ವಾಟಾಳ್ ನಾಗರಾಜ್ ತಮಟೆ ಚಳುವಳಿ

ಮೈಸೂರು: ಕೆಆರ್‍ಎಸ್ ಉದ್ಯಾನವನವನ್ನು ಡಿಸ್ನಿ ಲ್ಯಾಂಡ್ ಆಗಿ ಮಾರ್ಪಡಿಸದಂತೆ ಒತ್ತಾ ಯಿಸಿ ಭಾನುವಾರ ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದ ಬಳಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ತಮಟೆ ಚಳವಳಿ ನಡೆಸಿದರು.
ರೈಲ್ವೆ ನಿಲ್ದಾಣದ ಮುಂಭಾಗವಿರುವ ಬಾಬು ಜಗಜೀವನರಾಮ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವÀದಲ್ಲಿ ತಮಟೆ ಚಳು ವಳಿ ಆರಂಭಿಸಿದ ಪ್ರತಿಭಟನಾಕಾರರು ಕೆಆರ್‍ಎಸ್ ಉದ್ಯಾನವನಕ್ಕೆ ತನ್ನದೇ ಆದ ಮಹತ್ವವಿದೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಹೆಸರಿನಲ್ಲಿ ಉದ್ಯಾನವನದ ಪಾರಂಪರಿಕತೆಯನ್ನು ಹಾಳು ಮಾಡ ದಂತೆ ಒತ್ತಾಯಿಸಿದರು.

ಇದೇ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ಐತಿಹಾಸಿಕ ಸ್ಥಳಗಳಲ್ಲಿ ಕೆಆರ್‍ಎಸ್ ಒಂದಾಗಿದೆ. ರಾಜರ ಕಾಲದಲ್ಲಿ ನಿರ್ಮಿಸಲಾಗಿರುವ ಈ ಉದ್ಯಾನವನ ತನ್ನದೇ ವೈಶಿಷ್ಟ್ಯತೆಯೊಂದಿಗೆ ಮಹತ್ವ ವನ್ನು ಕಾಪಾಡಿಕೊಂಡು ಬಂದಿದೆ. ಇದು ವರೆಗೂ ದೇಶ ವಿದೇಶದ ಕೋಟ್ಯಾಂತರ ಪ್ರವಾಸಿಗರು ಕೆಆರ್‍ಎಸ್ ಜಲಾಶಯದ ಉದ್ಯಾನವನದ ಸೌಂದರ್ಯವನ್ನು ಕಣ್ತುಂಬಿ ಕೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರ ಡಿಸ್ನಿಲ್ಯಾಂಡ್ ನಿರ್ಮಾಣದ ಮೂಲಕ ಜಲಾ ಶಯದ ಅಂದಗೆಡಿಸಲು ಮುಂದಾಗಿದೆ. ಇದು ಒಳ್ಳೆ ಬೆಳವಣಿಗೆಯಲ್ಲ. ಜಲಾಶಯದ ಗೋಡೆ, ಕಟ್ಟಡಕ್ಕೆ ಅಪಾಯವಿದ್ದು, ಯಾವುದೇ ಕಾರಣಕ್ಕೂ ಡಿಸ್ನಿಲ್ಯಾಂಡ್ ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿದರು.

ಜಲಾಶಯದಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡುವ ಅವಶ್ಯಕತೆ ಇಲ್ಲ. ಈಗಾಗಲೇ ಇರುವ ಕಾವೇರಿ ಪ್ರತಿಮೆಗೆ ಕೋಟ್ಯಂತರ ಜನ ಪೂಜೆ ಮಾಡಿದ್ದಾರೆ. ಅದನ್ನು ಬಿಟ್ಟು ಬೇರೆ ಪ್ರತಿಮೆ ನಿರ್ಮಿಸು ವುದು ಒಳ್ಳೆಯ ಸೂಚನೆಯಲ್ಲ. ಜಲಸಂಪ ನ್ಮೂಲ ಸಚಿವರು ತಾವು ತೆಗೆದುಕೊಂಡಿ ರುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಮಾಡಿಯೇ ತೀರುತ್ತೇವೆ ಎಂದರೆ ಕರ್ನಾ ಟಕ ಬಂದ್ ಮಾಡುವುದರೊಂದಿಗೆ ರಾಜ್ಯಾ ದ್ಯಂತ ವಿವಿಧ ಸ್ವರೂಪದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗೊಂದ ಲದ ಹೇಳಿಕೆ ನೀಡುತ್ತಿದೆ. ಈ ಹಿಂದೆ ಅನು ಮತಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಷರತ್ತು ಹೇರುತ್ತಿದೆ. ಇದನ್ನು ರಾಜ್ಯದ ಸಂಸದರು ಖಂಡಿಸಿಲ್ಲ. ಕೇಂದ್ರ ಸರ್ಕಾರದ ದ್ವಂದ್ವ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸದೆ ಸುಮ್ಮನಿದ್ದಾರೆ. ಎಡಿಎಂಕೆ ಸಂಸದರು ಸಂಸತ್‍ನಲ್ಲಿ ಹೋರಾಟ ಮಾಡುತ್ತಿ ದ್ದರೂ, ನಮ್ಮವರು ಸುಮ್ಮನಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡು ಅಣೆಕಟ್ಟೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿ ಸುತ್ತಿದೆ.

ಕೇಂದ್ರ ತಮಿಳುನಾಡು ಓಲೈಕೆಗೆ ಮುಂದಾಗಿದ್ದು ತಮಿಳುನಾಡು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ನಾವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಇನ್ನು 15 ದಿನಗಳೊಳಗಾಗಿ ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸದಿದ್ದರೆ ಕನ್ನಡ ಒಕ್ಕೂಟಗಳ ವತಿಯಿಂದ ಜಲ್ಲಿ, ಸಿಮೆಂಟ್ ತೆಗೆದುಕೊಂಡು ಹೋಗಿ ಸಾಂಕೇತಿಕವಾಗಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಕನ್ನಡ ಚಳುವಳಿಗಾರರ ಸಂಘದ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.