ವಿಜಯನಗರ ಒಂದನೇ ಹಂತದ ಕ್ರೀಡಾಂಗಣ ಅವ್ಯವಸ್ಥೆಗಳ ಆಗರ

ಮೈಸೂರು, ಫೆ.11(ವೈಡಿಎಸ್)- ಮೈಸೂರಿನ ಪ್ರತಿಷ್ಠಿತ ಬಡಾವಣೆ ವಿಜಯನಗರ 1ನೇ ಹಂತದ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿದೆ. ಇಲ್ಲಿ ಸೌಲಭ್ಯಗಳಿಗಿಂತ ಸಮಸ್ಯೆಗಳೇ ಹೆಚ್ಚಿವೆ! `ಮುಡಾ’ ನಿರ್ಮಿಸಿದ ಸ್ಪೋಟ್ರ್ಸ್ ಕಾಂಪ್ಲೆಕ್ಸ್‍ನಲ್ಲಿ ಒಳಾಂಗಣ ಕ್ರೀಡಾಂಗಣ, ಕ್ರಿಕೆಟ್, ಬ್ಯಾಸ್ಕೆಟ್‍ಬಾಲ್, ಟೆನ್ನಿಸ್ ಕೋರ್ಟ್ ಇವೆ. ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಸಮಸ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಕುಡು ಕರ ಹಾವಳಿ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಬರುವ ಕ್ರೀಡಾಪಟುಗಳು, ವಾಯುವಿಹಾರಿಗಳನ್ನು ಮದ್ಯದ ಬಾಟಲಿಗಳು, ಕಸದ ರಾಶಿ, ಆಳೆ ತ್ತರ ಬೆಳೆದ ಗಿಡಗಂಟಿ ಸ್ವಾಗತಿಸುತ್ತವೆ. ವಿಷ ಜಂತುಗಳ ಆವಾಸ ಸ್ಥಾನವಾಗಿರುವುದರಿಂದ ಜನರು ಇಲ್ಲಿ ಭಯದಿಂದಲೇ ಆಟೋಟ, ವಾಯು ವಿಹಾರ ಮಾಡುವಂತಾಗಿದೆ. ಕುಡಿಯುವ ನೀರು, ಶೌಚಾಲಯ ಸಹ ಇಲ್ಲಿಲ್ಲ. ಇತ್ತೀಚೆಗೆ ಕುಡುಕರ ಹಾವಳಿ ಹೆಚ್ಚಾ ಗಿದ್ದು, ಆವರಣ ತುಂಬೆಲ್ಲಾ ಮದ್ಯದ ಬಾಟಲ್ ಗಳೇ ಕಣ್ಣಿಗೆ ಬೀಳುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮೂಲಸೌಕರ್ಯ ಒದಗಿಸಬೇಕು, ಕುಡುಕರ ಹಾವಳಿ ತಪ್ಪಿಸಬೇಕು ಎಂದು ಕ್ರೀಡಾಪಟುಗಳು ಹಾಗೂ ವಾಯು ವಿಹಾರಿಗಳು ಮನವಿ ಮಾಡಿದ್ದಾರೆ.

ಕುಸಿದ ಸ್ಲ್ಯಾಬ್‍ಗಳು: ಕ್ರೀಡಾಂಗಣದಲ್ಲಿ ಮಳೆ ನೀರು ಚರಂಡಿಗೆ ಅಳವಡಿಸಿದ ಕಾಂಕ್ರೀಟ್ ಸ್ಲ್ಯಾಬ್‍ಗಳು ಮುರಿದು ಚರಂಡಿ ಯೊಳಕ್ಕೆ ಕುಸಿದಿವೆ. ವಾಯುವಿಹಾರಿ ವೃದ್ಧರು ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೈತೊಳೆಯುವ ನೀರಿನ ತೊಟ್ಟಿ ಸುತ್ತ ಗಿಡ-ಗಂಟಿಗಳು ಬೆಳೆದು ನಿರುಪಯುಕ್ತವಾಗಿದೆ.

ವಿಜಯನಗರ ನಿವಾಸಿ, ವಾಯುವಿಹಾರಿ ಸುರೇಶ್ ಮಾತನಾಡಿ, ಕ್ರೀಡಾಂಗಣಕ್ಕೆ ನಿತ್ಯ ನೂರಾರು ಕ್ರೀಟಾಪಟುಗಳು, ವಾಯು ವಿಹಾರಿಗಳು ಬರುತ್ತಾರೆ. ಆದರೆ, ಸ್ವಚ್ಛತೆಯಿಲ್ಲ, ದೀಪಗಳು ಉರಿಯುತ್ತಿಲ್ಲ. ಸಂಜೆಯಾದರೆ ಕಗ್ಗತ್ತಲೆ. ಭಯದಲ್ಲೇ ವಾಯುವಿಹಾರ ಮಾಡಬೇಕಾದ ಸ್ಥಿತಿ. ಕೆಲವರು ಮೊಬೈಲ್ ಟಾರ್ಚ್ ಬೆಳಕಲ್ಲೇ ವಾಯುವಿಹಾರ ಮಾಡು ತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಳು ಗಿಡಗಂಟಿ ತೆರವುಗೊಳಿಸಿ, ವಿದ್ಯುತ್ ದೀಪಗಳನ್ನು ಸರಿಪಡಿಸಬೇಕು. ಮುಖ್ಯ ವಾಗಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಕೆಲ ತಿಂಗಳಿಂದ ಇಲ್ಲಿ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಸಂಜೆಯಾಯಿತೆಂದರೆ ಪುಂಡರ ತಂಡ ಕ್ರೀಡಾಂಗಣದಲ್ಲಿ ಗಿಡಗಂಟಿಗಳ ಮಧ್ಯೆ ಕುಳಿತು ಮದ್ಯ ಸೇವಿಸಿ ಕೂಗುತ್ತಿರು ತ್ತಾರೆ. ವಾಯುವಿಹಾರಕ್ಕೆ ಬರುವ ಹೆಂಗಸರು, ಮಕ್ಕಳು ಭಯಪಡುವಂತಾಗಿದೆ ಎಂದು ನಿವಾಸಿ ಚಂದ್ರು ಬೇಸರ ವ್ಯಕ್ತಪಡಿಸಿದರು.