ಬಿರು ಬಿಸಿಲಿಗೆ ಬಸವಳಿದ ಕಾರ್ಯಕರ್ತರು

ಹಾಸನ: ಲೋಕಸಭಾ ಚುನಾ ವಣೆಗೆ ಇನ್ನು ಕೇವಲ 10 ದಿನಗಳು ಬಾಕಿ ಉಳಿದಿದ್ದು, ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಈಗ ಚುನಾವಣೆ ಪ್ರಚಾರದ ಕಾವು ಏರತೊಡಗಿದೆ. ಆದರೆ, 35 ಡಿಗ್ರಿಯ ಷ್ಟಿರುವ ಸುಡು ಬಿಸಿಲಿನ ಪ್ರಖರತೆಯಿಂದ ಪ್ರಚಾರಕ್ಕೆ ಇಳಿದಿರುವ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬಿಸಿಲಿಗೆ ಬಸವಳಿಯುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವಿಪರೀತ ತಾಪಮಾನದಿಂದ ಜನರು ಎಲ್ಲೆಡೆ ಸಂಚರಿಸಲು ಸುಸ್ತು ಹೊಡೆಯು ತ್ತಿದ್ದಾರೆ. ಬಿಸಿಲಿಗೆ ಬೆದರಿ ಮಧ್ಯಾಹ್ನದ ವೇಳೆ ರಸ್ತೆಗಿಳಿಯಲು ಹಿಂಜರಿಯುತ್ತಿ ದ್ದಾರೆ. ಇತ್ತ ರಾಜಕೀಯ ಪಕ್ಷದ ಮುಖಂ ಡರು, ಕಾರ್ಯಕರ್ತರು ಮುಂಜಾನೆ ಹಾಗೂ ಸಂಜೆ ವೇಳೆ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಮಧ್ಯಾಹ್ನದ ವೇಳೆ ಕೇವಲ ಸಭೆ, ಸಮಾ ರಂಭಗಳಿಗೆ ಮಾತ್ರ ಸೀಮಿತವಾಗುತ್ತಿದೆ.

ಬೆಳಿಗ್ಗೆ 11 ಗಂಟೆಯಾಗುತ್ತಿದ್ದಂತೆ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದೆ. ಇದರಿಂದ ಸೆಖೆ, ಉಷ್ಣಗಾಳಿ ಹೆಚ್ಚುತ್ತಿದೆ. ಬಿಸಿಲಿನಿಂದ ಭೂಮಿ ಕಾದು ಕಬ್ಬಿಣದಂತಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಮುಖಂಡರು ಅನಿ ವಾರ್ಯವಾಗಿ ಚುನಾವಣೆ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಬಿಸಿಲಿನಿಂದ ತಪ್ಪಿಸಿ ಕೊಳ್ಳಲು ಬೆಳಿಗ್ಗೆ ಮತ್ತು ಸಂಜೆ ಸಮಯ ದಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಮತಯಾಚಿಸುತ್ತಿದ್ದಾರೆ.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ಕ್ರಮಗಳನ್ನು ಏರ್ಪಡಿಸಿದ್ದರೂ ಅತ್ತ ಜನರು ಸುಳಿಯುತ್ತಿಲ್ಲ. ಅದಕ್ಕೆ ಸುಡು ಬಿಸಲಿನ ಪ್ರಭಾವ ಕಾರಣ ಎನ್ನಲಾಗಿದೆ. ಬಹಿರಂಗ ಸಭೆಗಳತ್ತ ಜನರು ಬಂದರೂ ನೆರಳಲ್ಲಿ ಕುಳಿತುಕೊಳ್ಳಲು ಹಾತೊರೆ ಯುತ್ತಿರುವುದು ಕಂಡು ಬರುತ್ತಿದೆ.

ಮಧ್ಯಾಹ್ನ 11 ಗಂಟೆ ನಂತರ ಬಿರು ಬಿಸಿಲಿಗೆ ಹೆದರಿ ರಸ್ತೆಗಳಲ್ಲಿ ಜನಸಂಚಾರ ಇಳಿಮುಖವಾಗಿದೆ. ಬಿಸಿಲು, ಸೆಖೆಯ ಬೇಗೆಯಿಂದ ಕೊಂಚ ನೆಮ್ಮದಿ ತಾಳಲು ತಂಪು ಪಾನೀಯಗಳ ಮೊರೆ ಹೋಗು ವುದು ಅನಿವಾರ್ಯವಾಗಿದೆ.

ಭಾರಿ ಬಿಸಿಲಿನಿಂದ ಚುನಾವಣೆ ಪ್ರಚಾ ರದ ಮೇಲೆ ಪರಿಣಾಮ ಬೀರಿದ್ದು, ಚುನಾ ವಣೆ ಕಣದಲ್ಲಿರುವ ಅಭ್ಯರ್ಥಿಗಳು ಬೆವ ರಿಳಿಯುವಂತೆ ಆಗಿದೆ. ಪ್ರಚಾರಕ್ಕೆ ಬರುವ ಅಭ್ಯರ್ಥಿಗಳು, ಮುಖಂಡರು ತಂಪಾದ ಸ್ಥಳವನ್ನು ಹುಡುಕಿ ಕಾರ್ಯಕ್ರಮ ಆಯೋಜಿಸುತ್ತಿರುವುದು, ಹೆಜ್ಜೆ ಹೆಜ್ಜೆಗೂ ನೀರು ಕೇಳಿ ಬಾಯಾರಿಸಿಕೊಳ್ಳುವುದು ಕಂಡು ಬರುತ್ತಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರ, ಮತಯಾಚನೆ ಕಾರ್ಯ ಕಾವು ಪಡೆಯು ವುದರ ಜೊತೆಗೆ ಸುಡು ಬಿಸಲಿನ ಪ್ರಖ ರವು ಏರತೊಡಗಿದ್ದು, ಪ್ರಚಾರ ಮಾಡು ವವರು ಎದುಸಿರು ಬಿಡುತ್ತಿರುವುದು ಸತ್ಯ.

ಬಿಸಿಲಿನ ಝಳಕ್ಕೆ ಛತ್ರಿ, ಟೋಪಿ ಮೊರೆ

ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಸೂರ್ಯನ ಬಿಸಿಲು ಹೆಚ್ಚುತ್ತಿರುವುದರಿಂದ ಕೆಲವೆಡೆ ರಾಜಕೀಯ ಮುಖಂಡರು ತಮ್ಮ ಅಭ್ಯ ರ್ಥಿಯ ಪ್ರಚಾರಕ್ಕೆ ಹೋಗುವುದು ಅನಿ ವಾರ್ಯವಾಗಿದೆ. ಈ ವೇಳೆ ಕಾರ್ಯ ಕರ್ತರು, ಮುಖಂಡರು ಛತ್ರಿಯ ಮೊರೆ ಹೋದರೆ ಕಾರ್ಯಕರ್ತರು ಟೋಪಿ ಗಳನ್ನು ಧರಿಸುವ ಮೂಲಕ ಬಿಸಿಲಿ ನಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದಾರೆ.

ಅಂತೂ ಮಳೆ ಬಂತು

ಬಿಸಿಲಿನಿಂದ ತತ್ತರಿಸಿದ ಜಿಲ್ಲೆಯ ಜನತೆಗೆ ಸೋಮವಾರ ವರುಣ ದೇವನ ಆಗಮನದಿಂದ ಕೊಂಚ ಸಂತಸ ಮೂಡಿ ಸಿದೆ. ಮಧ್ಯಾಹ್ನ 3 ಗಂಟೆಯ ನಂತರ ಮೋಡ ಕವಿದ ವಾತಾವರಣ ನಿರ್ಮಾಣ ವಾಗಿ ಸಂಜೆ ಹಾಸನ, ಅರಸೀಕೆರೆ, ಆಲೂರು, ಬೇಲೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ ಸುರಿಯಿತು. ಕಳೆದ ಹಲವು ದಿನಗಳಿಂದ ಬೇಸಿಗೆ ಝಳದಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯನ ಆಗಮನದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.