‘ಹೊಯ್ಸಳರ ಶಿಲ್ಪಕಲೆಯಲ್ಲಿ ಮಹಿಳೆಯರು’ ವಿಶೇಷ ಉಪನ್ಯಾಸ

ಮೈಸೂರು: ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ ದಿಂದ ‘ಹೊಯ್ಸಳರ ಶಿಲ್ಪಕಲೆಯಲ್ಲಿ ಮಹಿಳೆಯರು’ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿ ಸಲಾಗಿತ್ತು.

ಮೈಸೂರು ವಿಶ್ವವಿದ್ಯಾನಿಲಯದ ಇತಿ ಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ರಾದ ಡಾ. ಎನ್. ಸರಸ್ವತಿ, ಹೊಯ್ಸಳರ ಕಾಲದ ಶಿಲ್ಪಕಲೆಯಲ್ಲಿ ಮಹಿಳೆಯರ ಪ್ರಧಾನ ಪಾತ್ರ ಪ್ರಸ್ತಾಪಿಸಿ, ಲೌಕಿಕ, ಆಧ್ಯಾತ್ಮಿಕ, ಪೌರಾಣಿಕ, ಸಾಮಾಜಿಕ ಹಾಗೂ ಧಾರ್ಮಿಕ ವೈಚಾರಿಕತೆಯಲ್ಲಿ ಶಿಲ್ಪಕಲೆಯ ಮೂಲಕ ಮಹಿಳೆಯರ ಕೊಡುಗೆಗಳನ್ನು ಸ್ಮರಿಸುತ್ತಾ, ಶಾಂತಲಾದೇವಿ, ಬೊಮ್ಮಲ ದೇವಿ, ಉಮಾದೇವಿ ಮೊದಲಾದ ಹೊಯ್ಸಳರ ಕಾಲದ ಸ್ತ್ರೀ ನೃತ್ಯಗಾರ್ತಿ ಯರ ನೃತ್ಯ ಕೌಶಲ್ಯ, ಸೌಂದರ್ಯಪ್ರಜ್ಞೆ, ಅಲಂಕಾರ, ದೈವಿಕ ನಂಬಿಕೆಗಳು, ಆಚ ರಣೆಗಳು ಸೇರಿದಂತೆ ವಿವಿಧ ವಿಷಯ ಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಶಿಲ್ಪಕಲೆಯಲ್ಲಿ ಕಂಡು ಬಂದ ಮಹಿಳೆ ಯರ ಕೇಶವಿನ್ಯಾಸ, ವಿವಿಧ ಆಭರಣ ಗಳಾದ ಓಲೆ, ಮೂಗುತಿ, ಕಂಠಿಹಾರ, ಕೈಕಡಗ, ಕಿರೀಟ, ಡಾಬು ಇತ್ಯಾದಿ ವೈವಿಧ್ಯಮಯ ವಿನ್ಯಾಸಗಳು, ನಾಟ್ಯದ ವಿವಿಧ ಭಂಗಿಗಳು, ಸೀತಾ ಕಲ್ಯಾಣದೃಶ್ಯ, ದರ್ಬಾರ್ ಚಿತ್ರಣ ಹಾಡುಗಾರಿಕೆ, ಸಂಗೀತ, ಮದನಿಕೆಯರ ನೃತ್ಯಚಿತ್ರಗಳು, ಭಾವನಾತ್ಮಕ ನೃತ್ಯಭಂಗಿಗಳು, ವಿಷಕನ್ಯೆ ಯರ ಮೂರ್ತಿ ಶಿಲ್ಪಗಳು, ವಿವಿಧ ಸಂಗೀತ ಪರಿಕರಗಳು, ಪಗಡೆ, ಮಹಿಳಾ ಕುಸ್ತಿಪಟುಗಳು, ಬುಡಕಟ್ಟು ಜನರ ವೇಷ ಭೂಷಣಗಳು, ಮರ-ಗಿಡ-ಬಳ್ಳಿಗಳು ಸೇರಿದಂತೆ ವಿವಿಧ ಬಗೆಯ ಬಲು ಅಪರೂಪದ ಸೂಕ್ಷ್ಮ ಕಲಾ ಕೌಶಲ್ಯವನ್ನು ಪ್ರತಿಬಿಂಬಿಸುವ ಶಿಲ್ಪ ಕಲಾ ಪ್ರೌಢಿಮೆ ಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಜೊತೆಗೆ ಹೊಯ್ಸಳರ ಶಿಲ್ಪಕಲೆಯಲ್ಲಿ ಸ್ತ್ರೀಯರ ಪಾತ್ರವನ್ನು ಕುರಿತ ನೂರಾರು ಅಪರೂಪದ ದೃಶ್ಯಗಳನ್ನು ವಿದ್ಯಾರ್ಥಿ ಗಳಿಗೆ ಪ್ರದರ್ಶಿಸುವುದರ ಮೂಲಕ ಮುಂದಿನ ದಿನಗಳಲ್ಲಿ ಈ ವಿಷಯ ಕುರಿತು ಆಳವಾದ ಸಂಶೋಧನೆ ಮಾಡಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶು ಪಾಲರಾದ ಡಾ. ಎಸ್. ವೆಂಕಟರಾಮು ಅಧ್ಯಕ್ಷತೆ ವಹಿಸಿದ್ದರು, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಹೆಚ್. ಅಧ್ಯಾಪಕರಾದ ಡಾ. ಧರ್ಮೇಶ ಎ.ಜಿ., ನಂದೀಶ ಎ.ಆರ್. ಮತ್ತು ಇತಿಹಾಸ ವಿಷಯದ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿಗಳು ಭಾಗವಹಿಸಿದ್ದರು.