ಯುದ್ಧ ಸಂಘರ್ಷ ನಿವಾರಿಸಿ ಅಭಿವೃದ್ಧಿ ಸಾಧಿಸಬೇಕಿದೆ

ಮೈಸೂರು: ಸುಸ್ಥಿರ ಅಭಿವೃದ್ಧಿಯು ಬಡತನ, ಜನಸಂಖ್ಯಾ ಒತ್ತಡ ಮತ್ತು ಪರಿಸರ ಸಂಪನ್ಮೂಲಕ್ಕೆ ಸಂಬಂಧ ಕಲ್ಪಿಸುವಂತಿರಬೇಕು ಎಂದು ವಿಶ್ವವಿದ್ಯಾನಿಲಯ ಅನುದಾನ ಆಯೋ ಗದ ಸದಸ್ಯೆ ಪ್ರೊ.ಸುಷ್ಮಾಯಾದವ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ಸೆನೆಟ್ ಭವನ ದಲ್ಲಿ ಮೈಸೂರು ವಿವಿ, ಸಿಂಗಾಪುರ್‍ನ ಜೇಮ್ಸ್ ಕುಕ್ ವಿವಿ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಜ್ಞಾನೋದಯ ಎಜು ಕೇಷನ್ ಸೊಸೈಟಿ ಸಂಯುಕ್ತವಾಗಿ ಆಯೋಜಿಸಿರುವ `ಸಂಪನ್ಮೂಲ ನಿರ್ವ ಹಣೆ ಮತ್ತು ಸುಸ್ಥಿರ ಅಭಿವೃದ್ಧಿ’ ಕುರಿತ 3 ದಿನಗಳ ವಿಶ್ವ ಶೃಂಗಸಭೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಯುದ್ಧ ಅಭಿವೃದ್ಧಿಗೆ ಮಾರಕ. ಮಾತುಕತೆ, ಸಂಧಾನದ ಮೂಲಕ ಸಂಘರ್ಷ ನಿವಾರಣೆ ಮಾಡಿ ಅಭಿವೃದ್ಧಿಯ ಗುರಿ ತಲುಪಲು ಶ್ರಮಿಸಬೇಕಾಗಿದೆ ಎಂದರು.

ಜಾಗತೀಕರಣದಿಂದ ಧನಿಕರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿದೆ. ಸ್ಥಳೀಯ ಮಟ್ಟದಲ್ಲಿ ಸಾಂಸ್ಕøತಿಕ ವೈವಿ ಧ್ಯತೆ ಮತ್ತು ಸಂಪ್ರದಾಯಗಳ ಸುಳ್ಳುಗಳ ಮೇಲೆ ಸುಸ್ಥಿರ ಅಭಿವೃದ್ಧಿ ಸಾಧಿಸುವ ಮಾತುಗಳನ್ನಾಡುತ್ತಿz್ದÉೀವೆ. ಪ್ರಾದೇಶಿಕ ಮಟ್ಟದಲ್ಲಿನ ಪರಸ್ಪರ ಸಹಕಾರದಿಂದ, ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯಿಂದ ಸಂಪನ್ಮೂಲ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಬಹುದು ಎಂದರು.

ಶೇ.2.4ರಷ್ಟು ಭೂ ಪ್ರದೇಶ ಹೊಂದಿ ದ್ದರೂ ಭಾರತ ವಿಶ್ವದ ಶೇ.17ರಷ್ಟು ಜನ ಸಂಖ್ಯೆ ಹೊಂದಿರುವ ಕಾರಣದಿಂದಲೇ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಬೆಳೆಯುತ್ತಿರುವ ಜನಸಂಖ್ಯೆ, ಬೇಡಿಕೆಗಳ ಹೆಚ್ಚಳ, ಆರ್ಥಿಕ ಅಭಿವೃದ್ಧಿಗೆ ಕೊರತೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಶುದ್ಧ ನೀರು, ಆಹಾರೋತ್ಪನ್ನ ನಿರ್ವ ಹಣೆಗೆ ಭೂ ವಿವಾದವೇ ಕಾರಣ. ಇದನ್ನು ಬಗೆಹರಿಸಿಕೊಂಡರೇ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಶೃಂಗಸಭೆ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಸಂಪನ್ಮೂಲ ನಿರ್ವಹಣೆ ಜಾಗತಿಕ ಸಮು ದಾಯಕ್ಕೆ ಮುಖ್ಯವಾದ ಸಾಧನ. ನವೀ ಕರಿಸಬಹುದಾದ ಮತ್ತು ನವೀಕರಿಸ ಲಾಗದ ಸಂಪನ್ಮೂಲಗಳ ನಿರ್ವಹಣೆ, ವನ್ಯಜೀವಿ- ಅರಣ್ಯದ ಸಂರಕ್ಷಣೆ, ಜನ ಸಂಖ್ಯಾ ಆಧಾರಿತವಾಗಿ ರಾಜಿ ಇಲ್ಲದೆ ಸಂಪನ್ಮೂಲ ಹಂಚಿಕೆ ಮಾಡಿದಲ್ಲಿ ಮುಂದಿನ ಪೀಳಿಗೆಗೆ ಸುಸ್ಥಿರ ಅಭಿವೃದ್ಧಿ ಯನ್ನು ವರ್ಗಾಯಿಸಬಹುದು. ಪರಿಸರ ರಾಜಕೀಯಕ್ಕೆ ಅವಕಾಶ ಮಾಡಿಕೊಡ ಬಾರದು. ಕೃಷಿ ಭೂಮಿ ಸಂರಕ್ಷಣೆ, ಪರಿ ಣಾಮಕಾರಿ ಆಡಳಿತ, ಆರ್ಥಿಕ ತತ್ವಗಳ ಆಚರಣೆಯಿಂದ ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು.

ಸಿಂಗಾಪುರ್‍ನ ಜೇಮ್ಸ್ ಕುಕ್ ವಿವಿಯ ಡಾ.ಅಭಿಷೇಕ್ ಸಿಂಗ್ ಭಾಟಿ, ಯುಜಿಸಿ ಸದಸ್ಯ ಪೆÇ್ರ.ಜಿ.ಗೋಪಾಲರೆಡ್ಡಿ, ಮೈಸೂರು ವಿವಿ ಕುಲಸಚಿವ ಪೆÇ್ರ.ಲಿಂಗರಾಜಗಾಂಧಿ, ಪರೀಕ್ಷಾಂಗ ಕುಲಸಚಿವ ಪೆÇ್ರ.ಕೆ.ಎಂ. ಮಹದೇವನ್, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಪೆÇ್ರ.ಸಿ.ಎಚ್. ಪ್ರಕಾಶ್, ಶೃಂಗಸಭೆಯ ನಿರ್ದೇಶಕರಾದ ಡಾ.ಕೆ. ಶಿವಚಿತ್ತಪ್ಪ, ಡಾ.ದೇಸ್ತಿ ಕನ್ನಯ್ಯ, ಡಾ.ರೇಷ್ಮಾ ಚೆಂಗಪ್ಪ ಇನ್ನಿತರರು ಉಪಸ್ಥಿತರಿದ್ದರು.