ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ಪುನರಾರಂಭಿಸಲು ಸಿಎನ್‍ಸಿ ಆಗ್ರಹ

ಮಡಿಕೇರಿ: ಕೊಡವ ಬುಡ ಕಟ್ಟು ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸುವ ಸಲು ವಾಗಿ, ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯ ಯನವನ್ನು ಮುಂದುವರಿಸಲು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ, ಸಿಎನ್‍ಸಿ ಸಂಘ ಟನೆಯ ಪದಾಧಿಕಾರಿಗಳು ಕೊಡವ ಜನಾಂಗಕ್ಕೆ ಸಂವಿಧಾನ ಭದ್ರತೆ ಒದಗಿಸು ವಂತೆ ಒತ್ತಾಯಿಸಿದರು. ಕೊಡವ ಕುಲ ವನ್ನು ಸಂವಿಧಾನದ ಶೆಡ್ಯೂಲ್ 340-342ರ ಅಡಿಯಲ್ಲಿ ಸೇರ್ಪಡೆ ಮಾಡುವ ಮೂಲಕ ಆಂತರಿಕ ರಾಜಕೀಯದ ಸ್ವಯಂ ನಿರ್ಣಯ ಹಕ್ಕು,ಚಾರಿತ್ರಿಕ ನಿರಂತರತೆಯ ಖಾತರಿ, ಸಾಂಪ್ರದಾಯಿಕ ಭೂಮಿಗೆ ಭದ್ರತೆ ಮತ್ತು ರಾಜಕೀಯ ಆರ್ಥಿಕ ಸ್ವಾತಂತ್ರಕ್ಕೆ ಸಂವಿಧಾನ ಭದ್ರತೆ ಕಲ್ಪಿಸ ಬೇಕೆಂದು ಒತ್ತಾಯಿಸಿದರು.

ಈ ಹಿಂದೆ ಸಿಎನ್‍ಸಿ ಸಲ್ಲಿಸಿದ ಮನ ವಿಗೆ ಸ್ಪಂದಿಸಿದ ಕೇಂದ್ರದ ಎನ್‍ಡಿಎ ಸರ್ಕಾರ, ಕರ್ನಾಟಕ ರಾಜ್ಯ ಸರ್ಕಾರಕ್ಕೆ, ಕೊಡವ ಕುಲದ ನೈಜ ಸ್ಥಿತಿ ಗತಿಗಳ ಕುರಿತು ವೈಜ್ಞಾ ನಿಕವಾಗಿ ಮತ್ತು ಕೊಡವ ಸಮಗ್ರ ಕುಲ ಶಾಸ್ತ್ರವನ್ನು ಕೂಡ ಅಧ್ಯಯನ ಮಾಡಿ ವರದಿ ನೀಡುವಂತೆ ಸೂಚಿಸಿತ್ತು. ಅದ ರಂತೆ ರಾಜ್ಯ ಸಮಾಜ ಕಲ್ಯಾಣ ಇಲಾಖೆ, ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲಕ ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಮುಂದಾಗಿತ್ತು. ಮಾತ್ರವಲ್ಲದೆ ಈ ಅಧ್ಯಯನಕ್ಕೆ 11 ಲಕ್ಷ ರೂಪಾಯಿ ಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಕೆಲವು ಬುದ್ಧಿಜೀವಿಗಳು ಮತ್ತು ಕೊಡವ ವಿರೋಧಿಗಳು ಪಿತೂರಿ ನಡೆಸಿ ಈ ಅಧ್ಯ ಯನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಮೊಟಕುಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಅಧ್ಯಯನವನ್ನು ಮರು ಆರಂಭಿಸಲು ಆದೇಶ ನೀಡಬೇಕೆಂದು ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಆಗ್ರಹಿಸಿದ್ದಾರೆ. ಮಾತ್ರವಲ್ಲದೆ ಈ ಅಧ್ಯಯನದ ವರದಿ ಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಕೊಡವ ಜನಾಂಗವನ್ನು ಸಂವಿ ಧಾನದ ಶೆಡ್ಯೂಲ್‍ಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡಬೇಕೆಂದು ನಾಚಪ್ಪ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಲಿಯಂಡ ಪ್ರಕಾಶ್, ನಂದಿನೆರವಂಡ ಪವನ್,ಜಮ್ಮಡ ಮೋಹನ್, ಕಾಂಡೇರ ಸುರೇಶ್, ಬಲ್ಲ ಚಂಡ ರಾಮಕೃಷ್ಣ, ಕಿರಿಯಮಾಡ ಶರೀನ್, ಅಜ್ಜಿಕುಟ್ಟೀರ ರಾಣಿ , ಪುಲ್ಲೇರ ಸ್ವಾತಿ, ಮೂಕೇಂಡ ದಿಲೀಪ್ ಸೇರಿದಂತೆ ಸಿಎನ್‍ಸಿ ಸಂಘಟನೆಯ ಪದಾಧಿಕಾರಿ ಗಳು ಪಾಲ್ಗೊಂಡಿದಿದ್ದರು.