ಯುಜಿಸಿಗೆ 9000 ಪುಟಗಳ ವರದಿ ಸಲ್ಲಿಸಿದ್ದೇವೆ: ಮುಕ್ತ ವಿವಿ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ

Shivalingaiah

ಮೈಸೂರು: 9000 ಪುಟಗಳ ವರದಿಯೊಂದಿಗೆ 32 ಕೋರ್ಸುಗಳಿಗೆ ಮಾನ್ಯತೆ ಕೋರಿ ಯುಜಿಸಿಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಈಗ 17 ಕೋರ್ಸುಗಳನ್ನು ನಡೆಸಲು ಯುಜಿಸಿ ಮಾನ್ಯತೆ ನೀಡಿದೆ. ಉಳಿದ ಕಾರ್ಯಕ್ರಮಗಳಿಗೂ ಅನುಮತಿ ನೀಡುವಂತೆ ಕೋರಿ ನಾವು ಯುಜಿಸಿಗೆ ಮತ್ತೆ ಮನವಿ ಮಾಡು ತ್ತೇವೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ಸ್ಪಷ್ಟಪಡಿಸಿದ್ದಾರೆ.

ನಮ್ಮ ಅವಿರತ ಪ್ರಯತ್ನ ಫಲ ನೀಡಿದೆ. ಈ ಹಿಂದೆ ಮಾಡಿದ ತಪ್ಪನ್ನು ಮುಂದೆಂದೂ ಮಾಡುವುದಿಲ್ಲ. ಯುಜಿಸಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮುಕ್ತ ವಿಶ್ವ ವಿದ್ಯಾನಿಲಯದ ಕೋರ್ಸುಗಳನ್ನು ಮುಂದುವರೆಸಿಕೊಂಡು ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲ್ಪಿಸಲಾಗುವುದು. ಯುಜಿಸಿಯಿಂದ ಮಾನ್ಯತೆ ಪಡೆಯಲು ತಮಗೆ ನೆರವಾದ ಸಂಸದರು, ಶಾಸಕರು, ಸಚಿವರು, ಹಿರಿಯ ಅಧಿಕಾರಿಗಳಿಗೆ ಕೃತಜ್ಞತೆ ಹೇಳಿದ ಕುಲಪತಿಗಳು, ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಪ್ರಕ್ರಿಯೆ ಆರಂಭಿಸಿ, ತರಗತಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ನುಡಿದರು.