ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ ಯುವರಾಜ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು,ಜು.24(ಎಂಟಿವೈ)- ಉಪ ನ್ಯಾಸಕರ ಕೊರತೆ ನೀಗಿಸಿ ಕೂಡಲೇ ಉಪ ನ್ಯಾಸಕರ ನೇಮಕ ಮಾಡಿ, ವಿದ್ಯಾರ್ಥಿ ಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಯುವರಾಜ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ತರಗತಿ ಬಹಿಷ್ಕರಿಸಿ ಕಾಲೇಜು ಆವ ರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕಾಲೇಜು ಆರಂಭವಾಗಿ ಒಂದು ತಿಂಗಳಾದರೂ ಉಪನ್ಯಾಸಕರ ಕೊರತೆ ಯಿಂದ ತರಗತಿಗಳು ಸರಿಯಾಗಿ ನಡೆಯು ತ್ತಿಲ್ಲ. ಸಿಲಬಸ್ ಮುಗಿಯದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿದಿನ ಕಾಲೇಜಿಗೆ ಬಂದು ತರಗತಿಗಳಿಲ್ಲದೆ ವಾಪಸ್ ತೆರಳುವಂತಾಗಿದೆ. ಅಲ್ಲದೆ ಅತಿಥಿ ಉಪ ನ್ಯಾಸಕರನ್ನು ನೇಮಿಸಿ ಸಿಲಬಸ್ ಮುಗಿಸುವ ಕೆಲಸ ವನ್ನೂ ಮಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿ ಗಳ ಭವಿಷ್ಯ ಅತಂತ್ರವಾಗಿದೆ. ನಿಧಾನ ವಾಗಿ ಉಪನ್ಯಾಸಕರನ್ನು ನೇಮಕ ಮಾಡಿದರೆ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ. ಕೂಡಲೇ ಉಪನ್ಯಾಸಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ತರಗತಿಗಳು ಆರಂಭವಾಗಿ ಒಂದು ತಿಂಗಳ ಮೇಲಾಗಿದ್ದು, ಅತಿಥಿ ಉಪನ್ಯಾಸ ಕರ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂ ಭವೇ ಆಗಿಲ್ಲ. ಕೇವಲ ತಾತ್ಕಾಲಿಕ ವೇಳಾಪಟ್ಟಿ ಯಂತೆ ತರಗತಿಗಳು ಜರುಗುತ್ತಿವೆ. ಅಲ್ಲದೇ ಶೌಚಾಲಯ ವ್ಯವಸ್ಥೆ ಮತ್ತು ಕುಡಿ ಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಈ ಬಗ್ಗೆ ಪ್ರಾಂಶುಪಾಲರ ಬಳಿ ಮನವಿ ಮಾಡಿz್ದÉೀವೆ ಎಂದರು. ಪ್ರತಿಭಟನೆಯಲ್ಲಿ ಅಮೋಘ್, ಸ್ಪೂರ್ತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.