ಮೈಸೂರು: ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ ಸರ್ಕಾರ 3,666 ಎಕರೆ ಭೂಮಿ ಪರಭಾರೆ ಮಾಡಲು ಮುಂದಾಗಿರುವು ದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಮೈಸೂರಿನ ರೈಲ್ವೆ ನಿಲ್ದಾಣದ ಮುಖ್ಯ ದ್ವಾರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಅಂಗಾತ ಮಲಗಿ ಸರ್ಕಾ ರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ರಾಜ್ಯ ಸರ್ಕಾರದ ನೀತಿಯಿಂ ದಾಗಿ ರಾಜ್ಯ ದಿವಾಳಿಯಾಗುತ್ತಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿಯನ್ನು ಬಹಳ ಮಂದಿ ಲೂಟಿ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಅನ್ಯರ ಹೆಸರಿನಲ್ಲಿ ಭೂಮಿ ಕೊಳ್ಳೆ ಹೊಡೆಯುತ್ತಿದ್ದಾರೆ. ಇದ ಕ್ಕೆಲ್ಲಾ ಸರ್ಕಾರದ ಧೋರಣೆ ಕಾರಣವಾಗಿದ್ದು, ಇದು ಅತ್ಯಂತ ನೋವಿನ ಸಂಗತಿ ಎಂದು ಕಿಡಿಕಾರಿದರು.
ಬಳ್ಳಾರಿಯಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ನೀಡಲು ಮುಂದಾಗಿದೆ. ಇದು ಅತೀವ ಬೇಸ ರದ ಸಂಗತಿ. ಸರ್ಕಾರದ ಈ ನಿರ್ಣಯದಿಂದ ಬಳ್ಳಾರಿ ಜಿಲ್ಲೆ ಗಣಿಗಾರಿಕೆಗೆ ಸಿಲುಕಿ ನಾಶವಾಗಲಿದೆ. 1500 ಕೋಟಿ ರೂ. ತೆರಿಗೆ ಪಾವತಿಸದೇ ಕಪ್ಪು ಪಟ್ಟಿಗೆ ಸೇರಿ ಸಿರುವ ಈ ಕಂಪನಿಗೆ ಸರ್ಕಾರ ಎಕರೆಗೆ 1 ಲಕ್ಷ ರೂ. ನಂತೆ ಭೂಮಿ ನೀಡಲು ಮುಂದಾಗಿದೆ. ಆದರೆ ಈ ಭೂಮಿ ಬೆಲೆ ಕಡಿಮೆ ಎಂದರೂ ಎಕರೆಗೆ 2 ಕೋಟಿ ರೂ. ಆಗಲಿದೆ. ಒಟ್ಟಾರೆ ಸರ್ಕಾರದ ಖಜಾನೆ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜೂ.5ಕ್ಕೆ ಪ್ರತಿಭಟನೆ: ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿರುವ ಈ ಕಂಪನಿಗೆ ಯಾವುದೇ ಕಾರಣಕ್ಕೂ ಭೂಮಿ ನೀಡಬಾರದು. ಜೂ.5ರಂದು ಈ ಸಂಬಂಧ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರತರದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಮತ ಯಂತ್ರದ ಬಗ್ಗೆ ವ್ಯಾಪಕ ಅನುಮಾನ ದೇಶದಾದ್ಯಂತ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅದರ ಸಾಚಾತನದ ಬಗ್ಗೆ ತಿಳಿಸಬೇಕು. ಅಲ್ಲದೆ, ಪಕ್ಷಾಂತರ ಕಾಯ್ದೆಗೆ ತಿದ್ದುಪಡಿ ಆಗಲೇ ಬೇಕು. ಜೊತೆಗೆ ಕ್ರಾಂತಿಯೋಗಿ ಬಸವಣ್ಣನವರ 500 ಅಡಿ ಎತ್ತರದ ಪ್ರತಿಮೆಯನ್ನು ರಾಜ್ಯದ ಯಾವು ದಾದರೊಂದು ಸ್ಥಳದಲ್ಲಿ ಸ್ಥಾಪನೆ ಮಾಡಲು ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕ ಬಂದ್
ಮೈಸೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ಕೆಆರ್‍ಎಸ್ ಜಲಾಶಯದಿಂದ ರಾಜ್ಯ ಸರ್ಕಾರ ನೀರು ಹರಿಸಿದರೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ನಾವು ಈ ಪ್ರಾಧಿಕಾರ ರಚನೆಯನ್ನೇ ವಿರೋ ಧಿಸಿದ್ದೆವು. ಇದೀಗ ನೀರು ಹರಿಸಬೇಕೆಂಬ ಪ್ರಾಧಿ ಕಾರದ ಆದೇಶ ಒಪ್ಪಲೇಬಾರದು. ಕೆಆರ್‍ಎಸ್ ನಿಂದ ತಮಿಳುನಾಡಿಗೆ ನೀರು ಹರಿಸಿ ಎಂದು ಆದೇಶಿಸಲು ಇವರು (ಪ್ರಾಧಿಕಾರ) ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಖಂಡಿಸಿ ಸೋಮವಾರ ಕೆಆರ್‍ಎಸ್ ನಲ್ಲಿ ಪ್ರತಿಭಟನೆ ಮಾಡಲು ಉದ್ದೇಶಿಸಿದ್ದು, ಒಂದು ವೇಳೆ ನೀರು ಬಿಟ್ಟಲ್ಲಿ ಇಡೀ ಕರ್ನಾಟಕ ಬಂದ್‍ಗೆ ಕನ್ನಡ ಒಕ್ಕೂಟ ಕರೆ ನೀಡಲಿದೆ.
ಬಿಜೆಪಿಯ 25 ಸಂಸದರು ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ತಲಾ ಒಬ್ಬರು ಹಾಗೂ ಒಬ್ಬರು ಪಕ್ಷೇತರರು ಸೇರಿದಂತೆ 28 ಮಂದಿ ಸಂಸದರು ಪ್ರಧಾನಿಯವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ನೀರು ಬಿಡ ಲಾಗದು ಎಂಬ ಒಕ್ಕೊರಲಿನ ನಿರ್ಣಯ ತಿಳಿಸ ಬೇಕು. ಪ್ರಾಧಿಕಾರ ರದ್ದುಗೊಳಿಸುವಂತೆ ಒತ್ತಡ ಹಾಕಬೇಕು. ಆಗ ಮಾತ್ರ ಇವರು ಗೆದ್ದದ್ದು ಸಾರ್ಥಕ ಎಂದು ಪ್ರತಿಪಾದಿಸಿದರು.