ಡಾ.ಬಿ.ಆರ್.ಅಂಬೇಡ್ಕರ್ ಅವರ ಎಲ್ಲಾ ಕಾರ್ಯಸಾಧನೆ ಬಗ್ಗೆ ಬೆಳಕು ಚೆಲ್ಲಬೇಕು

ಮೈಸೂರು,ಡಿ.8(ಪಿಎಂ)- ಡಾ.ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿ ಸೌಲಭ್ಯ ಕಲ್ಪಿಸಿದ್ದರ ಬಗ್ಗೆಯಷ್ಟೇ ಹೆಚ್ಚು ಮಾತನಾಡುತ್ತೇವೆ. ಆದರೆ ಅವರ ಕೊಡುಗೆ ಅಪಾರವಾಗಿದ್ದು, ಅವರ ಎಲ್ಲಾ ಕಾರ್ಯಸಾಧನೆಗಳ ಬಗ್ಗೆಯೂ ಬೆಳಕು ಚೆಲ್ಲಬೇಕು ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.

ಮೈಸೂರಿನ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಕೃಷ್ಣಮೂರ್ತಿಪುರಂನಲ್ಲಿ ನೂತನ ವಾಗಿ ಆರಂಭಿಸಿರುವ ಸಮಾನತೆ ಪ್ರಕಾ ಶನದ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ನೆಚ್ಚಿನ ನಾಯಕರು ಡಾ.ಬಿ. ಆರ್.ಅಂಬೇಡ್ಕರ್. ಅವರ ಕೊಡುಗೆ ಕೇವಲ ಮೀಸಲಾತಿಗಷ್ಟೇ ಸೀಮಿತವಲ್ಲ. ಅವರ ಅಪಾರವಾದ ಕೊಡುಗೆಗಳ ಬಗ್ಗೆ ನಾವು ಹೆಚ್ಚು ಮಾತನಾಡುವುದೇ ಇಲ್ಲ. ಅವರ ಬಹುಮುಖ ಪ್ರತಿಭೆ ಮೇಲೆ ಬೆಳಕು ಚೆಲ್ಲುವ ಅಗತ್ಯವಿದೆ ಎಂದು ತಿಳಿಸಿದರು.

ಮನುಷ್ಯನಿಗೆ ಕೇವಲ ಆರ್ಥಿಕ ಭೋಗ ಗಳೇ ಮುಖ್ಯವಲ್ಲ. ನೈತಿಕ ಹಾಗೂ ಆಧ್ಯಾ ತ್ಮಿಕ ಮೌಲ್ಯಗಳೂ ಇರಬೇಕು. ಪರಸ್ಪರ ಪ್ರೀತಿ-ವಿಶ್ವಾಸ ನೆಲಸಬೇಕು ಎಂಬ ಸಂದೇಶ ವನ್ನು ಅಂಬೇಡ್ಕರ್ ನೀಡಿದ್ದಾರೆ. ಸ್ವಾಭಿ ಮಾನ, ಘನತೆ ಹಾಗೂ ಗೌರವ ಎಷ್ಟು ಮುಖ್ಯ ಎಂಬಿತ್ಯಾದಿ ಬಗ್ಗೆಯೂ ಡಾ.ಅಂಬೇಡ್ಕರ್ ಅರ್ಥಪೂರ್ಣವಾದ ಸಂದೇಶ ನೀಡಿ ದ್ದಾರೆ. 120 ವರ್ಷಗಳ ಹಿಂದೆ ಅಸ್ಪøಶ್ಯತೆಯ ನೋವಿನ ನಡುವೆ ಅವರ ಪಾಡು ಹೇಗಿತ್ತು ಎಂಬುದನ್ನು ನಾವು ಯೋಚನೆ ಮಾಡ ಬೇಕು. ಆ ಸಂದರ್ಭದಲ್ಲಿ ಅವರು ಅಗ್ನಿ ಜ್ವಾಲೆಯಿಂದ ಎದ್ದು ಬಂದಂತೆ ಹೋರಾಟ ನಡೆಸಿದ್ದರು ಎಂದು ಸ್ಮರಿಸಿದರು.

ಡಾ.ಅಂಬೇಡ್ಕರ್ ಅವರು ಪ್ರತಿಪಾದಿ ಸಿದ ಸಮಾನತೆ ಪ್ರಸ್ತುತ ದೇಶದಲ್ಲಿ ನೆಲೆಸಿ ದೆಯೇ? ಎಂದು ಆತ್ಮಾವಲೋಕನ ಮಾಡಿ ಕೊಳ್ಳಬೇಕಿದೆ. ಸಮಾನತೆ ಅನುಭವಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇರಬೇಕು ಎಂದು ಅಂಬೇಡ್ಕರ್ ಅವರು ಹೇಳಿದ್ದು, ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಸ್ಪøಶ್ಯತೆ ನಮ್ಮ ಸಮಾಜದ ದೊಡ್ಡ ಕಳಂಕ. ಇದು ಇಂದಿಗೂ ಜೀವಂತವಾಗಿದೆ. ಜಗ ತ್ತಿನ ಅನೇಕ ರಾಷ್ಟ್ರಗಳಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಅಸ್ಪøಶ್ಯತೆ ಆಚರಣೆಯಲ್ಲಿದೆ ಎಂದು ಅವರು ವಿಷಾದಿಸಿದರು.

ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆ ಪ್ರಕಾಶಕ ಟಿ.ಎಸ್.ಛಾಯಾಪತಿ ಮಾತನಾಡಿ, ಕೇವಲ ಹಣಕ್ಕಾಗಿಯೇ ಹೆಚ್ಚು ಪ್ರಕಾಶನ ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಆದರ್ಶ ಹಾಗೂ ಧ್ಯೇಯದೊಂದಿಗೆ ಸಮಾನತೆ ಪ್ರಕಾಶ ಅಸ್ತಿತ್ವಕ್ಕೆ ತಂದಿರುವುದು ಸಂತಸದ ಸಂಗತಿ. ಪ್ರಕಾಶಕ ಎಂದರೆ ಕೇವಲ ಪ್ರಕಟಣೆಗೆ ಮಾತ್ರ ಸೀಮಿತಗೊಳ್ಳದೇ, ಬರವಣಿಗೆಯ ಓರೆಕೋರೆಗಳನ್ನು ಅವಲೋಕಿಸಿ ಅಚ್ಚುಕಟ್ಟ ವಾಗಿ ಕೃತಿ ಮೂಡಿಬರಲು ಶ್ರಮಿಸುವ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ಪ್ರಸ್ತುತ ವಿದ್ಯುನ್ಮಾನ ಸಾಧನಗಳು ಹಾಗೂ ಅವುಗಳಲ್ಲಿನ ಸಾಮಾಜಿಕ ತಾಣಗಳಿಂ ದಾಗಿ ಪುಸ್ತಕ ಓದುವ ಸಂಸ್ಕøತಿ ಮರೆ ಯಾಗುತ್ತಿದೆ. ವಿದ್ಯುನ್ಮಾನ ಸಾಧನಗಳ ಬಳಕೆ ನಮ್ಮನ್ನು ವಿನಾಶದ ಹಂಚಿಕೆ ದೂಡುವಂತೆ ಇರಬಾರದು ಎಂದರು.

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್ ಮಾತನಾಡಿ, ಪ್ರಕಾಶನ ಸಂಸ್ಥೆ ಗಳು ಜ್ಞಾನ ಪ್ರಸಾರದ ಕೇಂದ್ರಗಳು. ಈ ಹಿಂದೆ ಮೈಸೂರಿನಲ್ಲಿ ಅನೇಕ ಪ್ರತಿಷ್ಠಿತ ಪ್ರಕಾಶನಗಳಿದ್ದವು. ಆದರೆ ಈಗ ಕೆಲವು ಸಂಸ್ಥೆಗಳು ನಿಂತು ಹೋಗಿವೆ. ಸಮಾನತೆ, ಭ್ರಾತೃತ್ವ, ವೈಚಾರಿಕ ಚಿಂತನೆಯ ಹಿನ್ನೆ ಲೆಯ ಬರೆವಣಿಗೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸಮಾನತೆ ಪ್ರಕಾಶನ ಅಸ್ತಿತ್ವಕ್ಕೆ ತಂದಿ ರುವುದು ಹೆಮ್ಮೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವಮೈತ್ರಿ ಬುದ್ಧ ವಿಹಾರದ ಪೂಜ್ಯ ಭಂತೆ ಕಲ್ಯಾಣಸಿರಿ ಉಪಸ್ಥಿತರಿದ್ದರು. ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಎಂಸಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇ ಗೌಡ, ಬಿಜೆಪಿ ಮುಖಂಡ ಹೆಚ್.ವಿ. ರಾಜೀವ್, ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರ ಶೇಖರ್, ರಂಗಕರ್ಮಿ ರಾಜಶೇಖರ ಕದಂಬ, ಸಮಾನತೆ ಪ್ರಕಾಶನದ ಪ್ರಕಾಶಕ ಭರತ್ ರಾಮಸ್ವಾಮಿ ಮತ್ತಿತರರು ಹಾಜರಿದ್ದರು.