ಮೈಸೂರು: ಆರು ಲಕ್ಷ ರೈತರಿಗೆ ಸಾಲ ಮನ್ನಾ ಪ್ರಯೋಜನ ವಾಗಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ಯಲ್ಲಿ ನಂಬಿಕೆಯಿಲ್ಲ. ಹೀಗಾಗಿ ಇದು ವರೆಗೆ ಎಷ್ಟು ಜನರಿಗೆ ಸಾಲಮನ್ನಾ ಮಾಡ ಲಾಗಿದೆ? ಸಾಲಮನ್ನಾ ಯೋಜನೆಯಡಿ ಇದುವರೆಗೆ ಸರ್ಕಾರದಿಂದ ರೈತರಿಗೆ ಆಗಿರುವ ಪ್ರಯೋಜನ ಇನ್ನಿತರ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಿ, ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಆಗ್ರಹಿಸಿದೆ.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ, ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಮುಖ್ಯ ಮಂತ್ರಿ ಹೋದಲ್ಲೆಲ್ಲಾ ಸಾಲ ಮನ್ನಾ ಬಗ್ಗೆಯೇ ಹೇಳುತ್ತಾ ಬರುತ್ತಿದ್ದಾರೆ. ಆದರೆ ಬ್ಯಾಂಕ್‍ಗಳು ಸಾಲ ವಸೂಲಿ ಬಗ್ಗೆ ನೋಟೀಸ್ ನೀಡುತ್ತಲೇ ಇವೆ. ರೈತರ ಮೇಲೆ ಮೊಕದ್ದಮೆ ಹೂಡುತ್ತಿವೆ. ಹೊಸ ಸಾಲ ನೀಡಲು ನಿರಾಕರಿಸುತ್ತಿವೆ. ಇದರಿಂದ ಸಿಎಂ ಹೇಳಿಕೆಗಳು ರೈತರಲ್ಲಿ ಗೊಂದಲ ಉಂಟು ಮಾಡಿವೆ ಎಂದು ಆರೋಪಿಸಿದರು.
ಬರ ನಿರ್ವಹಣೆ: ಸರ್ಕಾರ ವಿಫಲ
ಕಳೆದ ಸಾಲಿನಲ್ಲಿ ರಾಜ್ಯದ 156 ತಾಲೂಕುಗಳಲ್ಲಿ ಸಂಪೂರ್ಣ ಬರಗಾಲ. ಜನ-ಜಾನುವಾರುಗಳ ಬವಣೆ ಹೇಳ ತೀರದು. ಈ ವರ್ಷವೂ ಮಳೆ ತಡವಾದ್ದ ರಿಂದ ಬರದ ಛಾಯೆ ಆವರಿಸಿದೆ. ಈಗ ಮಳೆ ಬಿದ್ದರೂ ಹತ್ತಿ, ರಾಗಿ ಇತರೆ ಬೆಳೆ ಗಳನ್ನು ಹಾಕಿದರೂ ಇಳುವರಿ ಕಡಿಮೆ ಯಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಬವಣೆ, ಕೂಲಿ ಗಾಗಿ ಗುಳೆ, ಸಾಲ ಬಾಧೆಯಿಂದ ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಲೇ ಇದೆ. ಬರ ನಿರ್ವಹಣೆಯನ್ನು ಕೇಂದ್ರ, ರಾಜ್ಯ ಸರ್ಕಾರಗಳು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿ ಜನರನ್ನು ಸಂಕಷ್ಟಕ್ಕೆ ದೂಡಿವೆ ಎಂದು ಆರೋಪಿಸಿದರು.
ಜಾಗತಿಕ ತಾಪಮಾನ ಹೆಚ್ಚುತ್ತಲೇ ಇದೆ. ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳ ಕೃಷಿ ಭೂಮಿ ಹೆಚ್ಚು ಹೆಚ್ಚು ಮರುಭೂಮಿಯಾಗುತ್ತಿವೆ. ನದಿ ಮೂಲ ಗಳು ಬತ್ತಿ ಹೋಗುತ್ತಿವೆ. ತುಂಗಾ, ಕಾವೇ ರಿಯ ಒಡಲು ಬರಿದಾಗುತ್ತದೆಂಬ ಆತಂ ಕದ ವರದಿಗಳು ಕೇಳಿ ಬರುತ್ತಿವೆ. ಹೀಗಿ ದ್ದರೂ ಬರಗಾಲವನ್ನು ಶಾಶ್ವತವಾಗಿ ಹೋಗಲಾಡಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇನ್ನಾ ದರೂ ಸರ್ಕಾರ ಬರಗಾಲವನ್ನು ಶಾಶ್ವತ ವಾಗಿ ಹೋಗಲಾಡಿಸುವತ್ತ ದೂರದೃಷ್ಟಿ ಯೊಂದಿಗೆ ಗಂಭೀರ ಪ್ರಯತ್ನ ಮಾಡದಿ ದ್ದರೆ ದೇಶ ಅತ್ಯಂತ ಭೀಕರತೆಯನ್ನು ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಎಂ.ಅಶ್ವಥ್‍ನಾರಾಯಣ ರಾಜೇ ಅರಸ್, ಹೊಸಕೋಟೆ ಬಸವರಾಜು, ನೇತ್ರಾವತಿ, ಮರಂಕಯ್ಯ, ಮಂಡಕಳ್ಳಿ ಮಹೇಶ್ ಉಪಸ್ಥಿತರಿದ್ದರು.