13 ವಾರ್ಡ್‍ಗಳಲ್ಲಿ ಬಿಎಸ್‍ಪಿ ಅಭ್ಯರ್ಥಿಗಳ ಸ್ಪರ್ಧೆ

ಮೈಸೂರು:  ವಿಧಾನಸಭೆಯಲ್ಲಿ ಕೇವಲ ಒಂದು ಸ್ಥಾನ ಗಳಿಸಿ, ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿರುವ ಬಹುಜನ ಸಮಾಜಪಕ್ಷ (ಬಿಎಸ್‍ಪಿ), ಇದೀಗ ಮೈಸೂರು ಮಹಾನಗರಪಾಲಿಕೆ ಚುನಾವಣೆಯತ್ತ ದೃಷ್ಟಿ ಹರಿಸಿದ್ದು, ಪ್ರಮುಖ ಪಕ್ಷಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ಸಿದ್ಧವಾಗಿದೆ.

ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಒಟ್ಟು 13 ವಾರ್ಡ್‍ಗಳಲ್ಲಿ ಬಿಎಸ್‍ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 8, ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 2 ಹಾಗೂ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 3 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಣದಲ್ಲಿರುವ ವಾರ್ಡ್‍ವಾರು ಅಭ್ಯರ್ಥಿಗಳ ವಿವರ ಕೆಳಕಂಡಂತಿದೆ.

7ನೇ ವಾರ್ಡ್ (ಮೇಟಗಳ್ಳಿ)- ಅನಂತ್‍ನಾಗ್, 14ನೇ ವಾರ್ಡ್ (ಸತ್ಯನಗರ)- ಅರವಿಂದ, 15ನೇ ವಾರ್ಡ್ (ರಾಜೇಂದ್ರನಗರ)- ವಿನೋದ್‍ಕುಮಾರ್, 16ನೇ ವಾರ್ಡ್ (ಸುಭಾಷ್‍ನಗರ)- ವಾಜೀದ್ ಖಾನ್, 17ನೇ ವಾರ್ಡ್ (ಬನ್ನಿಮಂಟಪ)- ಎಚ್.ಶಾಂತಾ, 27ನೇ ವಾರ್ಡ್ (ವೀರನಗೆರೆ)- ಉಮರ್ ಪಾಷಾ, 33ನೇ ವಾರ್ಡ್ (ಅಜೀಜ್‍ಸೇಠ್‍ನಗರ)- ಅಸ್ಗರ್ ಖಾನ್, 35ನೇ ವಾರ್ಡ್ (ಸಾತಗಳ್ಳಿ)- ಅಪ್ರೋಜ್ ಖಾನ್, 38ನೇ ವಾರ್ಡ್ (ಗಿರಿಯಾಬೋವಿಪಾಳ್ಯ)- ಜಯಪುತ್ರ, 39ನೇ ವಾರ್ಡ್ (ಗಾಯಿತ್ರಿಪುರಂ)- ರವಿಕುಮಾರ್, 47ನೇ ವಾರ್ಡ್ (ಕುವೆಂಪುನಗರ)- ಡಾ.ಎಂ.ಬಸವರಾಜು, 56ನೇ ವಾರ್ಡ್ (ಕೃಷ್ಣಮೂರ್ತಿಪುರಂ)- ಬೇಗಂ ಮತ್ತು 60ನೇ ವಾರ್ಡ್ (ಅಶೋಕಪುರಂ)- ಜಿ.ತೇಜಸ್ವಿನಿ ಕಣದಲ್ಲಿರುವ ಸ್ಪರ್ಧಿಗಳು.

ಈ ಪೈಕಿ ಪರಿಶಿಷ್ಟ ಜಾತಿ-4, ಹಿಂದುಳಿದ ವರ್ಗ-1, ಹಿಂದುಳಿದ ವರ್ಗ ಎ-3, ಹಿಂದುಳಿದ ವರ್ಗ-ಎ ಮಹಿಳೆ-1, ಸಾಮಾನ್ಯ- 2 ಮತ್ತು ಸಾಮಾನ್ಯ ಮಹಿಳೆ- 2 ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಬಿಎಸ್‍ಪಿ ಮೈಸೂರು ವಲಯ ಉಸ್ತುವಾರಿ ಸೋಸಲೆ ಎಂ.ಸಿದ್ದರಾಜು ತಿಳಿಸಿದ್ದಾರೆ.