ಹಾಸನದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಶಿಬಿರ

ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಲಯನ್ಸ್ ಸೇವಾಸಂಸ್ಥೆ (ಕ್ಲಬ್), ಹಿಮ್ಸ್ ಆಸ್ಪತ್ರೆ ಹಾಗೂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಶಿಬಿರ ಯಶಸ್ವಿಗೊಂಡಿತು.

ಶಿಬಿರದಲ್ಲಿ ಉಪನ್ಯಾಸವನ್ನು ಹಿಮ್ಸ್ ಆಸ್ಪತ್ರೆ ವೈದ್ಯ ಡಾಕ್ಟರ್ ಸಿ.ಎನ್.ಜಗದೀಶ್ ಮಾತನಾಡಿ, ಕ್ಯಾನ್ಸರ್ ಎಂಬುದು ಮನುಷ್ಯನ ಬೇಜವಾಬ್ದಾರಿತನವು ಕೂಡ ಸೇರಿದೆ. ಅದರಲ್ಲೂ ಸ್ತ್ರೀಯರು ಮೊದಲೇ ಎಚ್ಚರದಿಂದ ಇರುವುದು ಉತ್ತಮ ಎಂದರು. ಹೆಚ್ಚಿನ ಜಿಡ್ಡು ಪದಾರ್ಥ, ಅನವಂಶಿ ಯವಾಗಿ ಸೇರಿದಂತೆ ವಿವಿಧ ರೀತಿಯಲ್ಲಿ ಕ್ಯಾನ್ಸರನ್ನು ಕಾಣಬಹುದು. ಸೇವಿಸುವ ಆಹಾರ ಪದಾರ್ಥದ ಬಗ್ಗೆ ಎಚ್ಚರ ವಹಿ ಸುವುದು ಮುಖ್ಯ. ಬೀಡಿ, ಸಿಗರೇಟಿನ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸ ಬೇಕು. ಇಲ್ಲವಾದರೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

ಮುಂಜಾಗೃತೆ ವಹಿಸಿದರೆ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ. ವಿದ್ಯಾರ್ಥಿ ದೆಸೆಯಲ್ಲೇ ಅನೇಕರು ದುಶ್ಚಟಕ್ಕೆ ಬಲಿ ಯಾಗಿ ತಮ್ಮ ಮುಂದಿನ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ತಾವು ಎಚ್ಚರದಿಂದ ಇರುವುದರ ಜೊತೆಗೆ ತಮ್ಮ ಸ್ನೇಹಿತರಿಗೂ ಅರಿವು ಮೂಡಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಲಯನ್ಸ್ ಸೇವಾ ಸಂಸ್ಥೆ (ಕ್ಲಬ್) ಅಧ್ಯಕ್ಷ ಶಿವಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು. ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳ ಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಬರುವ ಲಕ್ಷಣಗಳು ಮತ್ತು ತಡೆಗಟ್ಟಲು ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಕೆಲ ಸಮಯ ಪ್ರೊಜೆಕ್ಟರ್ ಮೂಲಕ ವೀಡಿಯೋ ಪ್ರದರ್ಶಿಸಿ ಕ್ಯಾನ್ಸರ್ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.

ಇದೇ ವೇಳೆ ಎ.ವಿ.ಕಾಂತಮ್ಮ ಕಾಲೇಜು ಪ್ರಾಂಶುಪಾಲೆ ಆಶಾಲತ, ಲಯನ್ಸ್ ಸೇವಾ ಸಂಸ್ಥೆ (ಕ್ಲಬ್) ಉಪಾಧ್ಯಕ್ಷ ಹೆಚ್. ಆರ್.ಚಂದ್ರೇಗೌಡ, ವಿಭಾಗದ ಮುಖ್ಯಸ್ಥೆ ಪಾರಿಜಾತ ಹಾಗೂ ಸಿಬ್ಬಂದಿ ವರ್ಗ ದವರು ಭಾಗವಹಿಸಿದ್ದರು.