ಕೂಟುಹೊಳೆಗೆ ಹಾರಿ ಯುವಕ ಆತ್ಮಹತ್ಯೆ

ಮಡಿಕೇರಿ:  ಸಹಿತ ಅವಿ ವಾಹಿತ ಯುವಕನೋರ್ವ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಹೊರವಲಯದ ಕೂಟು ಹೊಳೆಯಲ್ಲಿ ನಡೆದಿದೆ.

ಮಡಿಕೇರಿ ರಾಣಿಪೇಟೆ ನಿವಾಸಿ ಸಮೀ ವುಲ್ಲಾ (32) ಆತ್ಮಹತ್ಯೆ ಮಾಡಿಕೊಂಡವ ನಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲಾ ಮಕ್ಕಳನ್ನು ವ್ಯಾನ್‍ನಲ್ಲಿ ಶಾಲೆಗೆ ಕರೆದೊ ಯ್ಯುವ ಕೆಲಸ ಮಾಡುತ್ತಿದ್ದ ಸಮೀವುಲ್ಲಾ, ಮಂಗಳವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಮಾರುತಿ ವ್ಯಾನ್ ಅನ್ನು ವೇಗವಾಗಿ ಕೂಟುಹೊಳೆ ಜಲಾ ಶಯದ ಪಂಪ್‍ಹೌಸ್ ಹಿಂದಿನ ರಸ್ತೆ ಯಲ್ಲಿ ಚಾಲಿಸಿಕೊಂಡು ಬಂದಿದ್ದಾನೆ. ಕೆಸರಿನಲ್ಲಿ ವ್ಯಾನ್ ಹೂತುಕೊಂಡಾಗ ವ್ಯಾನ್‍ನಿಂದ ಹೊರಗಿಳಿದು ಜಲಾಶಯಕ್ಕೆ ಹಾರಿದ್ದಾನೆ.

ಇದೇ ರಸ್ತೆಯಲ್ಲಿ ಬಂದ ಆಟೋ ಚಾಲಕ ಕಲ್ಲೇಶ್ ಎಂಬುವರು ತಕ್ಷಣವೇ ಕೂಟು ಹೊಳೆ ಸಿಬ್ಬಂದಿಗಳಿಗೆ ವಿಷಯ ತಿಳಿಸಿ ಮುಳುಗುತ್ತಿದ್ದ ಸಮೀ ವುಲ್ಲಾ ಕಡೆಗೆ ಹಗ್ಗ ಎಸೆದು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನ ವಿಫಲ ಗೊಂಡು ಜನರ ಕಣ್ಣೆದುರಲ್ಲೇ ಸಮೀ ವುಲ್ಲಾ ನೀರಿನಲ್ಲಿ ಮುಳುಗಿ ಮೃತಪಟ್ಟಿ ದ್ದಾನೆ. ಈ ಕುರಿತು ಮಾಹಿತಿ ಅರಿತ ಅಗ್ನಿಶಾಮಕದಳದ ಸಿಬ್ಬಂದಿ ಮೃತದೇಹ ಕ್ಕಾಗಿ ಒಂದು ಗಂಟೆಗೂ ಹೆಚ್ಚು ಕಾಲ ಶೋಧ ನಡೆಸಿ ಮೃತದೇಹವನ್ನು ನೀರಿ ನಿಂದ ಹೊರತೆಗೆಯುವಲ್ಲಿ ಯಶಸ್ವಿ ಯಾದರು. ಮಡಿಕೇರಿ ಗ್ರಾಮಾಂತರ ಠಾಣಾ ಧಿಕಾರಿ ಚೇತನ್, ಎಎಸ್‍ಐ ಅಲೆಕ್ಸ್ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತದೇಹದ ಮಹಜರು ನಡೆಸಿದರು. ಮಡಿಕೇರಿ ಜಿಲ್ಲಾ ಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಾಸುದಾರರಿಗೆ ಒಪ್ಪಿಸಲಾಯಿತು. ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.