ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮ

ಮೈಸೂರು, ಸೆ.14(ಪಿಎಂ)- ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ದೇಶದಾದ್ಯಂತ ಬೂತ್ ಮಟ್ಟದಲ್ಲಿ ಸೇವಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂ ಡಿದ್ದು, ಅದೇ ರೀತಿ ಮೈಸೂರು ನಗರದ ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 797 ಬೂತ್‍ಗಳಲ್ಲಿ ಏಳು ದಿನಗಳ ಕಾಲ ವಿವಿಧ ಸೇವಾ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ ಎಂದು ಸೇವಾ ಸಪ್ತಾಹ ಮೈಸೂರು ನಗರ ಸಂಚಾಲಕ ಹಾಗೂ ನಗರಪಾಲಿಕೆ ಸದಸ್ಯ ಶಿವಕುಮಾರ್ ತಿಳಿಸಿದರು.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ ಸೆ.20ರವರೆಗೆ ನಗರದ ಎಲ್ಲಾ ಬೂತ್ ವ್ಯಾಪ್ತಿಯಲ್ಲಿ ನಾನಾ ಸೇವಾ ಕಾರ್ಯಕ್ರಮಗಳು ನಡೆಯಲಿವೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಅರ್ಥಪೂರ್ಣ ವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕೆ.ಆರ್.ಕ್ಷೇತ್ರದಲ್ಲಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಸ್.ಎ.ರಾಮದಾಸ್, ಚಾಮರಾಜ ಕ್ಷೇತ್ರದಲ್ಲಿ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಹಾಗೂ ಎನ್‍ಆರ್ ಕ್ಷೇತ್ರದಲ್ಲಿ ಮಾಜಿ ಮೇಯರ್ ಸಂದೇಶ ಸ್ವಾಮಿ, ಬಿಜೆಪಿ ಮುಖಂಡರಾದ ಬಿ.ಪಿ.ಮಂಜು ನಾಥ್, ಸು.ಮುರಳಿ ನೇತೃತ್ವದಲ್ಲಿ ಸೇವಾ ಸಪ್ತಾಹ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ನೇತ್ರ ತಪಾಸಣೆ ಶಿಬಿರ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಸೇವಾ ಕಾರ್ಯಕ್ರಮ ಜರುಗಲಿವೆ. ಉದ್ಯಾನವನ, ಸ್ಮಶಾನ, ದೇವಸ್ಥಾನ, ಕೆರೆ ಮೊದ ಲಾದ ಕಡೆ ಸ್ವಚ್ಛತಾ ಶ್ರಮದಾನ ನಡೆಸಲಾಗುವುದು. ದಸರಾ ಅಂಗವಾಗಿ ಅರಮನೆ ಹಾಗೂ ವಸ್ತು ಪ್ರದ ರ್ಶನ ಆವರಣದಲ್ಲೂ ಸ್ವಚ್ಛತಾ ಕಾರ್ಯ ನಡೆಸುವ ಜೊತೆಗೆ ಉಪಯುಕ್ತವಲ್ಲದ ಬ್ಯಾನರ್ ತೆರವು ಮಾಡ ಲಾಗುವುದು. ಪ್ಲಾಸ್ಟಿಕ್ ನಿಷೇಧ, ಜಲ ಸಂರಕ್ಷಣೆ ಹಾಗೂ ಮಳೆ ನೀರು ಕೊಯ್ಲು ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗು ವುದು ಎಂದರು. ಸೇವಾ ಸಪ್ತಾಹದ ಕೆಆರ್ ಕ್ಷೇತ್ರ ಸಂಚಾಲಕ ಪ್ರಸನ್ನಕುಮಾರ್, ಚಾಮರಾಜ ಕ್ಷೇತ್ರದ ಸಂಚಾಲಕ ಕಿರಣ್‍ಕುಮಾರ್‍ಗೌಡ, ಎನ್‍ಆರ್ ಕ್ಷೇತ್ರದ ಸಂಚಾಲಕ ನಂದಕುಮಾರ್ ಗೋಷ್ಠಿಯಲ್ಲಿದ್ದರು.