ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಕೊರತೆ

ಕೊಳ್ಳೇಗಾಲ: ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಮುಂಬ ರುವ ಚುನಾವಣೆಯಲ್ಲಿ ನಾನು ಪ್ರಬಲ ಟಿಕೆಟ್ ಆಕಾಂಕ್ಷಿ ಎಂದು ಬಿಜೆಪಿ ಮುಖಂಡರೂ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರೂ ಆದ ಕೆ.ಶಿವರಾಮು ಹೇಳಿದರು.

ಅವರು ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯ ಜನತಾ ಪಾರ್ಟಿ ವರಿಷ್ಠರಿಗೆ ಚಾ.ನಗರ ಕ್ಷೇತ್ರದಿಂದ ಲೋಕಸಭೆ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ಕೇಳಿದ್ದೇನೆ. ಪಕ್ಷವು ನನಗೆ ಅವಕಾಶ ನೀಡಿ ಟಿಕೆಟ್ ನೀಡಿದಲ್ಲಿ ನಾನು ಸ್ಪರ್ಧೆಗೆ ಸಿದ್ಧನಿದ್ದೇನೆ ಎಂದು ಹೇಳಿದರು. ರಾಜ್ಯದ ಸಮ್ಮಿಶ್ರ ಸರ್ಕಾರದ ಆಹಾರ ಮಂತ್ರಿ 7 ಕೆ.ಜಿ ಅಕ್ಕಿ ನೀಡುವುದಾಗಿ ಹೇಳಿದರೆ, ಮುಖ್ಯಮಂತ್ರಿ ರವರು 5 ಕೆ.ಜಿ ನೀಡುವುದಾಗಿ ಹೇಳುತ್ತಾರೆ. ಇದನ್ನು ನೋಡಿದರೆ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಎಂಬುದು ಕಾಣ ಬಹುದು ಎಂದು ಟೀಕಿಸಿದರು.

ಕೇಂದ್ರ ಬಿಜೆಪಿ ಸರ್ಕಾರ ನೀಡಿರುವ ಯೋಜ ನೆಗಳ ಬಗ್ಗೆ ಜನರಿಗೆ ಪ್ರಚಾರ ಮಾಡಬೇ ಕಿದೆ. ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಆಯ್ಕೆಯಾಗಬೇಕು. ಈ ನಿಟ್ಟಿನಲ್ಲಿ ಅವರು ದೇಶದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ ಎಂದರು. ಡಿಜಿಟಲ್ ಇಂಡಿಯಾ ಸಾಕಾರ ಮಾಡುವ ಮೂಲಕ ಕಾಂಗ್ರೆಸ್ ಇಷ್ಟೂ ವರ್ಷ ಮಾಡದೇ ಇರುವು ದನ್ನು ಕೇವಲ ನಾಲ್ಕು ವರ್ಷದಲ್ಲಿ ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಬಡಜನರು ಬ್ಯಾಂಕ್‍ಗಳಲ್ಲಿ ಖಾತೆ ಮಾಡಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನೋಟಿನ ಆಮಾನೀಕರಣವಾದ ಮೇಲೆ ಕ್ಯಾಷ್‍ಲೆಸ್ ಮೂಲಕ ಹಣದ ವ್ಯವಹಾರ ನಡೆಯುತ್ತಿದೆ.

ಕ್ಯಾಷ್‍ಲೆಸ್ ಮೂಲಕ ಖೋಟಾ ನೋಟು ಹಗರಣ ಕಡಿಮೆಯಾಗಲಿದೆ. ನಕ್ಸಲರ ಚಟುವಟಿಕೆ ಕೂಡ ಕಡಿಮೆಯಾಗ ಲಿದೆ ಎಂದರು. ಕುಮಾರಸ್ವಾಮಿರವರು ಅಧಿ ಕಾರಕ್ಕೆ ಬರುವ ಮುನ್ನ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಬ್ಯಾಂಕ್, ಖಾಸಗಿ ಸೇರಿದಂತೆ ರೈತರ ಎಲ್ಲಾ ಸಾಲವನ್ನು ಮನ್ನ ಮಾಡು ವುದಾಗಿ ಹೇಳಿ ಇಂದು ರೈತರಿಗೆ ಮೋಸ ಮಾಡಿದ್ದಾರೆ. ವೃದ್ಧರಿಗೆ 5 ಸಾವಿರ ರೂ. ಹಣವನ್ನು ವೃದ್ಧಾಪ್ಯ ವೇತನ ನೀಡುವುದಾಗಿ ಹೇಳಿ ವೃದ್ಧರಿಗೂ ಸಹ ಅನ್ಯಾಯ ಮಾಡಿ ದ್ದಾರೆ ಎಂದು ಆರೋಪಿಸಿದರು.
ಗಡಿಭಾಗದಲ್ಲಿ ಹರಿದು ಹಂಚಿ ಹೋಗಿದ್ದ ರಾಜ್ಯವು ಇವಾಗ ಒಂದಾಗಿದೆ. ಅಖಂಡ ಕರ್ನಾಟಕವಾಗಿಯೇ ಉಳಿಯ ಬೇಕೆಂಬುದು ನನ್ನ ಆಸೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಛಲವಾದಿ ಮಹಾಸಭಾ ರಾಜ್ಯ ನಿರ್ದೇ ಶಕ ಅಣಗಳ್ಳಿ ಬಸವರಾಜು ರಾಜ್ಯಾಧ್ಯಕ್ಷ ಕೆ.ಶಿವರಾಮು ಅವರನ್ನು ಸನ್ಮಾನಿಸುವ ಮೂಲಕ ಅಭಿನಂದಿಸಿದರು.

ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ದೇವ ರಾಜು, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಮೂಡನಕೂರು ಪ್ರಕಾಶ್, ಚಿನ್ನಸ್ವಾಮಿ ಮಾಳಿಗೆ, ಶಿವಮೂರ್ತಿ, ಸಿದ್ದಾರ್ಥನ್ ಇದ್ದರು.