರಾಯ. ವಚನಗಳು ಸರಳ, ನೇರ ಮತ್ತು ಮುಕ್ತ. ವಚನ ಸಾಹಿತ್ಯ ಶರಣರು ಕೊಟ್ಟ ಸಂವಿಧಾನ. ಮನುಸ್ಮøತಿ ಹೊರತಾಗಿ ವಚನಸ್ಮøತಿ ನಮ್ಮ ಬದುಕಿನ ಭಾಗವಾಗಬೇಕು ಎಂದು ನುಡಿದರು.

ಭಾರತದ ಸಂವಿಧಾನ ವಚನ ಸಾಹಿ ತ್ಯದ ಪ್ರತಿಕೃತಿ. ಮತ್ತೆ ಕಲ್ಯಾಣ ನೈತಿಕ ಮತ್ತು ತಾತ್ವಿಕ ಬದುಕು ರೂಪಿಸಲು ಪೂರಕ ಚಳ ವಳಿ. ಇದು ರಾಜ್ಯದ ಗಡಿ ದಾಟಿ ಪಸ ರಿಸಬೇಕು. ಇದು ಕೇವಲ ತಳಸಮುದಾ ಯಕ್ಕೆ ಸೀಮಿತವಾಗದೇ ಮೇಲ್ವರ್ಗದ ಮನ ಮುಟ್ಟುವಂತಾಗಲಿ ಎಂದು ಆಶಿಸಿದರು.

ಸಂವಿಧಾನದಲ್ಲಿ ಶರಣರ ಆಶಯ: ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ಅರ್ಥಪೂರ್ಣ ಹಾಗೂ ಅಗತ್ಯವೂ ಆದ ಕಾರ್ಯಕ್ರಮ `ಮತ್ತೆ ಕಲ್ಯಾಣ’. ಬಸವಾದಿ ಶರಣರು ಜಾತಿ-ಮತ ಭೇದವನ್ನು ಹೋಗಲಾಡಿಸಿ ಇಡೀ ಸಮಾಜವನ್ನು ಒಗ್ಗೂಡಿಸಿ ಸರ್ವ ರನ್ನು ಸಮಾನರೆಂದು ಪರಿಗಣಿಸುವ ಕ್ರಾಂತಿ ಕಾರಕ ಸಮಾಜ ಸುಧಾರಣೆಗೆ ಶ್ರಮಿಸಿ ದರು. ಶರಣರ ತತ್ವ-ಚಿಂತನೆಗಳು ಅಡಕ ವಾಗಿರುವ ನಮ್ಮ ಸಂವಿಧಾನದ ಆಶಯ ಎತ್ತಿಹಿಡಿಯುವ ಆಡಳಿತವನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ನೂತನ ರಾಜ್ಯ ಸರ್ಕಾರ ರಾಜ್ಯಕ್ಕೆ ನೀಡುವಂತಾ ಗಲಿ ಎಂದು ಹೇಳಿದರು.

ಚಿತ್ತಾರದಲ್ಲಿ ಶರಣರ ಚಿಂತನೆ: ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ ಸೇರಿ ದಂತೆ ಶರಣರ ಚಿಂತನೆಯಲ್ಲಿ ಮೂಡಿ ಬಂದ ವಚನಗಳ ಸಾರಾಂಶ ಅನಾವರಣ ಗೊಳಿಸುವ ಚಿತ್ರ ಪ್ರದರ್ಶನ ಸಮಾನತೆ, ಸಾಮರಸ್ಯದ ಮಹತ್ವ ಸಾರಿದವು. ಅಲ್ಲದೆ, ಸಮಾಜದಲ್ಲಿರುವ ದ್ವಂದ್ವ ನೀತಿಗಳನ್ನು ಖಂಡಿಸಿ ಬದುಕಿನ ಮಾರ್ಗ ತೋರಿದ ವಚನಗಳು ಚಿತ್ತಾರವಾಗಿ ಮಹತ್ವದ ಸಂದೇಶ ರವಾನಿಸಿದವು.

ಚಿತ್ರ ಪ್ರದರ್ಶನದಲ್ಲಿ `ಮತ್ತೆ ಕಲ್ಯಾಣಕ್ಕೆ ಬಾ ಬಸವಣ್ಣ’ ಚಿತ್ರವನ್ನು ಪ್ರೊ.ಅರವಿಂದ ಮಾಲಗತ್ತಿ ಅನಾವರಣಗೊಳಿಸಿದರು. ಜನಸಾಮಾನ್ಯರು, ದೀನ-ದಲಿತರು ಆಕಾಶ ದತ್ತ ಮುಖ ಮಾಡಿ ಮೋಡದ ಮರೆಯ ಲ್ಲಿರುವ ಬಸವಣ್ಣನವರನ್ನು ಬಾ ಎಂದು ಕರೆಯುವಂತೆ ಈ ಚಿತ್ರ ರಚನೆ ಮಾಡಿರು ವುದು ವಿಶೇಷವೆನಿಸಿತು. ಪ್ರದರ್ಶನ ವೀಕ್ಷಣೆಗೆ ಉಚಿತ ಪ್ರವೇಶವಿದ್ದು, ನಾಳೆ (ಆ.6) ಬೆಳಿಗ್ಗೆ 10ರಿಂದ ರಾತ್ರಿ 7ರವರೆಗೆ ಪ್ರದರ್ಶನ ಇರಲಿದೆ.

ಈ ಚಿತ್ರಗಳ ರಚನಕಾರ ಹಿರಿಯ ಕಲಾ ವಿದ ಎಲ್.ಶಿವಲಿಂಗಪ್ಪ ಮಾತನಾಡಿ, ರೇಖಾಚಿತ್ರ, ಜಲವರ್ಣ ಚಿತ್ರ ಹಾಗೂ ತೈಲವರ್ಣ ಚಿತ್ರ ಸೇರಿದಂತೆ ಒಟ್ಟು 45 ಚಿತ್ರ ಗಳು ಇಲ್ಲಿವೆ. ವಚನ ಸಾಹಿತ್ಯಕ್ಕೆ ಸಂಬಂ ಧಿಸಿದಂತೆ ಸಾಕಷ್ಟು ಸಾಹಿತ್ಯ ಕೃಷಿಯಾ ಗಿದೆ. ಆದರೆ ಚಿತ್ರಗಳ ಮೂಲಕ ವಚನ ಸಾಹಿತ್ಯ ಅನಾವರಣಗೊಳಿಸಿರುವುದು ತೀರಾ ಕಡಿಮೆ. ಮಕ್ಕಳಿಗೆ ವಚನ ಸಾಹಿತ್ಯ ಕುರಿತಂತೆ ತಿಳಿಸಿಕೊಡಲು ಚಿತ್ರಗಳು ಪರಿಣಾಮಕಾರಿ ಎಂದು ತಿಳಿಸಿದರು.

ಬಳಿಕ ಕಲಾಮಂದಿರದ ಕಿರುರಂಗ ಮಂದಿ ರಲ್ಲಿ ವಚನ ಗಾಯನ, ಹಾಗೂ ವಚನ ಚಿತ್ರ ರಚನಾ ಕಾರ್ಯ ಕ್ರಮ ನಡೆಯಿತು. ಕಲಾಮಂದಿರದಲ್ಲಿ ನಾಳೆ (ಆ.6) ಬೆಳಿಗ್ಗೆ 10ಕ್ಕೆ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ವಿದ್ಯಾರ್ಥಿಗೊಂದಿಗೆ ಮುಕ್ತ ಸಂವಾದ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 3ಕ್ಕೆ ಸಾಮರಸ್ಯ ನಡಿಗೆ, ಸಂಜೆ 6ಕ್ಕೆ ಸಾರ್ವ ಜನಿಕ ಸಮಾವೇಶ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಸಹಮತ ವೇದಿಕೆ ಸಂಚಾಲಕರಾದ ಜವರಪ್ಪ, ಕೆ.ಆರ್. ಗೋಪಾಲಕೃಷ್ಣ, ಶರಣ ಮಹಾದೇವಪ್ಪ, ರಂಗಾಯಣ ಮಾಜಿ ನಿರ್ದೇಶಕ ಹೆಚ್. ಜನಾರ್ಧನ್, ವಿಮರ್ಶಕ ಓ.ಎಲ್.ನಾಗ ಭೂಷಣ್ ಸೇರಿದಂತೆ ಕಾಲೇಜು ವಿದ್ಯಾರ್ಥಿ ಗಳು, ಅನೇಕ ಗಣ್ಯರು ಹಾಜರಿದ್ದರು.