ನಾಳೆಯಿಂದ ರಂಗಾಯಣದಲ್ಲಿ `ಹೌಸ್ ಆಫ್ ಬರ್ನಾಡಾ ಅಲ್ಬಾ’ ವಾರಾಂತ್ಯ ನಾಟಕ

ಮೈಸೂರು,ಜು.19(ಆರ್‍ಕೆ)-ಮೈಸೂರಿನ ರಂಗಾಯಣದಲ್ಲಿ ಜು.21ರಿಂದ ಮೈಸೂರಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಫೆಡ್ರಿಕೋ ಗಾರ್ಸಿಯ ಲೋರ್ಕಾ ವಿರಚಿತ `ಹೌಸ್ ಆಫ್ ಬರ್ನಾಡಾ ಅಲ್ಬಾ’ ವಾರಾಂತ್ಯ ನಾಟಕ ಪ್ರದರ್ಶನ ನಡೆಯಲಿದೆ.

ಮೈಸೂರಿನ ರಂಗಾಯಣದ ಕುಟೀರದಲ್ಲಿ ಇಂದು ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಂಗಾ ಯಣ ನಿರ್ದೇಶಕರಾದ ಭಾಗೀರಥಿ ಬಾಯಿ ಅವರು, ಇದೇ ಮೊದಲ ಭಾರಿಗೆ ರಂಗಾಯಣದಲ್ಲಿ ಮಹಿಳಾ ಪಾತ್ರಧಾರಿಗಳಾಧಾರಿತ `ಹೌಸ್ ಆಫ್ ಬರ್ನಾಡಾ ಅಲ್ಬಾ’ ನಾಟಕ ಪ್ರದರ್ಶನವನ್ನು ಪ್ರತೀ ಭಾನುವಾರ ಸಂಜೆ 6.30 ಗಂಟೆಗೆ ಭೂಮಿಗೀತ ರಂಗಮಂದಿರ ದಲ್ಲಿ ಏರ್ಪಡಿಸಲಾಗಿದೆ ಎಂದರು.

ಸ್ಪ್ಯಾನಿಷ್ ಕವಿ ಫೆಡ್ರಿಕೋ ಗಾರ್ಸಿಯ ಲೋರ್ಕಾ ಅವರು ರಚಿಸಿರುವ ಹೌಸ್ ಆಫ್ ಬರ್ನಾಡಾ ಅಲ್ಬಾ ನಾಟಕವನ್ನು ಜೆಎನ್ ಕೌಸಲ ಅವರು ಹಿಂದಿಗೆ ರೂಪಾಂ ತರ ಮಾಡಿದ್ದು, ಚಂದ್ರಕಾಂತ ಕುಸನೂರ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ರಂಗಾಯಣ ನಿರ್ದೇ ಶಕರಾದ ರಂಗಕರ್ಮಿ ಭಾಗೀರಥಿ ಬಾಯಿ ನಿರ್ದೇ ಶಿಸಿರುವ ನಾಟಕಕ್ಕೆ ರಾಮಚಂದ್ರ ಜಿ.ಹಡಪದ ಸಂಗೀತ ನೀಡಿದ್ದಾರೆ. ರಂಗಭೂಮಿ ಕಲಾವಿದರಾದ ಭಾಗೀರಥಿಬಾಯಿ, ಎಂ.ಎಸ್.ಗೀತಾ, ಡಾ.ಆರ್. ಪೂರ್ಣಿಮಾ, ಧನ್ಯಾ ಗಾಣಿಗ, ಗೀತಾ ಬನೋಶಿ, ಗಿರಿಜಾ ಅರುಣ್, ಜಯಶ್ರೀ ಇಡ್ಕಿದು, ಬಿಎನ್. ಶಶಿಕಲಾ, ಆರ್.ರಂಜಿತಾ, ಸರೋಜ ಹೆಗಡೆ, ಪ್ರಮೀಳಾ ಬೆಂಗ್ರೆ, ಶಿಲ್ಪ ಎಸ್.ಶೆಟ್ಟಿ, ಒ.ಸುಭಗೌರಿ, ಧನ್ಯಾ ಗಾಣಿಗ, ಕಾವ್ಯ ಕೊಟ್ಟಾರಿ, ಸೌಮ್ಯ ಪಾಣಾಜೆ ಹಾಗೂ ಸಿ.ಕೆ.ಪಲ್ಲವಿ ಅವರು ರಂಗಭೂಮಿಕೆ ಯಲ್ಲಿ ಪಾತ್ರ ನಿರ್ವಹಿಸುವರು. ರಂಗದ ಹಿಂದೆ ಹೆಚ್.ಕೆ. ದ್ವಾರಕಾನಾಥ (ರಂಗ ವಿನ್ಯಾಸ), ರಾಮಚಂದ್ರ ಜಿ. ಹಡಪದ (ಸಂಗೀತ ವಿನ್ಯಾಸ), ಸಂತೋಷಕುಮಾರ್ ಕುಸನೂರ (ವಸ್ತ್ರ ವಿನ್ಯಾಸ), ಕೃಷ್ಣಕುಮಾರ್ ನಾರ್ಣ ಕಜೆ (ಬೆಳಕಿನ ವಿನ್ಯಾಸ), ವಿನಾಯಕ ಭಟ್ ಹಾಸ ಣಗಿ (ರಂಗನಿರ್ವಹಣೆ)ಯಲ್ಲಿದ್ದಾರೆ.

ಬಂಧನದಲ್ಲಿರಿಸಿದ ಭಾವನೆಗಳನ್ನು ಮೀರಿ ಹೋಗ ಬೇಕಾದ ಸ್ತ್ರೀಸಂವೇದನೆ, ಎಲ್ಲರ ಮನೆಯಲ್ಲಿರುವ ತಳಮಳಗಳು ಈ ನಾಟಕದಲ್ಲಿ ಬಿಂಬಿತವಾಗಿದೆ. ಕೇವಲ ಹೆಣ್ಣು ಮಕ್ಕಳೇ ಇರುವ ಕಟ್ಟುಪಾಡಿನ ಕುಟುಂಬದಲ್ಲಿ ಸಂಪ್ರದಾಯಗಳನ್ನು ಪಾಲಿಸಿದಲ್ಲಿ ಉಂಟಾಗುವ ಅನಾಹುತಗಳ ಬಗ್ಗೆಯೂ ಅರ್ಥಗರ್ಭಿತವಾಗಿ ವಿವರಿ ಸಲಾಗಿದೆ. 20 ಮಂದಿ ಹೆಣ್ಣು ಮಕ್ಕಳು, ಮಹಿಳೆಯರೇ ಅಭಿನಯಿಸಿರುವ `ಹೌಸ್ ಆಫ್ ಬರ್ನಾಡಾ ಅಲ್ಬಾ’ ನಾಟಕದ ಪೋಸ್ಟರ್‍ಗಳನ್ನು ಭಾಗೀರಥಿ ಭಾಯಿ ಅವರು ಇದೇ ಸಂದರ್ಭ ಬಿಡುಗಡೆಗೊಳಿಸಿದರು. ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿ ಕಾರ್ಜುನಸ್ವಾಮಿ, ಡಾ.ಆರ್.ಪೂರ್ಣಿಮಾ, ಹೆಚ್.ಕೆ. ದ್ವಾರಕಾನಾಥ, ರಾಮಚಂದ್ರ. ಜಿ.ಹಡಪದ, ವಿನಾ ಯಕ ಭಟ್ ಹಾಸಣಗಿ ಹಾಗೂ ಇತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.