ಬಿಜೆಪಿ ನಾಯಕರಲ್ಲಿ ಭಿನ್ನಮತವಿಲ್ಲ

ಮೈಸೂರು: ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಮತವಿಲ್ಲ. ರಾಜ್ಯದಲ್ಲಿ ಬಿಜೆಪಿ ಸ್ಥಿರ ಹಾಗೂ ಅಭಿವೃದ್ಧಿ ಪರ ಸರ್ಕಾರ ನೀಡಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಾಮುಂಡಿಬೆಟ್ಟಕ್ಕೆ ತೆರಳಲು ಮೈಸೂರಿಗೆ ಆಗಮಿಸಿದ್ದ ಅವರು ಬುಧವಾರ ಪತ್ರಕರ್ತ ರೊಂದಿಗೆ ಮಾತನಾಡಿ, ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ರಾಜ್ಯಕ್ಕೆ ಒಳ್ಳೆಯದಾಗ ಲೆಂದು ಪ್ರಾರ್ಥಿಸಿದ್ದೇನೆ. ರಾಜ್ಯಕ್ಕೆ ಮಳೆ ಬೆಳೆ ಸಮೃದ್ಧಿಯಾಗಲೆಂದು ಪೂಜೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಒಳಿ ತಾಗಲಿದೆ ಎಂಬ ನಂಬಿಕೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 104 ಸ್ಥಾನ ಬಂದಿತ್ತು. 78 ಸ್ಥಾನ ಪಡೆದಿದ್ದ ಕಾಂಗ್ರೆಸ್ ಅಧಿಕಾರದ ಹಪಾಹಪಿಗಾಗಿ ಜೆಡಿಎಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಬರುವ ದಿನಗಳಲ್ಲಿ ಬಿಜೆಪಿ ಸರ್ಕಾರ ರೈತರು, ಮಹಿಳೆಯರು, ಯುವಕರಿಗೆ ಒಳಿತು ಮಾಡುವ ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತದೆ. ಇನ್ನೊಂದು ತಿಂಗಳಲ್ಲಿ ಬಿಜೆಪಿ ಸರ್ಕಾರ ಒಂದು ಹಂತಕ್ಕೆ ಬರಲಿದೆ. ನಮ್ಮ ಮೊದಲ ಆದ್ಯತೆ ರೈತರ ಸಾಲ ಮನ್ನಾ ಬಗ್ಗೆ ಚರ್ಚೆ ನಡೆಸುವುದು. ಕೊಟ್ಟ ಮಾತಿ ನಂತೆ ನಡೆದುಕೊಳ್ಳುವ ಬಿ.ಎಸ್ ಯಡಿಯೂರಪ್ಪ ಹೈಕಮಾಂಡ್ ಜೊತೆ ಚರ್ಚಿಸಿ ಸಂಪುಟ ರಚನೆ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಅಸಮಾ ಧಾನ ಇಲ್ಲ. ಆರ್‍ಎಸ್‍ಎಸ್‍ನಿಂದ ಸಲಹೆ ಮಾತ್ರ ಪಡೆಯುತ್ತೇವೆ. ಸ್ಪೀಕರ್ ಬದಲಾ ವಣೆ ಬಗ್ಗೆ ನಾಯಕರ ಜತೆ ಕುಳಿತು ಚರ್ಚೆ ಮಾಡುತ್ತೇವೆ. ಆ ನಂತರ ತೀರ್ಮಾನ ಮಾಡಲಾಗುತ್ತದೆ ಎಂದರು.

ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಆಗಿರಲಿಲ್ಲ. ಅದು ದುಶ್ಮನ್ ಸರ್ಕಾರ ಆಗಿತ್ತು. ಡಿ.ಕೆ.ಶಿವಕುಮಾರ್ ಮಾಧ್ಯಮಗಳ ಮುಂದೆ ಮಾತ್ರ ಟ್ರಬಲ್ ಶೂಟರ್. ಜನರೇ ಸ್ವಯಂ ಪ್ರೇರಣೆಯಿಂದ ಟ್ರಬಲ್ ಶೂಟರ್ ಅಂದಾಗ ಮಾತ್ರ ಲೀಡರ್ ಎಂದು ಒಪ್ಪಿಕೊಳ್ಳ ಬಹುದು. ಇವರೆಲ್ಲಾ ಸ್ವಯಂ ಘೋಷಿತ ಲೀಡರ್‍ಗಳು ಎಂದು ಲೇವಡಿ ಮಾಡಿದರು.

ಅತೃಪ್ತ ಶಾಸಕರನ್ನು ಬಿಜೆಪಿಗೆ ಆಹ್ವಾನಿ ಸುತ್ತೇವೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಆದರೆ ಯಾರನ್ನೂ ಬಲವಂತ ಮಾಡಿ ಕರೆಯಲ್ಲ. ಬಿಜೆಪಿ ಸರ್ಕಾರ ಸ್ಥಿರ ಸರ್ಕಾರವಾಗಿ ನಿಲ್ಲಲಿದೆ. ರಾಜಕೀಯವೇ ಕುತಂತ್ರ. ಈ ತಂತ್ರಗಾರಿಕೆಯಿಂದಲೇ ಅಧಿ ಕಾರಕ್ಕೆ ಬರಲು ಎಲ್ಲಾ ರಾಜಕೀಯ ಪಕ್ಷ ಗಳು ಹವಣಿಸುತ್ತವೆ. ರಾಜ್ಯದಲ್ಲಿ ಕುತಂತ್ರಿ ಗಳನ್ನು ಮನೆಗೆ ಕಳಿಸಿದ್ದೇವೆ. ನಮ್ಮದು ಕುತಂತ್ರ ರಾಜಕಾರಣವಲ್ಲ. ಸಂಘಟಿತ ರಾಜಕಾರಣ. ಪಕ್ಷ ಸಂಘಟನೆ ಮಾಡುವ ಮೂಲಕ ನಾವು ಅಧಿಕಾರಕ್ಕೆ ಬರುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾದ ಜೋಗಿ ಮಂಜು, ಶಿವಕುಮಾರ್ ಹಾಗೂ ಇನ್ನಿತರರು ಇದ್ದರು.