ಮಹಾರಾಷ್ಟ್ರದಲ್ಲಿ ನಕ್ಸಲರ ಅಟ್ಟಹಾಸಖಂಡಿಸಿ ಎಬಿವಿಪಿ ಪ್ರತಿಭಟನೆ

ಮೈಸೂರು: ಮಹಾ ರಾಷ್ಟ್ರದ ಗಡಚಿರೊಳ್ಳಿಯಲ್ಲಿ ನಕ್ಸಲರು ಯೋಧರ ಮೇಲೆ ನಡೆಸಿದ ದಾಳಿಯಿಂದ 16 ಯೋಧರು ಹುತಾತ್ಮರಾಗಿದ್ದು, ನಕ್ಸಲರ ಕೃತ್ಯ ಖಂಡಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಕ್ಸಲರು ಬಾಂಬ್ ಸ್ಫೋಟಿಸಿದ್ದರಿಂದ ಅಮಾಯಕ 16 ಮಂದಿ ವಿಶೇಷ ಕಮಾಂ ಡೋಗಳು ಹುತಾತ್ಮರಾಗಿದ್ದಾರೆ. ಇದು ನಕ್ಸಲರ ಹೇಯ ಕೃತ್ಯವಾಗಿದೆ. ಈ ಕೂಡಲೇ ಮಹಾರಾಷ್ಟ್ರ ಸರ್ಕಾರ ಈ ಬಗ್ಗೆ ತನಿಖೆ ನಡೆಸಿ, ನಕ್ಸಲರ ಹತ್ತಿಕ್ಕಬೇಕೆಂದು ಒತ್ತಾ ಯಿಸಿದರು. ಎಬಿವಿಪಿ ನಗರ ಕಾರ್ಯ ದರ್ಶಿ ಗೌತಮ್, ವಿಭಾಗ ಸಂಚಾಲಕ ರಾಕೇಶ್, ಶರತ್, ಶ್ರೀರಾಮ್, ರಾಧಾಕೃಷ್ಣ, ಚಿರಂತ್, ಶಿವಶಂಕರ್, ಆನಂದ್ ಇನ್ನಿತ ರರು ಭಾಗವಹಿಸಿದ್ದರು.