ಡಿ.29ರಂದು ವಿಶ್ವಮಾನವ ದಿನಾಚರಣೆ

ಮೈಸೂರು,ಡಿ.27-ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಕುವೆಂಪು ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರ ಯದಲ್ಲಿ ಡಿ.29 ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕಲಾಮಂದಿರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಆಯೋಜಿಸಲಾಗಿದೆ.

ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಾಮಕೃಷ್ಣ ಆಶ್ರಮದ ಸ್ವಾಮಿ ಶಿವಕಾಂತಾನಂದ ಮಹಾರಾಜ್ ಅವರು ದಿವ್ಯ ಸಾನಿಧ್ಯ ವಹಿಸುವರು. ಶಾಸಕ ಎಲ್.ನಾಗೇಂದ್ರ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣಕಾರರಾಗಿ ಸಂಸ್ಕøತಿ ಚಿಂತಕರಾದ ಡಾ.ಗುಬ್ಬಿಗೂಡು ರಮೇಶ್ ಭಾಗವಹಿಸುವರು.

ಮುಖ್ಯ ಅತಿಥಿಗಳಾಗಿ ಮೇಯರ್ ಪುಷ್ಟಲತಾ ಜಗನ್ನಾಥ್, ಜಿ.ಪಂ. ಅಧ್ಯಕ್ಷೆ ಪರಿಮಳ ಶ್ಯಾಂ, ಲೋಕಸಭಾ ಸದಸ್ಯರಾದ ಪ್ರತಾಪಸಿಂಹ, ವಿ.ಶ್ರೀನಿವಾಸ್‍ಪ್ರಸಾದ್, ಸುಮಲತಾ ಅಂಬ ರೀಷ್, ಶಾಸಕರಾದ ಎಸ್.ಎ.ರಾಮದಾಸ್ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ತನ್ವೀರ್‍ಸೇಠ್, ಕೆ.ಮಹದೇವ್, ಡಾ.ಯತೀಂದ್ರ. ಎಸ್,ಹರ್ಷವರ್ಧನ್, ಕೆ.ವಿ.ನಾರಾಯಣಸ್ವಾಮಿ, ಅಶ್ವಿನ್‍ಕುಮಾರ್, ಅನಿಲ್‍ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇ ಗೌಡ, ನಾಗರಾಜು, ಆರ್.ಧರ್ಮಸೇನ, ಕೆ.ಟಿ.ಶ್ರೀಕಂಠೇಗೌಡ, ಉಪ ಮೇಯರ್ ಶಫೀ ಅಹಮದ್, ಜಿ.ಪಂ. ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾ.ಪಂ. ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ತಾ.ಪಂ.ಉಪಾಧ್ಯಕ್ಷ ಎನ್.ಬಿ.ಮಂಜು ಆಗಮಿಸಲಿದ್ದಾರೆ.