ಅಷ್ಟಮಂಗಲ ಪ್ರಶ್ನೆ ಕಾಲಹರಣ, ಹಣ ಮಾಡುವ ದಂಧೆ ಅಲ್ಲಾರಂಡ ವಿಠಲ್ ನಂಜಪ್ಪ ಆಕ್ರೋಶ

ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲ ಕಾವೇರಿಯಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ಕಾರ್ಯ ಕ್ರಮಕ್ಕೆ ಅಲ್ಲಾರಂಡ ರಂಗ ಚಾವಡಿಯ ಸಂಚಾಲಕರಾದ ಅಲ್ಲಾರಂಡ ವಿಠಲ್ ನಂಜಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಲಕಾವೇರಿಯಲ್ಲಿ ದೋಷ ನಿವಾರಣೆಯ ಹೆಸರಿ ನಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವಿಧಿ, ವಿಧಾನ ಕೇವಲ ಕಾಲಹರಣ ಮತ್ತು ಹಣ ಮಾಡುವ ದಂಧೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

‘ಮೈಸೂರು ಮಿತ್ರ’ದೊಂದಿಗೆ ಅಭಿಪ್ರಾಯ ಹಂಚಿಕೊಂಡ ವಿಠಲ್ ನಂಜಪ್ಪ, ತಲ ಕಾವೇರಿಯಲ್ಲಿ ಮಂಡೀರ, ಮಣವಟ್ಟಿರ, ಪಟ್ಟಮಾಡ ಕುಟುಂಬಸ್ಥರ ತಕ್ಕಾಮೆ ತಪ್ಪಿ ರುವುದೇ ಮೊದಲ ಶಾಪವಾಗಿದೆ. ಈ ಪುಣ್ಯ ಸ್ಥಳವನ್ನು ದೈವಜ್ಞರು ಆಕ್ರಮಿಸಿರು ವುದು ಮೂಲದೋಷಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೈವಜ್ಞರು ಅರಿತು ಅರಿಯದಂತೆ ಅಷ್ಟ ಮಂಗಲ ಪ್ರಶ್ನೆ ಮುಂದಿಟ್ಟು ಆಟ ಆಡು ತ್ತಿದ್ದಾರೆ. ಕೆಲವು ಕೊಡವರು ದೇವನಾಗರಿ ಯನ್ನು ಅಪ್ಪಿಕೊಂಡು ಮೌಢ್ಯದಿಂದ ತಲ ಕಾವೇರಿಯನ್ನು ದುಸ್ಥಿತಿಗೆ ತಳ್ಳಿದ್ದಾರೆ ಎಂದು ವಿಠಲನಂಜಪ್ಪ ಆರೋಪಿಸಿದರು. ಈ ನೆಲದ ಬೆಲೆಯರಿಯದೆ ರೆಸಾರ್ಟ್, ನಿವೇಶನಗಳನ್ನು ನಿರ್ಮಿಸಿ ಪವಿತ್ರ ಮರಗಳ ಹನನ ಮಾಡಲಾಗುತ್ತಿದೆ. ಇದು ಸಹಜವಾಗಿಯೇ ಕಾವೇರಿ ನದಿಯ ನಿರ್ನಾಮಕ್ಕೆ ಕಾರಣವಾಗುತ್ತಿದೆ. ಕೊಡವರು ಮತ್ತು ಕೊಡಗಿನ ನಿವಾಸಿಗಳು ಕಾವೇರಿಗೆ ತೊಂದರೆ ಮಾಡಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮನುಷ್ಯ ಮನುಷ್ಯನನ್ನು, ಜನಾಂಗ ಜನಾಂಗವನ್ನು ಪ್ರೀತಿಸುವುದೇ ನಿಜವಾದ ಶಾಪ ವಿಮೋಚನೆಯಾಗಿದ್ದು, ಇದಕ್ಕೆ ಯಾಗ, ಹೋಮ, ಅಷ್ಟಮಂಗಲ ಪ್ರಶ್ನೆಗಳ ಅಗತ್ಯವಿಲ್ಲವೆಂದು ಪ್ರಗತಿಪರ ಚಿಂತಕ ಅಲ್ಲಾರಂಡ ವಿಠಲ ಪ್ರತಿಪಾದಿಸಿದ್ದಾರೆ.