ಮೈಸೂರು ಪಾಲಿಕೆಯಿಂದ ಮತದಾನ ಜಾಗೃತಿ

ಮೈಸೂರು: ಆಗಸ್ಟ್ 31 ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸುವಂತೆ ಇಂದು ಮೈಸೂರಲ್ಲಿ ಜನ ಜಾಗೃತಿ ಮೂಡಿಸಲಾಯಿತು.

ಮೈಸೂರು ಮಹಾನಗರ ಪಾಲಿಕೆಯು ಮತದಾರರ ಶಿಕ್ಷಣ ಮತ್ತು ಚುನಾವಣಾ ಪಾಲ್ಗೊಳ್ಳುವಿಕೆ (ಸ್ವೀಪ್) ಚಟುವಟಿಕೆ ಅಂಗವಾಗಿ ಇಂದು ಜೆಎಲ್‍ಬಿ ರಸ್ತೆಯ ಆರ್‍ಟಿಓ ಸರ್ಕಲ್, ನಂಜುಮಳಿಗೆ ಸರ್ಕಲ್, ವಿವೇಕಾನಂದ ಸರ್ಕಲ್, ಜೆ.ಪಿ. ನಗರದ ಗೊಬ್ಬಳಿ ಮರ ಸರ್ಕಲ್, ಆಗ್ರಹಾರ ಸರ್ಕಲ್, ಬನುಮಯ್ಯ ಕಾಲೇಜು, ಪುರಭವನ ಸೇರಿದಂತೆ ಸುತ್ತಮುತ್ತಲ ಸ್ಥಳಗಳಲ್ಲಿ ಬೀದಿ ನಾಟಕ, ಜಾನಪದ ಗೀತೆ, ಜಾನಪದ ನೃತ್ಯಗಳ ಮೂಲಕ ಕಲಾ ತಂಡಗಳಿಂದ `ಮತದಾನ ಪ್ರತಿಯೊಬ್ಬರ ಹಕ್ಕು, ಮತ ಚಲಾಯಿಸಿ-ಪ್ರಜಾಪ್ರಭುತ್ವ ಉಳಿಸಿ’ ಘೋಷಣೆಯೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲು ಮೈಸೂರು ನಗರದಾದ್ಯಂತ ಸ್ವೀಪ್ ಕಾರ್ಯಕ್ರಮ ನಡೆಸಲಾಗಿದ್ದು, ಯುವಕರೂ ಸೇರಿದಂತೆ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಮನವಿ ಮಾಡಿದ್ದಾರೆ.