ಸೋಮವಾರಪೇಟೆಯಲ್ಲಿ ಕಾಫಿ ಬೆಳೆಗಾರರ ಸಭೆ

ಸೋಮವಾರಪೇಟೆ: ಲೋಕ ಸಭಾ ಚುನಾವಣೆಯ ಮತದಾನಕ್ಕೆ ಸಂಬಂಧಿ ಸಿದಂತೆ ಕಾಫಿ ಬೆಳೆಗಾರರ ಸಭೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆಯಿತು.

ಸಿಪಿಐ ನಂಜುಂಡೇಗೌಡ ಸಭೆಯ ಅಧ್ಯ ಕ್ಷತೆ ವಹಿಸಿದ್ದರು. ನಂತರ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂಬ ನಿಟ್ಟಿನಲ್ಲಿ, ಮತದಾರರಲ್ಲಿ ಜಾಗೃತಿ ಉಂಟುಮಾಡಲು ಕೇಂದ್ರ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ತಾಲೂಕಿನ ಎಲ್ಲ ಕಾಫಿ ಬೆಳೆಗಾರರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕೂಲಿ ಕಾರ್ಮಿಕರು ಮುಕ್ತ ಹಾಗೂ ಒತ್ತಡ ರಹಿತವಾಗಿ ಮತ ದಾನದಲ್ಲಿ ಪಾಲ್ಗೊಳ್ಳಬೇಕು. ಯಾರ ಮೇಲೂ ಯಾವುದೇ ಪಕ್ಷದ ಹಾಗೂ ವ್ಯಕ್ತಿಯ ಪರವಾಗಿ ಮತ ಚಲಾಯಿಸುವಂತೆ ಮತದಾರರ ಮೇಲೆ ತೋಟದ ಮಾಲೀಕರು ಆಸೆ, ಆಕಾಂಕ್ಷೆಗ ಳನ್ನು ಒಡ್ಡಬಾರದು. ಮತದಾನದ ದಿನದಂದು ಕಡ್ಡಾಯವಾಗಿ ಕಾರ್ಮಿಕರಿಗೆ ರಜೆ ನೀಡ ಬೇಕು. ಮದ್ಯ ಹಾಗೂ ಮಾಂಸಾಹಾರ ಊಟ ವನ್ನು ನೀಡಬಾರದು. ಮತದಾನಕ್ಕೆ ಯಾರನ್ನೂ ತಮ್ಮ ಸ್ವಂತ ವಾಹನದಲ್ಲಿ ಕರೆ ತರಬಾರದು. ಯಾವುದೇ ರಾಜಕೀಯ ವ್ಯಕ್ತಿಗಳೊಂದಿಗೆ ಸಭೆ ಸಮಾರಂಭ ಮಾಡಲು ಇಲಾಖೆಯ ಪೂರ್ವಾನುಮತಿ ಪಡೆದಿರಬೇಕು. ತಪ್ಪಿದಲ್ಲಿ ಬೆಳೆಗಾರರ ವಿರುದ್ಧ ಚುನಾವಣೆಗೆ ಸಂಬಂ ಧಿಸಿದಂತೆ ಯಾವುದೇ ದೂರುಗಳು ಬಂದಲ್ಲಿ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಮಾತ ನಾಡಿ, ಸಣ್ಣ ಮತ್ತು ಮಧ್ಯಮ ಕಾಫಿ ತೋಟ ಗಳಲ್ಲಿ ಶಾಶ್ವತ ಕಾರ್ಮಿಕರು ನೆಲೆಸಿಲ್ಲ. ಚುನಾ ವಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಸಭೆಯಲ್ಲಿ ಪ್ರೊಬೇಷನರಿ ಪಿಎಸ್‍ಐ ಪಿ.ಮೋಹನ್ ರಾಜ್, ಸಿಬ್ಬಂದಿ ಜಗದೀಶ್, ಕಾಫಿ ಬೆಳೆಗಾರರಾದ ಬಸಪ್ಪ, ಪ್ರಕಾಶ್, ಬಿ.ಎಂ. ಲವ, ಪೂವಮ್ಮ, ವರಲಕ್ಷ್ಮೀ ಸಿದ್ದೇಶ್ವರ, ಎ.ವಿ. ನೀಲಕಂಠ, ಅನಂತರಾಮ್ ಮತ್ತಿತರರಿದ್ದರು.