7ನೇ ಹೊಸಕೋಟೆಯಲ್ಲಿ ಕಾಡಾನೆ ಹಾವಳಿ

ಸುಂಟಿಕೊಪ್ಪ: ಹಲವು ದಿನಗಳಿಂದ 7ನೇ ಹೊಸಕೋಟೆ ಗ್ರಾಮದಲ್ಲಿ 23 ಕಾಡಾನೆಗಳು ತೋಟಗಳಲ್ಲಿ ಬೀಡು ಬಿಟ್ಟಿದ್ದು, ಕಾಫಿ, ಕರಿಮೆಣಸು ತೋಟಗಳನ್ನು ದ್ವಂಸಗೊಳಿಸಿ ಭಾರಿ ಪ್ರಮಾಣದಲ್ಲಿ ತೋಟದ ಮಾಲೀಕರಿಗೆ ನಷ್ಟಪಡಿಸಿರುವ ಬಗ್ಗೆ ವರದಿಯಾಗಿದೆ
7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಕೆ.ಎ.ತಿಮ್ಮಯ್ಯ ಎಂಬುವವರಿಗೆ ಸೇರಿದ ಚಿಣ್ಣಿÉ ಎಸ್ಟೇಟಿನ ಕಾಫಿ ತೋಟಕ್ಕೆ ನುಗ್ಗಿದ 23 ಕಾಡಾನೆಗಳ ಹಿಂಡು ಕಾಫಿ ಹಣ್ಣುಗಳನ್ನು ತಿಂದು ಅಲ್ಲೇ ಲದ್ದಿಗಳನ್ನು ಹಾಕಿ ಕಾಫಿ, ಕಾಳುಮೆಣಸು ಗಿಡ ಗಳನ್ನು ದ್ವಂಸಗೊಳಿಸಿದ್ದು ಅಂದಾಜು ಸುಮಾರು ರೂ.70 ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ನಿರಂತರವಾಗಿ ಈ ಭಾಗದ ಸುತ್ತಮುತ್ತಲಿನ ತೋಟಗಳಲ್ಲಿ ರಾತ್ರಿ ಹಗಲು ವೇಳೆಯಲ್ಲಿಯೇ ಕಾಡಾನೆಗಳು ಕಂಡು ಬರುತ್ತಿದ್ದು ಸಾರ್ವಜನಿಕರು ಶಾಲೆಗೆ ತೆರಳುವ ಮಕ್ಕಳು ಮನೆಯಿಂದ ಹೊರ ಬರುವುದಕ್ಕೂ ಭಯಪಡುವಂತ್ತಾಗಿದೆ. ಕೂಡಲೇ ಇದಕ್ಕೆ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗೆÉ ಓಡಿಸುವಂತೆ ತೋಟ ಮಾಲೀಕರು, ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.