ಭವನ್ಸ್ ಪ್ರಿಯಂವಧಾ ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಘಟಿಕೋತ್ಸವ

ಮೈಸೂರು, ಜ.11(ಎಂಟಿವೈ)- ಮೈಸೂರಿನ ವಿಜಯ ನಗರ ಮೊದಲ ಹಂತದಲ್ಲಿನÀ ಭಾರತೀಯ ವಿದ್ಯಾ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ಭವನ್ಸ್ ಪ್ರಿಯಂವಧಾ ಬಿರ್ಲಾ ಇನ್ಸ್‍ಸ್ಟಿಟೂಟ್ ಆಫ್ ಮ್ಯಾನೇಜ್‍ಮೆಂಟ್ ಸಂಸ್ಥೆ ಘಟಿಕೋತ್ಸವದಲ್ಲಿ 90 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಅವರು ಚಿನ್ನದ ಪದಕ ಗಳಿಸಿದ 42 ಮಂದಿ ಒಳಗೊಂಡಂತೆ 90 ಮಂದಿಗೆ ಪದವಿ ಪ್ರದಾನ ಮಾಡಿ, ಶುಭಕೋರಿದರು.

ಪದಕ ವಿಜೇತರು: ಎಲ್ಲಾ ವಿಷಯಗಳಲ್ಲೂ ಹೆಚ್ಚು ಅಂಕ ಗಳಿಸಿದ ಉತ್ತಮ ವಿದ್ಯಾರ್ಥಿಗೆ ನೀಡುವ ಎನ್. ರಾಮಾನುಜ-ಛೇರ್ಮನ್-ಬಿವಿಬಿ-ಕರ್ನಾಟಕ ಮೆಡಲ್ ಅನ್ನು ಎ.ಬಿ.ನೂತನ್, ಹೆಚ್.ಬಿ.ಸುಷ್ಮಿತಾ, ಸಯ್ಯದ್ ಶಭಾಷ್ ಪಡೆದರು.

ಶ್ರೀಮತಿ ಪ್ರಿಯಂವದಾ ದೇವಿ ಬಿರ್ಲಾ ಪ್ರಶಸ್ತಿ ಯನ್ನು ಎಂ.ಆರ್.ಮೋನಿಷಾ, ಹೆಚ್.ಬಿ.ಸುಷ್ಮಿತಾ, ಕೆ.ಬಿ.ಮೇಘನಾ, ಆರ್.ಎಸ್.ಲೋಧಾ ಮೆಡಲ್ ಅನ್ನು ಎ.ಬಿ.ನೂತನ್, ಎಲ್.ನಿತಿನ್, ಸಯ್ಯದ್ ಶಭಾಷ್, ಡಾ.ಎ.ವಿ.ನರಸಿಂಹಮೂರ್ತಿ-ಛೇರ್ಮನ್-ಬಿವಿಬಿ ಮೈಸೂರು ಮೆಡಲ್ ಅನ್ನು ಎಂ.ಆರ್.ಮೋನಿಷಾ, ಎಲ್.ನಿತಿನ್, ವೈ.ಸುನೀಲ್ ಪಡೆದುಕೊಂಡರು. `ಮೈಸೂರು ಮಿತ್ರ’ ಹಾಗೂ ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ರಾದ ಕೆ.ಬಿ.ಗಣಪತಿ ಅವರ ಹೆಸರಿನಲ್ಲಿ ಕೊಡಮಾಡುವ ಪದಕ ವನ್ನು ಎಂ.ಆರ್.ಮೋನಿಷಾ, ಎಲ್.ನಿತಿನ್, ಸಯ್ಯದ್ ಸಲ್ಮಾನ್ ಪಡೆದರೆ ಶ್ರೀಮತಿ ಸೀತಮ್ಮ ಸುಬ್ಬಯ್ಯ ಸ್ಮಾರಕ ಪದಕವನ್ನು ಎಂ.ಆರ್.ಮೋನಿಷಾ, ಎನ್.ಮಧು, ಜಿ.ಡಿ.ಜೀವನ್ ಅವರಿಗೆ, ಎಸ್.ಕೃಷ್ಣರಾಜ-ಖಜಾಂಚಿ ಬಿವಿಬಿ ಮೆಡಲ್ ಅನ್ನು ಎನ್.ಪ್ರೀತಿ, ಎನ್.ಮಧು, ತಬ್ರೇಸ್ ಪಾಷಾ ಅವರಿಗೆ ಪ್ರದಾನ ಮಾಡಲಾಯಿತು.

ಎ.ಎಸ್.ದೇವೇಂದ್ರಗುಪ್ತ ಮತ್ತು ಕುಟುಂಬದ ಪದಕವನ್ನು ಸಿ.ಜೆ.ಸಂದೀಪ್, ಎಲ್.ನಿತಿನ್, ಕೆ.ವಿ. ಮೇಘನಾ, ಕೆ.ದೇವೇಗೌಡ ಮೆಡಲ್ ಅನ್ನು ಎಸ್.ದಿಲೀಪ್ ಕುಮಾರ್, ಎಲ್.ನಿತಿನ್, ವೈ.ಸುನೀಲ್ ಅವರಿಗೆ, ಇದ್ರೀಸ್ ಅಹಮದ್ ಮೆಡಲ್ ಅನ್ನು ಎ.ಅಭಿಲಾಷ್, ಹೆಚ್.ಬಿ.ಸುಷ್ಮಿತಾ, ವೈ.ಸುನೀಲ್ ಅವರಿಗೆ ದೊರೆ ಯಿತು. ಎಸ್.ಸಿ.ರಾಮಸ್ವಾಮಿ ಮೆಡಲ್ ಅನ್ನು ಎಂ.ಆರ್. ಮೋನಿಷಾ, ಹೆಚ್.ಬಿ.ಸುಷ್ಮಿತಾ, ಸಯ್ಯದ್ ಸಲ್ಮಾನ್, ಡಾ. ಎ.ಟಿ.ಭಾಷ್ಯಂ ಮೆಡಲ್ ಅನ್ನು ಎಸ್.ದಿಲೀಪ್ ಕುಮಾರ್, ಹೆಚ್.ಬಿ.ಸುಷ್ಮಿತಾ, ಸಯ್ಯದ್ ಸಲ್ಮಾನ್ ಅವರಿಗೆ, ಪ್ರೊ.ಕೆ.ಎಲ್.ರಾಮದಾಸ್ ಮೆಡಲ್ ಅನ್ನು ಎನ್.ಗೋವರ್ಧನ್, ರಷ್ಮಿತಾ ಡಿಸೋಜಾ, ಸಿ. ವಿಜಯ್ ಅವರಿಗೆ ಎಕ್ಸಲೆನ್ಸ್ ಹೆರಿಟೇಜ್ ಕಲ್ಚರ್ ವಿಭಾಗದಲ್ಲಿ ಯಕ್ಷಗಾನಕ್ಕೆ ಗುರುಮೂರ್ತಿ, ಛಾಯಾ ಗ್ರಹಣಕ್ಕೆ ಎಸ್.ದರ್ಶನ್, ನೃತ್ಯಕ್ಕೆ ರಷ್ಮಿತಾ ಡಿಸೋಜಾ ಅವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಭವನ್ಸ್ ಪ್ರಿಯಂವಧಾ ಬಿರ್ಲಾ ಇನ್ಸ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸಂಸ್ಥೆ ಅಧ್ಯಕ್ಷ ಎನ್.ರಾಮಾನುಜ, ರೆಸಿಡೆಂಟ್ ಡೈರೆಕ್ಟರ್ ಡಾ.ಎ.ವಿ.ನರಸಿಂಹ ಮೂರ್ತಿ, ನಿರ್ದೇಶಕ ಡಾ. ಎ.ಟಿ.ಭಾಷ್ಯಂ, ಬಿವಿಬಿ ಕಾರ್ಯದರ್ಶಿ ಪಿ.ಎಸ್. ಗಣಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.