ಸೋಮವಾರಪೇಟೆ, ಮಡಿಕೇರಿಯಲ್ಲಿ ಭಗವಾನ್ ವಿರುದ್ಧ ದೂರು ದಾಖಲು

ಸೋಮವಾರಪೇಟೆ: ಶ್ರೀರಾಮನ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿ ಸಿರುವ ಸಾಹಿತಿ ಭಗವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಇಲ್ಲಿನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಭಗವಾನ್ ಹಿಂದೂಗಳ ಪೂಜನೀಯ ದೇವರುಗಳನ್ನು ಕೀಳುಮಟ್ಟದಲ್ಲಿ ಬಿಂಬಿ ಸಿದ್ದಾರೆ. ಇದು ಅಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ತಕ್ಷಣ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳ ಬೇಕು. ತಪ್ಪಿದಲ್ಲಿ ತೀವ್ರ ಪ್ರತಿಭಟನೆ ನಡೆಸ ಲಾಗುವುದು ಎಂದು ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಪ.ಪಂ. ಸದಸ್ಯ ಬಿ.ಆರ್. ಮಹೇಶ್, ಯುವ ಮೋರ್ಚಾ ನಗರಾಧ್ಯಕ್ಷ ಶರತ್‍ಚಂದ್ರ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಇಲಾಖೆಯ ಮೇಲಧಿಕಾರಿ ಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾ ಧಿಕಾರಿ ಶಿವಶಂಕರ್ ತಿಳಿಸಿದರು.

ಮಡಿಕೇರಿ ವರದಿ: ವಿವಾದಾತ್ಮಕ ಪುಸ್ತಕ ಬರೆದ ವಿಚಾರವಾದಿ ಭಗವಾನ್ ವಿರುದ್ಧ ಮಡಿ ಕೇರಿ ವಕೀಲ ಕೃಷ್ಣಮೂರ್ತಿ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ರಾಮಮಂದಿರ ಏಕೆ ಬೇಡ? ಎಂಬ ಪುಸ್ತಕದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಅಂಶಗಳಿವೆ ಎಂದು ಆರೋಪಿಸಿರುವ ಅವರು ಭಗವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಶ್ರೀರಾಮ, ಸೀತೆ ಕುರಿತು ಅವಹೇಳನ ಮಾಡಿರುವುದಲ್ಲದೆ ಮಹಾತ್ಮ ಗಾಂಧಿ ಬಗ್ಗೆಯೂ ಅಗೌರವ ತೋರಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.