ಪರಿಸರಕ್ಕೆ ಪೂರಕವಾದ ಚಟುವಟಿಕೆಗೆ ಒತ್ತು ನೀಡದೇ ಪೂಜೆ ಮಾಡಿದರೆ ಏನು ಪ್ರಯೋಜನ?

ಮೈಸೂರು: ಭಾರತ ಸಂವಿಧಾನ ವೈಜ್ಞಾನಿಕ ಮನೋಭಾವ ಎತ್ತಿ ಹಿಡಿದಿದ್ದರೆ, ಆಡಳಿತ ವರ್ಗ ಮಳೆಗಾಗಿ ದೇವಾಲಯಗಳಲ್ಲಿ ಪೂಜೆ ಮಾಡಿಸಲು ಮುಂದಾಗಿದ್ದು, ಪರಿಸರಕ್ಕೆ ಪೂರಕ ಚಟು ವಟಿಕೆಗೆ ಒತ್ತು ನೀಡದೇ ಪೂಜೆ ಮಾಡಿಸಿ ದರೆ ಏನು ಪ್ರಯೋಜನ? ಎಂದು ನಿವೃತ್ತ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ವಿಜಯನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ದೀನಬಂಧು ಚಾರಿಟಬಲ್ ಟ್ರಸ್ಟ್ ವತಿ ಯಿಂದ ಕೊಡಗು ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ 4 ದಿನ ಗಳ ಪ್ರೇರಣಾ ಶಿಬಿರ `ಸ್ಫೂರ್ತಿ-2019’ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತ ನಾಡಿದ ಅವರು, ವೈಜ್ಞಾನಿಕ ಚಿಂತನೆಯ ಮಹತ್ವ ಅರಿತುಕೊಳ್ಳಬೇಕಿದ್ದು, ಪರಿಸರಕ್ಕೆ ಪೂರಕ ವಾದ ಚಟುವಟಿಕೆಗಳನ್ನು ಮನುಷ್ಯ ಅಳ ವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಈ 4 ದಿನಗಳ ತರಬೇತಿಯನ್ನು ಶಿಬಿ ರಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಅನುಭವಕ್ಕಾಗಿ ಸ್ವಂತ ಸ್ಥಳ ಬಿಟ್ಟು ಹೊರ ಜಗತ್ತಿಗೂ ತೆರೆದುಕೊಳ್ಳಬೇಕು. ಅದಕ್ಕೆ ಇಂದಿನ ಈ ಶಿಬಿರ ಅವಕಾಶ ಕಲ್ಪಿಸಿದೆ. ಕೊಡಗು ರಾಜರ ಆಳ್ವಿಕೆಯಲ್ಲಿ ಇದ್ದಾಗ ಅಲ್ಲಿಂದ ಕೊಡವರು ಹೊರ ಬರುತ್ತಿರ ಲಿಲ್ಲ. ಬ್ರಿಟಿಷರು ಬಂದ ಬಳಿಕ ಹೊರ ಜಗತ್ತನ್ನು ಪ್ರವೇಶಿಸಿದ ಕೊಡವರು ಸೇನೆ, ಪೊಲೀಸ್ ವ್ಯವಸ್ಥೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ ತಮ್ಮ ಛಾಪು ಮೂಡಿಸಿದರು ಎಂದು ತಿಳಿಸಿದರು.

ದೇಶ ಸಾಕಷ್ಟು ಸುಧಾರಣೆ ಕಂಡಿದ್ದು, ಬಡವ-ಶ್ರೀಮಂತ ಮತ್ತು ಪುರುಷ-ಮಹಿಳೆ ಎಂಬ ಭೇದಭಾವವಿಲ್ಲದೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಮುಖ್ಯವಾಹಿನಿಗೆ ಬರಲು ವಿಶೇಷ ಒತ್ತು ನೀಡಲಾಗಿದೆ. ಜನಸಂಖ್ಯೆ ಹೆಚ್ಚಳದಿಂದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಕೂಡ ಹೆಚ್ಚಾ ಗಿದೆ. ಪ್ರಾದೇಶಿಕ ಭಾಷೆಯಾದ ಕನ್ನಡ ಕಲಿಕೆ ಅತ್ಯಂತ ಮುಖ್ಯವಾಗಿದೆ. ಜೊತೆಗೆ ಇಂಗ್ಲಿಷ್ ಭಾಷೆ ನೆರೆ ರಾಜ್ಯಗಳು ಸೇರಿ ದಂತೆ ಪ್ರಪಂಚದ ಸಂಪರ್ಕಕ್ಕೆ ಅಗತ್ಯವಾ ಗಿದೆ. ಅಲ್ಲದೆ, ಹಿಂದಿ ದೇಶದ ಬಹು ಪ್ರದೇಶದಲ್ಲಿ ಮಾತನಾಡುವ ಭಾಷೆ ಯಾಗಿದೆಯಲ್ಲದೆ, ಸೇನೆಯಲ್ಲಿ ಹೆಚ್ಚು ಬಳಕೆಯಲ್ಲಿದೆ. ಹೀಗಾಗಿ ಈ ಮೂರು ಭಾಷೆ ಗಳ ಜ್ಞಾನಕ್ಕೆ ಒತ್ತು ನೀಡಲು ವಿದ್ಯಾರ್ಥಿ ಗಳು ಮುಂದಾಬೇಕು ಎಂದರು.

ಶಿಸ್ತು ರೂಢಿಸಿಕೊಳ್ಳದಿದ್ದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಶಿಸ್ತು ಎಂಬುದು ಸುಖಾಸುಮ್ಮನೆ ಬರುವುದಲ್ಲ. ಅದಕ್ಕೆ ಕಠಿಣ ಅಭ್ಯಾಸ ಮಾಡಬೇಕಾಗುತ್ತದೆ. ಜ್ಞಾನ ಎಂಬುದು ಕೇವಲ ತರಗತಿ ಕೊಠಡಿಯಲ್ಲಿ ಮಾತ್ರ ಇಲ್ಲ. ವಿಸ್ತøತ ಜ್ಞಾನ ಸಂಪಾದನೆ ಗಾಗಿ ನಾವು ಅಧ್ಯಯನಶೀಲರಾಬೇಕು. ಕಠಿಣ ಪರಿಶ್ರಮ, ಪ್ರಾಮಾಣಿಕತೆ ನಿಮ್ಮ ವ್ಯಕ್ತಿತ್ವ ದಲ್ಲಿ ಮೂಡಿಬಂದರೆ ಜೀವನ ಸಾರ್ಥಕ ವಾಗುತ್ತದೆ ಎಂದು ಶಿಬಿರಾರ್ಥಿಗಳಿಗೆ ತಿಳಿ ಹೇಳಿದರು. ಟ್ರಸ್ಟ್ ಅಧ್ಯಕ್ಷ ಕೆ.ಎ.ಕಾರ್ಯಪ್ಪ, ಕಾರ್ಯದರ್ಶಿ ಪಿ.ಎ.ಜಯಕುಮಾರ್, ಟ್ರಸ್ಟಿಗಳಾದ ಸಿ.ಜಿ.ಮಾದಪ್ಪ, ಕೆ.ದಿಚು ಕರುಂಬಯ್ಯ, ರೀನಾ ಜಯಕುಮಾರ್, ಶಾಂತಿ ಗಣಪತಿ, ಅನಿಲಾ ಮಾದಪ್ಪ, ಚಿಮ್ಮಿ ನಂಜಪ್ಪ ಮತ್ತಿತರರು ಗಣ್ಯರು ಸೇರಿದಂತೆ ಶಿಬಿರಾರ್ಥಿಗಳು ಹಾಜರಿದ್ದರು.