ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನೀರಿನ ಪೈಪ್‍ಲೈನ್ ಕಾಮಗಾರಿ: ಸದ್ಯದಲ್ಲೇ ರಸ್ತೆ ರಿಪೇರಿ

ಮೈಸೂರು: ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಪೈಪ್‍ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಒಳಚರಂಡಿ ಪೈಪ್‍ಲೈನ್ ಬದಲಿಸುವ ಕಾಮಗಾರಿ ಬಳಿಕ ಸಮರ್ಪಕವಾಗಿ ಮಣ್ಣು ಮುಚ್ಚಿರಲಿಲ್ಲ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿತ್ತು. ಈ ಸಂಬಂಧ `ಮೈಸೂರು ಮಿತ್ರ’ ಡಿ.2ರ ಸಂಚಿಕೆಯಲ್ಲಿ `ನಾರಾಯಣ ಶಾಸ್ತ್ರಿ ರಸ್ತೆ ಅವ್ಯವಸ್ಥೆಗೆ ಜನರ ಆಕ್ರೋಶ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಥಳೀಯ ಕಾರ್ಪೊರೇಟರ್(23ನೇ ವಾರ್ಡ್) ಪ್ರಮೀಳಾ ಎಂ.ಭರತ್ ಅವರು, ಯುಜಿಡಿ ಮೇನ್ ಪೈಪ್‍ಲೈನ್ ಬದಲಿಸುವ ಸಂದರ್ಭದಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಪೈಪ್‍ಲೈನ್ ಒಡೆದಿತ್ತು. ಇದು ಇಡೀ ವಾರ್ಡ್‍ಗೆ ನೀರಿನ ಸಂಪರ್ಕ ಕಲ್ಪಿಸುವ ಪೈಪ್‍ಲೈನ್ ಸಾರ್ವಜನಿಕ ರಿಗೆ ತೊಂದರೆಯಾಗಬಾರದೆಂದು ತಕ್ಷ ಣಕ್ಕೆ ದುರಸ್ತಿ ಮಾಡಿಸಲಾಗಿತ್ತು.

ಹಾಗೆಯೇ ಈ ಮಾರ್ಗಕ್ಕೆ ಶಾಶ್ವತವಾಗಿ ಪೈಪ್‍ಲೈನ್ ಅಳವಡಿಸಬೇಕಿದ್ದ ಕಾರಣ ಅಗೆದಿದ್ದ ರಸ್ತೆಗೆ ಮಣ್ಣು ತುಂಬಿ, ಡಾಂಬರು ಹಾಕಿರಲಿಲ್ಲ. ಅಲ್ಲದೆ ಅಗತ್ಯ ಪೈಪುಗಳು ಬಂದಿರದ ಕಾರ ಣಕ್ಕೆ ಕಾಮಗಾರಿ ಸ್ವಲ್ಪ ವಿಳಂಬವಾಯಿತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿ ದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹಾಗೆಯೇ ಸಾರ್ವಜನಿಕ ಸೇವೆಯ ಬಗ್ಗೆ ಎಂದಿಗೂ ನಿರ್ಲಕ್ಷ್ಯ ವಹಿಸುವುದಿಲ್ಲ. ಇದೀಗ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲೇ ಪೈಪು ಗಳನ್ನು ಅಳವಡಿಸಿ, ರಸ್ತೆಗೆ ಡಾಂಬರು ಹಾಕಿಸಲಾಗುತ್ತದೆ ಎಂದು ತಿಳಿಸಿದ್ದಾರೆ.