ಎರಡು ದಿನಗಳ ಪಕ್ಷಿ ಉತ್ಸವಕ್ಕೆ ತೆರೆ

ಮೈಸೂರು,ಡಿ.29(ಎಂಟಿವೈ)- ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಪಕ್ಷಿ ಉತ್ಸವದಲ್ಲಿ ಪಾಲ್ಗೊಂ ಡಿದ್ದ ಪಕ್ಷಿ ಪ್ರಿಯರು ನಾನಾ ಬಗೆಯ ಪಕ್ಷಿಗಳ ವೀಕ್ಷಿಸಿ, ಅವುಗಳ ಜೀವನ ಕ್ರಮದ ಬಗ್ಗೆ ಮಾಹಿತಿ ಪಡೆದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಮೃಗಾಲಯದ ಸಂಯುಕ್ತಾಶ್ರಯದಲ್ಲಿ ನಡೆಸಿದ `ಪಕ್ಷಿ ಉತ್ಸವ’ದಲ್ಲಿ ಬೆಂಗಳೂರು, ಕೊಡಗು, ಚಾಮ ರಾಜನಗರ, ಮಂಡ್ಯ ಸೇರಿದಂತೆ ವಿವಿಧೆಡೆ ಯಿಂದ ನೂರಾರು ಮಂದಿ ಪಾಲ್ಗೊಂಡಿ ದ್ದರು. ಉತ್ಸವದ ಮೊದಲ ದಿನವಾದ ಶನಿ ವಾರ ಪಕ್ಷಿಗಳ ಸಂರಕ್ಷಣೆಯ ಬಗ್ಗೆ ತಜ್ಞ ರಿಂದ ವಿಶೇಷ ಉಪನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಿತ್ತು.

ಎರಡನೇ ದಿನವಾದ ಇಂದು ಬೆಳಿಗ್ಗೆ ಪಕ್ಷಿ ಹಬ್ಬದಲ್ಲಿ ಪಾಲ್ಗೊಂಡಿದ್ದವರು ಆರು ತಂಡಗಳಾಗಿ ವಿವಿಧ ಕೆರೆಗಳಿಗೆ ಪಕ್ಷಿ ವೀಕ್ಷ ಣೆಗೆ ಕರೆದೊಯ್ಯಲಾಯಿತು. ತಿಪ್ಪಯ್ಯನ ಕೆರೆ, ಲಿಂಗಾಂಬುದಿ ಕೆರೆ, ವರಕೋಡಿನ ಗಿರಿಬೆಟ್ಟದÀಕೆರೆ, ಹೆಬ್ಬಾಳು ಕೆರೆಗೆ ಪಕ್ಷಿ ವೀಕ್ಷ ಣೆಗೆ ಕರೆದೊಯ್ಯಲಾಯಿತು. ತಜ್ಞರು ಹಾಗೂ ಸ್ವಯಂ ಸೇವಕರೊಂದಿಗೆ ಪಕ್ಷಿ ವೀಕ್ಷಿಸಿ ಸಂಭ್ರಮಿಸಿದರು. ಈ ಉತ್ಸವದಲ್ಲಿ ಪಕ್ಷಿಗಳ ಬಗ್ಗೆ ಆಸಕ್ತಿ ಉಳ್ಳವರೇ ಹೆಚ್ಚಾಗಿ ಬಂದಿದ್ದ ರಿಂದ ತಾವೇ ವಿವಿಧ ಪಕ್ಷಿಗಳನ್ನು ಗುರುತಿಸಿ ದರು. ತಿಪ್ಪಯ್ಯನಕೆರೆಯಲ್ಲಿ 90ಕ್ಕಿಂತಲೂ ಹೆಚ್ಚು, ಗಿರಿಬೆಟ್ಟಯ್ಯದÀ ಕೆರೆಯಲ್ಲಿ 67, ಹೆಬ್ಬಾಳು ಕೆರೆಯಲ್ಲಿ 55, ಲಿಂಗಾಂಬುದಿ ಕೆರೆಯಲ್ಲಿ 60 ಬಗೆಯ ಪಕ್ಷಿಗಳು ಗೋಚ ರಿಸಿವೆ. ವೀಕ್ಷಕರು ತಮಗೆ ಕಂಡ ಪಕ್ಷಿಗಳು ಯಾವ ಬಗೆಯ ಪಕ್ಷಿ, ಅವುಗಳ ವಿಶೇ ಷತೆ, ಜೀವಿತಾವಧಿ ಸೇರಿದಂತೆ ವಿವಿಧ ಮಾಹಿತಿಯನ್ನು ನಮೂದಿಸಿದರು.

ನಂತರ ಬೆಳಿಗ್ಗೆ 10.30ರಿಂದ ಮದ್ಯಾಹ್ನ 1 ಗಂಟೆವರೆಗೆ ತಜ್ಞರಾದ ಡಾ.ಸಮೀರಾ ಅಗ್ನಿಹೋತ್ರಿ, ಅನಘ, ಪಕ್ಷಿಗಳ ಸಂರಕ್ಷಣೆ, ಮೈಸೂರಿನ ಸುತ್ತಮುತ್ತ ಇರುವ ಪ್ರಮುಖ ಪಕ್ಷಿಗಳ ಬಗ್ಗೆ ಉಪನ್ಯಾಸ ನೀಡಿದರು.

ಮಧ್ಯಾಹ್ನ 2ರಿಂದ 3ರವರೆಗೆ ಡಾ. ಅಭಿಜಿತ್ ರಾಜ್ಯದಲ್ಲಿರುವ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನ 3.30ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ಪಕ್ಷಿ ಉತ್ಸವದಲ್ಲಿ ಭಾಗಿಯಾಗಿದ್ದವರು ತಮ್ಮ ಅನಿಸಿಕೆ ಹಂಚಿಕೊಂಡರು.

ಅಲ್ಲದೆ ಮುಂದಿನ ವರ್ಷ ಪಕ್ಷಿ ಹಬ್ಬ ವನ್ನು ಇನ್ನಷ್ಟು ಅರ್ಥಪೂರ್ಣವಾಗಿ ನಡೆ ಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿ ದರು. ಇದೇ ವೇಳೆ ಪಕ್ಷಿ ಹಬ್ಬದಲ್ಲಿ ಪಾಲ್ಗೊಂ ಡಿದ್ದವರಿಗೆ ಪ್ರಮಾಣ ಪತ್ರ ವಿತರಿಸಿದ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇ ಶಕ ಅಜಿತ್ ಎಂ.ಕುಲಕರ್ಣಿ, ಮುಂದಿನ ವರ್ಷ ಪಕ್ಷಿ ಹಬ್ಬದಲ್ಲಿ ಕೆಲವು ಮಾರ್ಪಾಡು ಮಾಡಲಾಗುತ್ತದೆ. 150 ಮಂದಿಗೆ ಅವ ಕಾಶ ನೀಡಿ ಆ್ಯಂಪಿಥಿಯೇಟರ್‍ನಲ್ಲಿ ಕಾರ್ಯಕ್ರಮ ನಡೆಸಲು ಕ್ರಮ ಕೈಗೊಳ್ಳು ತ್ತೇವೆ. ಅಲ್ಲದೆ ಪಕ್ಷಿಪ್ರಿಯರ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷಿ ತಜ್ಞರಾದ ತನುಜಾ, ಶೈಲೇಶ್ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.