ನೋ ಪಾರ್ಕಿಂಗ್‍ನಲ್ಲಿ ನಿಲ್ಲುವ ವಾಹನಗಳಿಗೆ ವ್ಹೀಲ್ ಲಾಕ್ ಕಾರ್ಯಾಚರಣೆ ಆರಂಭ

ಮೈಸೂರು: ಸಂಚಾರ ನಿಯಮ ಪಾಲನೆಯನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲು ಮುಂದಾಗಿ ರುವ ಪೊಲೀಸರು, ಮೈಸೂರಲ್ಲಿ ನೋ ಪಾರ್ಕಿಂಗ್ ನಲ್ಲಿ ನಿಂತಿರುವ ವಾಹನಗಳಿಗೆ ವ್ಹೀಲ್ ಲಾಕ್ ಮಾಡುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ನಗರದ ಆಯ್ದ ಭಾಗಗಳಲ್ಲಿ ನೋ ಪಾರ್ಕಿಂಗ್ ಹಾಗೂ ವಿಶೇಷಚೇತನರ ವಾಹನ ನಿಲುಗಡೆ ಫಲಕಗಳನ್ನು ಅಳವಡಿ ಸಲಾಗಿದೆ. ಬೋರ್ಡ್ ಇದ್ದಾಗ್ಯೂ ಕೆಲ ವರು ನೋ ಪಾರ್ಕಿಂಗ್ ಸ್ಥಳದಲ್ಲೇ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದರಿಂದ ಈ ಹಿಂದೆ ಟೈಗರ್ ವಾಹನ ಕಾರ್ಯಾ ಚರಣೆ ಮೂಲಕ ಠಾಣೆಗೆ ಸಾಗಿಸಿ, ದಂಡ ವಸೂಲಿ ಮಾಡುವ ಪದ್ಧತಿಯನ್ನು ಜಾರಿಗೆ ತರಲಾಗಿತ್ತು.

ಅದೂ ದುರುಪಯೋಗವಾಗುತ್ತಿದೆ ಎಂಬ ಕಾರಣಕ್ಕೆ ನೂತನ ಸಂಚಾರ ಎಸಿಪಿ ಜಿ.ಎನ್.ಮೋಹನ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರ ನಿರ್ದೇ ಶನದಂತೆ ವ್ಹೀಲ್ ಲಾಕ್ ಕಾರ್ಯಾಚರಣೆ ಯನ್ನು ಜಾರಿಗೆ ತಂದಿದ್ದಾರೆ.
ಮೈಸೂರಿನ ದೇವರಾಜ, ಕೃಷ್ಣರಾಜ, ನರಸಿಂಹರಾಜ, ಸಿದ್ದಾರ್ಥನಗರ, ವಿವಿ ಪುರಂ ಹಾಗೂ ಕುವೆಂಪುನಗರ ಸಂಚಾರ ಠಾಣಾ ಪೊಲೀಸರು ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನ ಹಾಗೂ ಕಾರು ಗಳಿಗೆ ವ್ಹೀಲ್ ಲಾಕ್ ಮಾಡುತ್ತಿದ್ದಾರೆ.

ಲಾಕ್ ಮಾಡಿದ ವಾಹನದಲ್ಲಿ ಠಾಣೆಯ ಹೆಸರು, ಫೋನ್ ನಂಬರ್ ಸಂಪರ್ಕಿಸಬೇಕಾದ ಸಿಬ್ಬಂದಿ ಹೆಸರು ಇತ್ಯಾದಿ ಮಾಹಿತಿಯನ್ನು ನಮೂದಿಸಿ ರುತ್ತಾರೆ. ತಕ್ಷಣವೇ ಹೋಗಿ ದಂಡ ಪಾವತಿಸಿದರೆ ವಾಹನದ ಲಾಕ್ ತೆಗೆದು ದಾಖಲಾತಿ ಪರಿಶೀಲಿಸಿ ಬಿಡಲಾಗುತ್ತದೆ. ಒಂದು ವೇಳೆ ಸಂಜೆವರೆಗೂ ಮಾಲೀಕರು ಬಾರದಿದ್ದಲ್ಲಿ ಸಂಬಂಧಪಟ್ಟ ಪೊಲೀಸರು ವಾಹನವನ್ನು ತಂದು ಠಾಣೆಯಲ್ಲಿರಿಸುತ್ತಾರೆ.

ನಂತರ ಬಂದರೆ ನಿಯಮ ಉಲ್ಲಂಘನೆ ದಂಡದ ಜೊತೆಗೆ ವಾಹನ ಲಿಫ್ಟ್ ಮಾಡಿ ದ್ದಕ್ಕೆ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ಪ್ರತೀ ದಿನ ಒಂದೊಂದು ಸ್ಟೇಷನ್‍ನಲ್ಲಿ 10ರಿಂದ 20 ವಾಹನಗಳಿಗೆ ವ್ಹೀಲ್ ಲಾಕ್ ಮಾಡಲಾಗುತ್ತಿದೆ. ಸಾರ್ವಜನಿಕರು ರಸ್ತೆಯಲ್ಲಿ ವಾಹನ ನಿಲ್ಲಿಸುವಾಗ ನೋ ಪಾರ್ಕಿಂಗ್ ಬೋರ್ಡ್ ಅನ್ನು ಗಮನಿಸಿದಲ್ಲಿ ದಂಡ ಪಾವತಿ ಸುವುದರಿಂದ ತಪ್ಪಿಸಿಕೊಳ್ಳಬಹುದಲ್ಲದೆ, ಉಂಟಾ ಗುವ ತೊಂದರೆಯಿಂದ ಪಾರಾಗಬಹುದು.