ಬೆಂಗಳೂರು,ಜು.21-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟವನ್ನು ಜೆಡಿಎಸ್ ಬಿಟ್ಟುಕೊಟ್ಟಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಯಾರೇ ಮುಖ್ಯ ಮಂತ್ರಿ ಆದರೂ ನಾವು ನಾಳೆ ಅಧಿವೇಶನಕ್ಕೆ ಬರು ವುದಿಲ್ಲ ಎಂದು ಮುಂಬೈ ನಿಂದ ಅತೃಪ್ತ ಶಾಸಕರು ವೀಡಿಯೊ ರಿಲೀಸ್ ಮಾಡಿ ದ್ದಾರೆ. ಅತೃಪ್ತ ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಗೋಪಾ ಲಯ್ಯ, ಎ.ಹೆಚ್.ವಿಶ್ವನಾಥ್ ಅವರು ವೀಡಿಯೊದಲ್ಲಿ ಮಾತನಾಡಿದ್ದು, ನಮ್ಮ ಸ್ವಾಭಿ ಮಾನಕ್ಕೆ ಧಕ್ಕೆಯಾಗಿರುವುದರಿಂದ ಇಲ್ಲಿಗೆ ಬಂದಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಇಂದು ಎಂಟಿಬಿ ನಾಗರಾಜ್ ಮತ್ತು ನಾರಾಯಣಗೌಡರ ಹುಟ್ಟುಹಬ್ಬವನ್ನು ಆಚರಿ ಸಿದ್ದೇವೆ ಎಂದಿದ್ದಾರೆ. ಎಸ್.ಟಿ.ಸೋಮಶೇಖರ್ ಮಾತನಾಡಿ, ಯಾರೋ ಮುಖ್ಯಮಂತ್ರಿ ಆದರೆ ನಾವು ರಾಜೀನಾಮೆ ವಾಪಸ್ ಪಡೆದು ಅಧಿವೇಶನದಲ್ಲಿ ಭಾಗವಹಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಯಾರೇ ಮುಖ್ಯಮಂತ್ರಿ ಆದರೂ ನಾವು ಅಧಿವೇಶನಕ್ಕೆ ಬರುವುದಿಲ್ಲ. 15 ಶಾಸಕರು ಬದುಕಿದ್ದಾರಾ ಎಂದು ಅಧಿವೇಶನದಲ್ಲಿ ಶಾಸಕರೊಬ್ಬರು ಪ್ರಶ್ನಿಸಿದ್ದಾರೆ. ನಾವಿನ್ನೂ ಸತ್ತಿಲ್ಲ, ಜೀವಂತವಾಗಿದ್ದೇವೆ, ಆರೋಗ್ಯವಾಗಿದ್ದೇವೆ. ನಮ್ಮನ್ನು ಗನ್ ಪಾಯಿಂಟ್‍ನಲ್ಲಿಡಲಾಗಿದೆ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ಆದರೆ ನಾವು ಗನ್ ಪಾಯಿಂಟ್‍ನಲ್ಲಿ ಇಲ್ಲ, ಸ್ವತಂತ್ರವಾಗಿದ್ದೇವೆ. ಯಾವುದೇ ಪದವಿ, ಆಮಿಷಕ್ಕೆ ನಾವು ಬಲಿಯಾಗಿಲ್ಲ. ನಾವು ಇಲ್ಲಿಗೆ ಬರಲು ಕಾರಣವೇನು ಎಂದು ಕಾಂಗ್ರೆಸ್ ಮುಖಂಡರಿಗೂ ಗೊತ್ತಿದೆ ಎಂದಿದ್ದಾರೆ. ಎ.ಹೆಚ್. ವಿಶ್ವನಾಥ್ ಅವರು ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ರಾಜಕಾರಣವೂ ಇಲ್ಲ, ರಾಜಧರ್ಮವೂ ಇಲ್ಲ, ರಾಕ್ಷಸ ರಾಜಕಾರಣ ನಡೆಯುತ್ತಿದೆ. ರಾಜ್ಯದ ರಾಜ ಕಾರಣಕ್ಕೆ ಒಳ್ಳೆಯದಾಗಲಿ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾವು ಬಂದಿದ್ದೇವೆ. ತತ್ವ ಸಿದ್ಧಾಂತಕ್ಕಾಗಿ ರಾಜೀನಾಮೆ ನೀಡಿದ್ದೇವೆಯೇ ಹೊರತು, ಯಾವುದೇ ಆಮಿಷಕ್ಕೊಳಗಾ ಗಿಲ್ಲ ಎಂದರು. ಭೈರತಿ ಬಸವರಾಜ್ ಮಾತನಾಡುತ್ತಾ, ಲೋಕಸಭಾ ಚುನಾವಣೆ ವೇಳೆ ಚುನಾವಣೆ ಮುಗಿದ ನಂತರ ಒಂದು ಕ್ಷಣವು ಸರ್ಕಾರ ಉಳಿಸುವ ಕೆಲಸ ಮಾಡ ಬಾರದು ಎಂದು ಕಾಂಗ್ರೆಸ್‍ನ ಹಿರಿಯ ನಾಯಕರೇ ನಮಗೆ ಹೇಳಿದ್ದರು. ಎಲ್ಲಾ ವಿಷಯ ಗಳನ್ನು ವಿವರವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳುತ್ತೇವೆ. ಕಳೆದ 30 ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತನಾಗಿ ಕಾಂಗ್ರೆಸ್‍ನಲ್ಲಿ ದುಡಿದಿದ್ದೇನೆ. ಯಾವ ದುಡ್ಡಿಗಾಗಿಯೂ ಇಲ್ಲಿಗೆ ಬಂದಿಲ್ಲ. ಸ್ವಾಭಿಮಾನದ ಕಿಚ್ಚು ನಮ್ಮನ್ನು ಕಾಡುತ್ತಿದೆ ಎಂದಿದ್ದಾರೆ.