ಸಂಸದರಿಂದ ಬಿಜೆಪಿ ಟಿಕೆಟ್ ಮಾರಾಟ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್.ಡಿ. ಗಣೇಶ್ ಆರೋಪ

ಪಿರಿಯಾಪಟ್ಟಣ: ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರ ಸೇರಿದಂತೆ ಕೆ.ಆರ್.ನಗರ, ಮೈಸೂರಿನ ಚಾಮುಂಡೇಶ್ವರಿ, ವರುಣಾ ಹಾಗೂ ಇನ್ನಿತರ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿಂದ ಪಕ್ಷದ ಟಿಕೆಟ್ ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ನಿಷ್ಠಾವಂತ ಕಾರ್ಯಕರ್ತರು ಮುಖಂಡರುಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಚ್. ಡಿ. ಗಣೇಶ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಪಟ್ಟಣದ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಯಾಗಿದ್ದೆ. ಆದರೆ ಟಿಕೆಟ್ ಕೈ ತಪ್ಪಿರು ವುದರಿಂದ ಪಕ್ಷ ತ್ಯಜಿಸುತ್ತಿದ್ದೇನೆ ಎಂದು ತಿಳಿಸಿದರು. ನಾನು ನಿಷ್ಠಾವಂತ ಕಾರ್ಯ ಕರ್ತನಾಗಿ ಸುಮಾರು 15 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೆ. ಪಕ್ಷ ಪಿರಿಯಾಪಟಣದಲ್ಲಿ ಬಲಿಷ್ಠವಾಗಿ ಬೆಳೆಯಲು ಕಾರಣವಾದೆ. ಈ ಬಾರಿಯ ವಿಧಾನ ಸಭಾ ಚುನಾವಣೆಗೆ ನನ್ನ ಹೆಸರನ್ನು ತಾಲೂಕು ಘಟಕ ಮತ್ತು ಜಿಲ್ಲಾ ಘಟಕ ಹಾಗೂ ತಾಲೂಕು ಉಸ್ತುವಾರಿಯ ಎಲ್ಲಾ ಪದಾಧಿಕಾರಿಗಳು ಶಿಫಾರಸು ಮಾಡಿ ರಾಜ್ಯದ ಹಾಗೂ ಕೇಂದ್ರದ ವರಿಷ್ಠರಿಗೆ ಕಳಿಸಿದ್ದರು. ಕೊನೆಯ ಎರಡು ದಿನಗಳಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪನವರು ಬೆಂಗಳೂರು ಮೂಲದ ಉದ್ಯಮಿ ಎಸ್. ಮಂಜುನಾಥ್ ರವರಿಂದ ಹಣ ಪಡೆದು ಟಿಕೆಟ್‍ನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಎಲ್ಲಾ ಬೆಳವಣ ಗೆಗಳಿಂದ ಬೇಸತ್ತು ತಮ್ಮ ಬೆಂಬಲಿಗರು ಮತ್ತು ಅಭಿಮಾನಿಗಳೊಂದಿಗೆ ಚರ್ಚಿಸಿ ಮೇ 27ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ವಿಜಯಶಂಕರ್ ರವರ ನೇತೃತ್ವದಲ್ಲಿ ಪಿರಿಯಾಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ ಎಂದು ತಿಳಿಸಿದರು. ಪಿರಿಯಾಪಟ್ಟಣ, ಕೆ.ಆರ್. ನಗರ, ಚಾಮುಂಡೇಶ್ವರಿ, ವರುಣಾ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಆಯ್ಕೆ ಜೆಡಿಎಸ್ ಒಳ ಒಪ್ಪಂದದಂತೆ ನಡೆಯುತ್ತಿದೆ ಎಂದು ಆರೋಪಿಸಿದರು

ಮಾಜಿ ಸಚಿವ ಎಚ್. ವಿಜಯಶಂಕರ್ ಮಾತನಾಡಿ, ಭಾರತೀಯ ಜನತಾ ಪಕ್ಷದಲ್ಲಿ ನಿಷ್ಠಾವಂತರಿಗೆ ಯಾವುದೇ ಸ್ಥಾನಮಾನ ಗಳಿಲ್ಲ. ಕೇಂದ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಲಾಲ್‍ಕೃಷ್ಣ ಆಡ್ವಾಣ ಯವರು ಇಂದು ಮೂಲೆ ಗುಂಪಾಗಿದ್ದಾರೆ. ಇದಕ್ಕಿಂತ ಉತ್ತಮ ಉದಾ ಹರಣೆ ಯಾವುದೂ ಇಲ್ಲ ಎಂದರು.

ತಾಲೂಕಿನಲ್ಲಿ ಶಾಸಕ ಕೆ ವೆಂಕಟೇಶ್ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡುವ ಹೊಣೆಗಾರಿಕೆ ತಮ್ಮೆಲ್ಲರ ಮೇಲಿದೆ ಎಂದರು.

ಬಿಜೆಪಿ ಒಬಿಸಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎಂ.ಎಂ. ರಾಜೇಗೌಡ, ಎಸ್ಸಿ ಮೋರ್ಚಾ ತಾಲೂಕು ಪ್ರಧಾನ ಕಾರ್ಯ ದರ್ಶಿ ಡಾ. ಸೋಮಣ್ಣ, ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಮಹದೇವ, ಗ್ರಾ.ಪಂ. ಮಾಜಿ ಉಪಾಧ್ಯಕ್ಷಸುಂಡುವಾಳು ಮಹದೇವ್, ಕನಕ ಸ್ನೇಹ ಬಳಗದ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಲೋಹಿತ್, ಲಕ್ಷ್ಮಣ, ಚಂದ್ರಶೇಖರ್, ಮಣ , ವಿಜಯ್, ಟಿ.ಜೆ. ಬಸವರಾಜ್, ಪುರಸಭಾ ಸದಸ್ಯ ರಮೇಶ್ ಮತ್ತಿತರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಗೊಂಡರು.

ಮುಖಂಡರುಗಳಾದ ಡಿ.ಟಿ. ಸ್ವಾಮಿ, ರಾಜಶೇಖರ್, ನೀಲಗಂಗಾ, ಜಯಣ್ಣ, ಅಜೀಜ್ ಅಹ್ಮದ್, ಶಫಿ, ಬಿ.ಜೆ ಪುಟ್ಟ ಸ್ವಾಮಿ ರಹಮತ್ ಜಾನ್ ಬಾಬು, ಎಸ್‍ಎಂಎಸ್ ರಾಜು, ರಂಗಪ್ಪ, ವಸಂತ ಕುಮಾರ್ ಇನ್ನಿತರರು ಹಾಜರಿದ್ದರು.