ಮೈಸೂರು: ಕೃಷಿ ಭೂಮಿ ಹಾಗೂ ಗುಡ್ಡ ಕಡಿದು ಬಡಾ ವಣೆ ನಿರ್ಮಾಣ ಮಾಡುತ್ತಿರುವುದ ರಿಂದಲೇ ಭೂಮಿ ಮೇಲೆ ಒತ್ತಡ ಹೆಚ್ಚಾ ಗುತ್ತಿದ್ದು, ಇವುಗಳನ್ನು ತಡೆದು ಭೂಮಿ ಯನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ವಿಷಾದಿಸಿದ್ದಾರೆ.
ಮೈಸೂರು ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿ.ಪಂ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ `ವಿಶ್ವ ಭೂ’ ದಿನಾಚರಣೆ ಕಾರ್ಯ ಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಭೂಮಿ ರಕ್ಷಣೆಗೆ ಮುಂದಾಗದಿದ್ದರೆ ಮುಂಬರುವ ವರ್ಷ ಗಳಲ್ಲಿ ದೊಡ್ಡ ಅನಾಹುತಕ್ಕೆ ಎಡೆಮಾಡಿ ಕೊಟ್ಟಂತಾಗುತ್ತದೆ. ಈಗಾಗಲೇ ಕೃಷಿ ಭೂಮಿಯಲ್ಲಿ ಹಾಗೂ ಗುಡ್ಡಗಾಡು ಪ್ರದೇಶ ದಲ್ಲಿ ಬಡಾವಣೆ ನಿರ್ಮಾಣ ಮಾಡುತ್ತಿ ರುವುದು ವಿನಾಶದ ಸಂಕೇತ ಎಂದು ಪ್ರಕೃತಿ ಈಗಾಗಲೇ ಎಚ್ಚರಿಕೆ ನೀಡಿದೆ. ಕೊಡಗು ಹಾಗೂ ಕೇರಳದಲ್ಲಿ ಕಳೆದ ವರ್ಷ ಉಂಟಾದ ಭೂ ಕುಸಿತ ಹಾಗೂ ಪ್ರವಾಹ ಇದರ ಮುನ್ಸೂಚನೆಯಾಗಿದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ ಭೂಮಿಯನ್ನು ರಕ್ಷಿಸಿ, ಮುಂದಿನ ಪೀಳಿ ಗೆಗೆ ಸವಾಲು ಎದುರಾಗದಂತೆ ನೋಡಿ ಕೊಳ್ಳಬೇಕು ಎಂದು ತಿಳಿಸಿದರು.
ಭೂಮಿ ಮೇಲೆ ಹೆಚ್ಚು ಸೀಮೆಂಟ್ ಬಳಸುವುದು ಸರಿಯಲ್ಲ. ಸೀಮೆಂಟ್ ಕಟ್ಟಡಗಳು ಹೆಚ್ಚಾದಂತೆ ಪರಿಸರದ ಸಮ ತೋಲನ ತಪ್ಪುತ್ತದೆ. ಹಲವು ಸಮಸ್ಯೆ ಗಳು ಸೃಷ್ಟಿಯಾಗುತ್ತವೆ. ಕಾಲಕ್ಕೆ ತಕ್ಕಂತೆ ಮಳೆ ಬರದೆ ಕೃಷಿ ಚಟುವಟಿಕೆ ಮಾತ್ರ ವಲ್ಲದೆ, ಜನರ ದೈನಂದಿನ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದ ರಿಂದ ಸಮಸ್ಯೆ ತೀವ್ರ ಸ್ವರೂಪ ಪಡೆದಿದೆ. ಇನ್ನಾದರೂ ಎಚ್ಚೆತ್ತುಕೊಂಡು ಭೂಮಿ ರಕ್ಷಣೆಯಲ್ಲಿ ತೊಡಗದಿದ್ದರೆ ವಿನಾಶಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳೊಂದಿಗೆ ಸಂಘ-ಸಂಸ್ಥೆಗಳು ಭೂಮಿ ರಕ್ಷಣೆಗೆ ಕೈಜೋಡಿ ಸಬೇಕೆಂದು ಕರೆ ನೀಡಿದರು.
ಕೆಲ ವರ್ಷದಿಂದ ಮಿತಿ ಮೀರಿದ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ತಾಮ್ರ, ಹಿತ್ತಾಳೆ ಬಳಸುವುದನ್ನೇ ನಿಲ್ಲಿಸಿರುವ ಜನರು ಪ್ಲಾಸ್ಟಿಕ್ ಮೊರೆ ಹೋಗಿದ್ದಾರೆ. ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಎಷ್ಟೇ ವರ್ಷ ವಾದರೂ ಪ್ಲಾಸ್ಟಿಕ್ ಕರಗದೇ ಇರುವುದ ರಿಂದ ಮಣ್ಣಿನ ಸವಕಳಿ ಹಾಗೂ ಫಲ ವತ್ತತೆ ಕುಗ್ಗಲು ಕಾರಣವಾಗುತ್ತಿದೆ ಎಂದು ವಿಷಾದಿಸಿದ ಅವರು, ನೀರಿನ ಮಿತ ಬಳ ಕೆಯೂ ಅನಿವಾರ್ಯ. ನೀರನ್ನು ಸಂರಕ್ಷಿ ಸದಿದ್ದರೆ ಮುಂದಿನ ದಿನಗಳಲ್ಲಿ ಒಬ್ಬರಿಗೆ ಇಂತಿಷ್ಟು ಎಂದು ನೀರನ್ನು ನಿಗದಿ ಮಾಡುವ ದಿನ ಬಂದೊದಗಲಿದೆ. ಈಗಾ ಗಲೇ ದಕ್ಷಿಣ ಆಫ್ರಿಕಾದ ಕೇಪ್‍ಟೌನ್ ನಗರದಲ್ಲಿ ನೀರಿನ ಪ್ರಮಾಣ ನಿಗದಿ ಮಾಡಿ ಸರಬರಾಜು ಮಾಡಲಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಮಳೆ ನೀರು ಕೊಯ್ಲು ಮಾಡುವು ದರೊಂದಿಗೆ, ನೀರಿನ ಪುನರ್ ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಹಿರಿಯ ವಿಜ್ಞಾನಿ ಡಾ.ಅರುಣ ಬಾಲಮಟ್ಟಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಹೀಗೆ ಬಳಕೆಯಾದ ಪ್ಲಾಸ್ಟಿಕ್ ಅನ್ನು ಪುನರ್ ಬಳಕೆ ಮಾಡುತ್ತಿಲ್ಲ. ಶೇ.50 ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಪಾಲಾಗುತ್ತಿದೆ. ಇದ ರಿಂದ ಜಲಚರಗಳ ಮಾರಣಹೋಮ ನಡೆಯುತ್ತಿದೆ. ತಾಪಮಾನ ಏರುಪೇರಿ ನಿಂದಾಗಿಯೂ ಜನರ ಮೇಲೆ ದುಷ್ಪರಿ ಣಾಮ ಉಂಟಾಗುತ್ತಿದೆ. ವರ್ಷಕ್ಕೆ 20 ಲಕ್ಷ ಜನರು ಕಡಿಮೆ ವಯಸ್ಸಿನಲ್ಲಿಯೇ ಮೃತಪಡುತ್ತಿದ್ದಾರೆ. ಯೂರೋಪ್ ಖಂಡದಲ್ಲಿ ಹೆಚ್ಚಾದ ತಾಪಮಾನ ದಿಂದಲೇ ವರ್ಷಕ್ಕೆ 70 ಸಾವಿರ ಜನರು ಸಾವಿಗೀಡಾಗುತ್ತಿದ್ದಾರೆ. ವಿಶ್ವದಾದ್ಯಂತ ಅಪಾರ ಪ್ರಮಾಣದಲ್ಲಿ ಪ್ರಾಣಿ-ಪಕ್ಷಿಗಳ ಸಾವು ಸಂಭವಿಸುತ್ತವೆ. ಸ್ವಚ್ಛ ನೀರು ಸಿಗದೆ ಕಲುಷಿತ ನೀರು ಸೇವನೆಯಿಂದ ವರ್ಷಕ್ಕೆ 50 ಸಾವಿರ ಜನರು ಮೃತಪಡುತ್ತಿದ್ದಾರೆ. 2030ರ ವೇಳೆಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಇದನ್ನು ಎಚ್ಚರಿಕೆ ಗಂಟೆಯಾಗಿ ಪರಿಗಣಿಸಿ ಭೂಮಿ ರಕ್ಷಣೆಗೆ ಪಣ ತೊಡಬೇಕು ಎಂದರು.
ವಿಶ್ವದ 200 ನಗರಗಳಲ್ಲಿ `ಶೂನ್ಯ ದಿನ’ ಉಂಟಾಗುವ ಸಂಭವವಿದ್ದು, ಅವುಗಳ ಪಟ್ಟಿಯನ್ನು ಮಾಡಲಾಗಿದೆ. ಅದರಲ್ಲಿ ಮೊದಲ 10 ನಗರದಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ. ಬೆಂಗಳೂರಿ ನಲ್ಲಿ ನೀರಿನ ಮೂಲಗಳನ್ನು ಶೇ.79ರಷ್ಟು ಬಳಸಲಾಗಿದೆ. 4.50 ಲಕ್ಷ ಕೊಳವೆ ಬಾವಿಗಳಿವೆ. ಮುಂದಿನ 10 ವರ್ಷದಲ್ಲಿ ಬೆಂಗಳೂರಿನ ಜನಸಂಖ್ಯೆ 2 ಕೋಟಿ ದಾಟಲಿದೆ. ನೀರಿನ ಮಿತ ಬಳಕೆಯಾಗ ದಿದ್ದರೆ, ಶೂನ್ಯ ದಿನ(ನೀರು ಲಭ್ಯವಿಲ್ಲದ ನಗರಕ್ಕೆ ಶೂನ್ಯ ದಿನ ಎನ್ನಲಾಗುತ್ತದೆ) ಬೆಂಗಳೂರಿಗೆ ಶೀಘ್ರವೇ ಬರುವ ಆತಂಕ ವಿದೆ. ಕಾವೇರಿ ನೀರು ಹಂಚಿಕೆ ಕುರಿತಂತೆ ಪ್ರಾಧಿಕಾರ 250 ಟಿಎಂಸಿ ನೀರು ಕರ್ನಾ ಟಕದ ಪಾಲು ಎಂದಿದೆ. ಆದರೆ ಪ್ರಸ್ತುತ ನಾವು ಬಳಸುತ್ತಿ ರುವುದು 370 ಟಿಎಂಸಿ ನೀರು. ಪ್ರಾಧಿ ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸಿ ದರೆ, ಬೇಸಿಗೆ ಬೆಳೆ ಬೆಳೆಯುವುದಕ್ಕೆ ನೀರು ದೊರೆಯುವುದಿಲ್ಲ ಎಂದು ವಿಷಾದಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ, ಸಿಸಿಎಫ್ ಅಂಬಾಡಿ ಮಾದವ್, ಎಎಸ್ಪಿ ಸ್ನೇಹ, ವಕೀಲರ ಸಂಘದ ಅಧ್ಯಕ್ಷ ಎಸ್. ಆನಂದ್ ಕುಮಾರ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪ್ರಭುಸ್ವಾಮಿ ಉಪಸ್ಥಿತರಿದ್ದರು.