ಮೃಗಾಲಯ, ಕಾರಂಜಿಕೆರೆ ಬಂದ್ ಮಾ.31ರವರೆಗೂ ವಿಸ್ತರಣೆ

ಮೈಸೂರು,ಮಾ.20(ಎಂಟಿವೈ)- ಕೊರೊನಾ ಹಾಗೂ ಹಕ್ಕಿಜ್ವರ ಹರಡುವು ದನ್ನು ತಡೆಯಲು ಮೈಸೂರು ಮೃಗಾಲಯ ಹಾಗೂ ಕಾರಂಜಿಕೆರೆಯನ್ನು ಪ್ರವಾಸಿಗ ರಿಗೆ ಸದ್ಯ ಬಂದ್ ಮಾಡಲಾಗಿದ್ದು, ಸಾರ್ವಜನಿಕರ ಪ್ರವೇಶ ಸ್ಥಗಿತ ಕ್ರಮವನ್ನು ಮಾ.31ರವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಶುಕ್ರವಾರ ತಿಳಿಸಿದ್ದಾರೆ.

ಜನಸಂದಣಿಯ ಸ್ಥಳಗಳಲ್ಲಿ ಕೊರೊನಾ ವೈರಸ್ ಸುಲಭವಾಗಿ ಹರಡುವ ಹಿನ್ನೆಲೆ ಯಲ್ಲಿ ಮೈಸೂರು ಮೃಗಾಲಯ, ಬನ್ನೇರು ಘಟ್ಟ ಸೇರಿದಂತೆ ರಾಜ್ಯದ 9 ಮೃಗಾ ಲಯಗಳನ್ನು ಮಾ.15ರಿಂದ 23ರವರೆಗೆ ಬಂದ್ ಮಾಡಲಾಗಿದೆ. ಈಗ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ಅವರ ಆದೇಶದ ಮೇರೆಗೆ ಬಂದ್ ಅವಧಿ ವಿಸ್ತರಿಸಲಾಗಿದೆ ಎಂದರು.

ಹಕ್ಕಿಜ್ವರ ಇಲ್ಲ: ಮೃಗಾಲಯದ ಕೊಳ, ಪಕ್ಷಿಗಳ ಮನೆ ಸಮೀಪ ಸಂಗ್ರಹಿಸಿದ್ದ ಪಿಕ್ಕೆ ಗಳ ಪರೀಕ್ಷಾ ವರದಿ ಬಂದಿದ್ದು, ಹಕ್ಕಿ ಜ್ವರದ ಸೋಂಕು ಇಲ್ಲ ಎಂದು ದೃಢೀ ಕರಿಸಲಾಗಿದೆ. ಹಾಗಿದ್ದೂ ಮೃಗಾಲಯ ದಲ್ಲಿ ಸಾಕಷ್ಟು ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ. ಆಗ್ಗಾಗ್ಗೆ ವೈರಾಣು ನಾಶದ ರಾಸಾಯನಿಕ ದ್ರಾವಣ ಸಿಂಪ ಡಿಸಲಾಗುತ್ತಿದೆ. ಪಕ್ಷಿಗಳಿಗೆ ರೋಗ ನಿರೋ ಧಕ ಶಕ್ತಿ ಹೆಚ್ಚಿಸುವ ಆಹಾರ ನೀಡಲಾಗು ತ್ತಿದೆ ಎಂದು ವಿವರಿಸಿದರು.