ವಸತಿ ಯೋಜನೆ ಸಂಬಂಧಿತ 2 ದಿನಗಳ ವಸ್ತುಪ್ರದರ್ಶನ ಆರಂಭ

ಮೈಸೂರು: ಕಟ್ಟಡ ನಿರ್ಮಾಣ ಸಂಸ್ಥೆ ಬ್ರಿಗೇಡ್ ಗ್ರೂಪ್‍ನ ವಸತಿ ಯೋಜನೆಗೆ ಸಂಬಂಧಿಸಿದ ಎರಡು ದಿನಗಳ ವಸ್ತು ಪ್ರದರ್ಶನ ಶನಿವಾರ ಚಾಲನೆ ಪಡೆದುಕೊಂಡಿತು.

‘ಬ್ರಿಗೇಡ್ ಇಜಿ ಹೋಂ ಕಾರ್ನಿವಲ್/ ಶೀರ್ಷಿಕೆಯಡಿ ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಗ್ರಾಂಡ್ ಮಕ್ರ್ಯುರ್ ಹೋಟೆಲ್‍ನ ಸಭಾಂಗಣದಲ್ಲಿ ಈ ಪ್ರದರ್ಶನ ಆರಂಭಗೊಂಡಿದ್ದು, ಸದರಿ ಸಂಸ್ಥೆ ವಸತಿ ಯೋಜನೆಗಳ ಸಮಗ್ರ ಮಾಹಿತಿ ಅನಾವರಣಗೊಂಡಿವೆ.

ವಸ್ತು ಪ್ರದರ್ಶನ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ಬ್ರಿಗೇಡ್ ಸಂಸ್ಥೆಯ ಮೈಸೂರು ಶಾಖೆಯ ಮುಖ್ಯಸ್ಥ ಬಿ.ಆರ್.ಸುಚೇಂದ್ರ್ರ, ಕಳೆದ ವರ್ಷಗಿಂತ ಪ್ರಸ್ತುತ ರಿಯಲ್ ಎಸ್ಟೇಟ್ ಚೇತರಿಸಿಕೊಳ್ಳುತ್ತಿದ್ದು, ವಸತಿ ಆಕಾಂಕ್ಷೆ ಹೊಂದಿರುವವರು ಹೂಡಿಕೆ ಮಾಡಲು ಇದು ಸುಸಂದರ್ಭ ಎಂದು ತಿಳಿಸಿದರು.

ಜಿಎಸ್‍ಟಿ ಮತ್ತು ಅಧಿಕ ಮುಖಬೆಲೆಯ ಅಪಮೌಲ್ಯೀಕರಣದಿಂದ ಕಳೆದ ಒಂದು ವರ್ಷದಿಂದ ಬಳಲುತ್ತಿದ್ದ ರಿಯಲ್ ಎಸ್ಟೇಟ್ ಮಾರುಕಟ್ಟೆ ಇದೀಗ ಸುಧಾರಣೆ ಕಂಡುಕೊಳ್ಳುತ್ತಿದೆ. ಕಳೆದ ಎರಡು ವರ್ಷಗಳಿಂದ ಕಟ್ಟಡ ನಿರ್ಮಾಣ ಸಾಮಾಗ್ರಿಗಳಾದ ಸ್ಟೀಲ್, ಸಿಮೆಂಟ್ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆಯಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ. ಡೀಸೆಲ್ ಬೆಲೆಯಲ್ಲಿಯೂ ಏರಿಕೆಯಾಗುತ್ತಿರುವ ಪರಿಣಾಮ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಾಣ ಕೆ ವೆಚ್ಚವೂ ದುಬಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಫ್ಲಾಟ್‍ಗಳ ಬೆಲೆ ಇನ್ನಷ್ಟು ಹೆಚ್ಚಳವಾಗಲಿದ್ದು, ಹೀಗಾಗಿ ಸ್ವಂತ ವಸತಿ ಹೊಂದುವ ಆಕಾಂಕ್ಷೆ ಹೊಂದಿರುವವರು ಈ ವೇಳೆಯಲ್ಲಿ ಖರೀದಿಸುವ ಮೂಲಕ ಮುಂದಿನ ದಿನಗಳಲ್ಲಿ ದುಬಾರಿ ಬೆಲೆ ತೆರುವುದರಿಂದ ಪಾರಾಗಬಹುದು ಎಂದು ಅಭಿಪ್ರಾಯಪಟ್ಟರು.

ಜೂ.10ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಪ್ರದರ್ಶನ ತೆರೆದಿರುತ್ತದೆ. ಬ್ರಿಗೇಡ್ ಗ್ರೂಪ್‍ನ ಮೈಸೂರು ಶಾಖೆಯ ಮಾರಾಟ ವಿಭಾಗದ ಮುಖ್ಯಸ್ಥೆ ಎ.ಆರ್.ಪ್ರತಿಭಾ ಮತ್ತಿತರರು ಹಾಜರಿದ್ದರು.