ಕ್ಷಯ ರೋಗದ ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆ ವಹಿಸಿ: ಸಿಇಓ ಕೆ.ಲಕ್ಷ್ಮಿಪ್ರಿಯಾ

ಮಡಿಕೇರಿ: ಕ್ಷಯ ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಜಿಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾ ಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಸಹಯೋಗ ದಲ್ಲಿ ನಗರದ ಬಾಲಭವನದ ಆವರಣ ದಲ್ಲಿ ಕ್ಷಯರೋಗ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು. ವೈದ್ಯರ ಸಲಹೆ ಪಡೆ ಯುವಂತಾಗಬೇಕು. ಈ ಬಗ್ಗೆ ಜಾಗೃತಿ ಅಗತ್ಯ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ರಾಷ್ಟ್ರದಲ್ಲಿ ಕೇರಳ ರಾಜ್ಯದ ವೈನಾಡು ಜಿಲ್ಲೆಯನ್ನು ಈಗಾಗಲೇ ಕ್ಷಯರೋಗ ಮುಕ್ತ ವನ್ನಾಗಿ ಘೋಷಿಸಿದ್ದು, ಅದೇ ರೀತಿ ಕೊಡಗು ಜಿಲ್ಲೆಯನ್ನು ಕ್ಷಯ ರೋಗ ಪ್ರಕರಣಗಳು ಇಲ್ಲದಂತೆ ಮಾಡಬೇಕಿದೆ ಎಂದು ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ನಡೆದ ವಿಶ್ವ ಕ್ಷಯ ರೋಗ ದಿನದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕ್ಷಯ ರೋಗ ಸಂಬಂಧ ಹೊಸ ಪ್ರಕರಣಗಳು ಕಂಡುಬಂದಲ್ಲಿ ತಕ್ಷ ಣವೇ ಔಷಧಿ ಪಡೆಯುವಂತಾಗಬೇಕು. ಸುತ್ತಮುತ್ತಲಿನ ಪರಿಸರ ಹಾಗೂ ಮನೆ ಯಲ್ಲಿ ಗಾಳಿ-ಬೆಳಕು ಇರಬೇಕು ಇದ ರಿಂದ ಕ್ಷಯರೋಗ ಬರದಂತೆ ತಡೆಯಬಹು ದಾಗಿದೆ ಎಂದು ಡಾ.ಮೋಹನ್ ಹೇಳಿದರು.

ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಮಾತನಾಡಿ, 1882ರಲ್ಲಿ ಕ್ಷಯ ರೋಗ ವನ್ನು ಪತ್ತೆಹಚ್ಚಲಾಯಿತು. ಈ ಕಾಯಿ ಲೆಯು ವಿಶ್ವ ವ್ಯಾಪಿ ಇದ್ದು, ಇದನ್ನು ನಿಯಂತ್ರಣ ಮಾಡಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು.

ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆಗೆ ತೋರಿಸ ಬೇಕಿದೆ. ಕ್ಷಯರೋಗವನ್ನು ಸಂಪೂರ್ಣ ಗುಣ ಮಾಡಲು ಮಾತ್ರೆ ಇದ್ದು, ಇದನ್ನು ವೈದ್ಯರ ಸಲಹೆಯಂತೆ ತಪ್ಪದೇ ಕಾಲ ಕಾಲಕ್ಕೆ ತೆಗೆದುಕೊಳ್ಳಬೇಕಿದೆ ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿ ಕಾರಿ ಡಾ.ಎ.ಸಿ.ಶಿವಕುಮಾರ್ ಮಾತ ನಾಡಿ, ಕ್ಷಯ ರೋಗದಿಂದ ಬಳಲುತ್ತಿರುವವ ರಿಗೆ ಉತ್ತಮ ಜೀವನ ನಡೆಸಲು ಅವಕಾಶ ಮಾಡಬೇಕು.ಯಾವುದೇ ಕಾರಣಕ್ಕೂ ನಿರ್ಲ ಕ್ಷಿಸಬಾರದು, ಕ್ಷಯ ರೋಗಿಗಳಿಗೆ ಮಾಸಿಕ 500 ರೂ. ಸಹಾಯ ಧನ ನೀಡುತ್ತಿದೆ ಎಂದು ತಿಳಿಸಿದರು.

ರಾಷ್ಟ್ರದಲ್ಲಿ 6 ಸಾವಿರ ಜನ ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಪ್ರತಿ ದಿನ 600 ಮಂದಿ ಸಾಯುತ್ತಿದ್ದಾರೆ. ಈ ಕಾಯಿ ಲೆಯು ಒಬ್ಬರಿಂದ ಮತ್ತೊಬ್ಬರಿಗೆ ಹರ ಡುವ ರೋಗವಾಗಿದೆ. ಆದ್ದರಿಂದ ಕ್ಷಯ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸು ವುದು ಅಗತ್ಯ ಎಂದು ಸಲಹೆ ಮಾಡಿ ದರು. ಕ್ಷಯರೋಗದಲ್ಲಿ ಎರಡು ರೀತಿ ಇದೆ. ಶ್ವಾಸಕೋಶದ ಕ್ಷಯರೋಗ, ಶ್ವಾಸ ಕೋಶೇತರ ಕ್ಷಯರೋಗ. ಸತತ ಕೆಮ್ಮು, ಸಂಜೆ ವೇಳೆ ಜಠರ ಕಫದಲ್ಲಿ ರಕ್ತ ಮತ್ತು ಎದೆ ನೋವು ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ದೇಹದ ತೂಕ ಕಡಿಮೆಯಾಗುವುದು ಕ್ಷಯರೋಗದ ಲಕ್ಷಣ ಗಳಾಗಿವೆ ಎಂದು ಡಾ.ಶಿವಕುಮಾರ್ ಮಾಹಿತಿ ನೀಡಿದರು.

ಕ್ಷಯರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳ ಬೇಕು. ಎರಡು ಬಾರಿ ಕಫ ಪರೀಕ್ಷೆ ಮಾಡಿ ಸಿಕೊಳ್ಳಬೇಕು. ಕಫದಲ್ಲಿ ಕ್ರಿಮಿನಾಶಕಗಳು ಕಂಡುಬರುತ್ತದೆ. ಕ್ಷ ಕಿರಣ ಪರೀಕ್ಷೆಯ ಮೂಲಕ ರೋಗವನ್ನು ಕಂಡು ಹಿಡಿಯ ಬಹುದು. ಪರೀಕ್ಷೆಗೆ ತಡ ಮಾಡಿದರೆ ರೋಗವು ಇನ್ನೊಬ್ಬರಿಗೂ ಹರಡುವ ಸಾಧ್ಯತೆ ಇರುತ್ತದೆ. ಕ್ಷಯ ರೋಗವು ಗೊತ್ತಾದ ತಕ್ಷಣ ಸೂಕ್ತ ಚಿಕಿತ್ಸೆಯನ್ನು ಪಡೆದರೆ ಗುಣ ಮುಖರಾಗಬಹುದು ಎಂದರು.

ಕ್ಷಯರೋಗ ದಿನಾಚರಣೆಯ ಪ್ರಯುಕ್ತ ನಗರದ ಬಾಲಮಂದಿರದಿಂದ ಜಾಥಾ ಹೊರಟು ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಜಿಲ್ಲಾಸ್ಪತ್ರೆಯ ಸಭಾಂ ಗಣದವರೆಗೆ ಜಾಥಾ ನಡೆಯಿತು. ಮತ ದಾನದ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ.ಎಂ.ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್. ಆನಂದ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ, ಅಶ್ವಿನಿ ಆಸ್ಪತ್ರೆಯ ವೈದ್ಯಾ ಧಿಕಾರಿ ಡಾ.ಕುಲಕರ್ಣಿ ಇತರರು ಇದ್ದರು. ಕ್ಷಯರೋಗ ನಿಯಂತ್ರಣ ವಿಭಾಗದ ಮಹ ದೇವಪ್ಪ ಅವರು ಸ್ವಾಗತಿಸಿದರು, ಲೀಲಾ ವತಿ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷ ಣಾಧಿಕಾರಿ ರಮೇಶ್ ನಿರೂಪಿಸಿ, ವಂದಿಸಿದರು.

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಮಂಗಳವಾರ ರಾಜಾಸೀಟು ಬಳಿ ವಾಹನ ನಿಲುಗಡೆ ಸಂಬಂಧ ಸ್ಥಳ ಪರಿಶೀಲಿಸಿದರು. ಪೌರಾಯುಕ್ತ ಎಂ.ಎಲ್. ರಮೇಶ್, ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಶಿವಣ್ಣ, ನಗರಸಭೆ ಎಂಜಿನಿಯರ್ ನಾಗರಾಜು ಇತರರು ಇದ್ದರು.