ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಪುರಪ್ರವೇಶ

ಶ್ರವಣಬೆಳಗೊಳ: ಮಂಡ್ಯ ಜಿಲ್ಲೆಯ ಆರತಿಪುರದಲ್ಲಿ ನೂರಾರು ಜಿನ ಮೂರ್ತಿಗಳು ದೊರಕಿದ್ದು, ಪ್ರಾಚೀನ ಇತಿ ಹಾಸವನ್ನು ಬೆಳಕಿಗೆ ತರಲು ಮ್ಯೂಸಿಯಂ ತೆರೆಯಲು ಕೇಂದ್ರ ಪುರಾತತ್ವ ಇಲಾಖೆ ಮುಂದಾಗಿದೆ. ಇದಕ್ಕೆ ನೂತನ ಶ್ರೀಗಳು ಸಹಕಾರ ನೀಡಿ ಕಾರ್ಯರೂಪಕ್ಕೆ ತರಬೇಕು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಹೇಳಿದರು.

ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಆಯೋಜಿಸಿದ್ದ, ಮಂಡ್ಯ ಜಿಲ್ಲೆಯ ಆರತಿಪುರ ಕ್ಷೇತ್ರದ ಜೈನ ಮಠದ ನೂತನ ಪಟ್ಟಾಚಾರ್ಯರಾಗಿ ಪಟ್ಟಾಭಿಷಕ್ತ ರಾದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಪುರ ಪ್ರವೇಶ ಮತ್ತು ಅಭಿನಂದನಾ ಸಮಾರಂಭದಲ್ಲಿ ಸ್ವಾಗತಿಸಿ ಅವರು ಆಶೀರ್ವಚನ ನೀಡಿದರು.

ಗುರುಕುಲ ಮತ್ತು ಶಿಕ್ಷಣ ಸಂಸ್ಥೆಗಳನ್ನು ತೆರೆದು ಆ ಭಾಗದ ಸರ್ವರು ಅಭಿವೃದ್ಧಿ ಹೊಂದುವಂತೆ ಆರತಿಪುರವನ್ನು ಬೆಳೆಸಲಿ ಎಂದು ಸಲಹೆ ನೀಡಿದರು.

ಕ್ಷೇತ್ರದ ಗೌರವ ಸ್ವೀಕರಿಸಿದ ಸಿದ್ಧಾಂತ ಕೀರ್ತಿ ಸ್ವಾಮೀಜಿ ಮಾತನಾಡಿ, ನೊಂದ ವರಿಗೆ ದಯೆ, ಕರುಣೆ ತೋರಿ ಎಲ್ಲಾ ವರ್ಗ ದವರನ್ನು ಉದ್ಧಾರ ಮಾಡುವುದು ಮಠಗಳ ಮೂಲ ಉದ್ದೇಶವಾಗಬೇಕು. ಶ್ರವಣಬೆಳ ಗೊಳದ ಶ್ರೀಗಳವರ ಮಾರ್ಗದರ್ಶನ ದಲ್ಲಿ ಆರತಿಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದರು.

ಅಮರಕೀರ್ತಿ ಮಹಾರಾಜರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರತಿ ಪುರ ಮಠದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫಲ ಅರ್ಘ್ಯ ಗಳಿಂದ ಪೂಜಿಸಿ ಅಷ್ಠವಿದ್ಯಾರ್ಚನೆಯನ್ನು ನೆರವೇರಿಸಲಾಯಿತು. ಚಾರುಕೀರ್ತಿ ಶ್ರೀಗಳು ಕ್ಷೇತ್ರದ ಪರಂಪರೆಯಂತೆ ಆರತಿಪುರದ ನೂತನ ಸಿದ್ಧಾಂತಕೀರ್ತಿ ಶ್ರೀಗಳನ್ನು ಗೌರ ವಿಸಿ ಆಗಮ ಶಾಸ್ತ್ರದ ಜಯದವಲ ಗ್ರಂಥ ಗಳನ್ನು ನೀಡಿದರು. ಇಲ್ಲಿಯ ಜೈನ ಸಮಾಜ, ಮಹಿಳಾ ಸಮಾಜ, ಮತ್ತು ಶಿಕ್ಷಣ ಸಂಸ್ಥೆ ಗಳ ಮುಖ್ಯಸ್ಥರುಗಳು ನೂತನ ಶ್ರೀಗಳಿಗೆ ಶ್ರೀಫಲ ಅರ್ಪಿಸಿ ಗೌರವಿಸಿದರು.

ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ವಿದ್ಯಾನಂದ ಧರ್ಮಶಾಲೆಯಿಂದ ಚಾವುಂಡರಾಯ ಸಭಾ ಮಂಟಪದವರೆಗೂ ಸಿದ್ಧಾಂತ ಕೀರ್ತಿ ಶ್ರೀಗಳನ್ನು ತೆರೆದ ವಾಹನ ದಲ್ಲಿ ಇರಿಸಿದ್ದ ಬೆಳ್ಳಿ ಪಲ್ಲಕ್ಕಿಯಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಮೆರವ ಣಿಗೆಯಲ್ಲಿ ಪೂರ್ಣಕುಂಭ, ಧರ್ಮಧ್ವಜ ಗಳನ್ನು ಹಿಡಿದ ಬಾಲಕ-ಬಾಲಕಿಯರು, ಕಳಸ ಹೊತ್ತ ಮಹಿಳೆಯರು, ಮಂಗಳ ವಾದ್ಯ, ಚಿಟ್ಟಿಮೇಳ, ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.

ಸಾನಿಧ್ಯವನ್ನು ಅಮೋಘಕೀರ್ತಿ ಮಹಾ ರಾಜರು ಮತ್ತು ಸೋಂದಾ ಜೈನ ಮಠದ ಭಟ್ಟಾಕಳಂಕ ಸ್ವಾಮೀಜಿ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ಮಂಡ್ಯ ಜೈನ ಸಮಾಜದ ಅಧ್ಯಕ್ಷ ಬಿ.ಎಸ್.ಪದ್ಮನಾಭ್, ಉಪಾಧ್ಯಕ್ಷ ರಾಖೇ ಶರ್ರ್, ಕಾರ್ಯದರ್ಶಿ ಶ್ರೀಧರ್‍ಆರತಿಪುರ, ಕ್ಷೇತ್ರದ ಅಧ್ಯಕ್ಷ ಬ್ರಹ್ಮದೇವ್, ಮಹಿಳಾ ಅಧ್ಯಕ್ಷೆ ಜಯಂತಿ ಮಹೇಂದ್ರಬಾಬು, ಉಪಾ ಧ್ಯಕ್ಷೆ ಇಂದಿರಾ ಸುರೇಶ್, ಕಾರ್ಯದರ್ಶಿ ಜಯಂತಿ ಬಾಹುಬಲಿ, ಪೂರ್ಣಿಮಾ ಪದ್ಮನಾಭ್, ಹೆಚ್.ಪಿ.ಅಶೋಕ್ ಕುಮಾರ್, ದೇವೇಂದ್ರಕುಮಾರ್, ಪದ್ಮಕುಮಾರ್, ಎಸ್.ಪಿ.ಭಾನುಕುಮಾರ್, ಸ್ಥಳೀಯ ಬಾಹುಬಲಿ ಯುವಕ ಸಂಘದ ಪದಾಧಿ ಕಾರಿಗಳು ಮಂಡ್ಯ, ಬೆಳ್ಳೂರು, ಹಾಸನ, ಸಮಾಜದ ಮುಖಂಡರು ಇದ್ದರು.