ವೃಕ್ಷಮಾತೆ ತಿಮ್ಮಕ್ಕ ನಿಧನ ವದಂತಿ ಕುರಿತು ಕಮಿಷನರ್‍ಗೆ ದೂರು ನೀಡಲು ಮುಂದಾದ ದತ್ತು ಪುತ್ರ

ಬೇಲೂರು: ನಾಡೋಜ ಪ್ರಶಸ್ತಿ ಪುರಸ್ಕøತೆ ಸಾಲುಮರದ ತಿಮ್ಮಕ್ಕನವರು ನಿಧನ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟಿಸಿರುವವರ ವಿರುದ್ಧ ಕ್ರಮ ಕೈಗೊ ಳ್ಳುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿರುವ ಕಮಿಷನರ್ ಕಚೇರಿಗೆ ಸಾಲು ಮರದ ತಿಮ್ಮಕ್ಕನವರೊಂದಿಗೆ ತೆರಳಿ ದೂರು ಸಲ್ಲಿ ಸುವುದಾಗಿ ಅವರ ದತ್ತು ಪುತ್ರ ಬಳ್ಳೂರು ಉಮೇಶ್ ತಿಳಿಸಿದ್ದಾರೆ.

‘ಮೈಸೂರು ಮಿತ್ರ’ ನೊಂದಿಗೆ ಮಾತ ನಾಡಿದ ಬಳ್ಳೂರು ಉಮೇಶ್, ಕಳೆದ ಮೂರ್ನಾಲ್ಕು ವರ್ಷದಿಂದಲೂ ಕೆಲವು ಕಿಡಿಗೇಡಿಗಳು ಸಾಲುಮರದ ತಿಮ್ಮಕ್ಕ ಹಾಗೂ ತಮ್ಮ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ಹಾಗೂ ತಿಮ್ಮಕ್ಕನವರ ಹೆಸರಿಗೆ ಮಸಿ ಬಳಿಯಬೇಕು ಎಂದು ಹಲವಾರು ರೀತಿ ಯಲ್ಲಿ ಯೋಜನೆಗಳನ್ನು ರೂಪಿಸಿ ವಿಫಲ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಾಮಾಜಿಕ ಜಾಲತಾಣದಲ್ಲಿ ತಿಮ್ಮಕ್ಕನವರು ಮರಣ ಹೊಂದಿದ್ದಾರೆ ಎಂದು ಪ್ರಕಟಿಸುವ ಮೂಲಕ ತಮ್ಮ ಕಿಡಿಗೇಡಿತನವನ್ನು ಮೆರೆದಿದ್ದಾರೆ. ಸಾಮಾ ಜಿಕ ಜಾಲತಾಣವನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಕೂಡಲೇ ತನಿಖೆ ನಡೆಸ ಬೇಕು ಮತ್ತು ಸರ್ಕಾರ ಸಾಲುಮರದ ತಿಮ್ಮಕ್ಕನವರಿಗೆ ಸೂಕ್ತ ಭದ್ರತೆ ಒದಗಿಸ ಬೇಕು ಎಂದು ಒತ್ತಾಯಿಸಿದರು.

ಕಳೆದ ಮೂರ್ನಾಲ್ಕು ತಿಂಗಳಿಂದ ಸಾಲುಮರದ ತಿಮ್ಮಕ್ಕನವರು ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ತಮ್ಮ ಕುಟುಂಬದೊಡನೆ ಆರಾಮವಾಗಿ ಜೀವನ ಕಳೆಯುತ್ತಿದ್ದಾರೆ. ಬೆಂಗಳೂರಿನ ವಾತಾವರಣ ಅವರಿಗೆ ಒಗ್ಗದ ಕಾರಣ ಮಲೆನಾಡಿನ ಪ್ರಕೃತಿಯ ಬಳ್ಳೂರು ಗ್ರಾಮದಲ್ಲೇ ಇದ್ದೇವೆ. ಆದರೆ ಇಂದು ಸಾಮಾಜಿಕ ಜಾಲತಾಣದಲ್ಲಿ ನಿಧನದ ಸುದ್ದಿ ಪ್ರಕಟಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ತಿಮ್ಮಕ್ಕನವರ ಜೊತೆ ಬೆಂಗಳೂರಿಗೆ ತೆರಳಿ ಕಮಿಷನರ್‍ಗೆ ದೂರು ನೀಡಲಾಗುವುದು ಎಂದರು.

ಈಗಾಗಲೇ ರಾಜ್ಯದ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ ಅವರು ದೂರ ವಾಣ ಮೂಲಕ ತಮ್ಮೊಂದಿಗೆ ಮಾತನಾಡಿದ್ದು, ಸುದ್ದಿ ಪ್ರಕಟಿಸಿರುವ ಬಗ್ಗೆ ಈಗಾಗಲೇ ಸಂಬಂಧಿಸಿದ ಇಲಾಖೆ ಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ, ತಮಗೆ ಸೂಕ್ತವಾದ ಭದ್ರತೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.