ಇಂದಿರಾ ಗಾಂಧಿ 45 ದಿನ ಜೆಎನ್‍ಯು ಮುಚ್ಚಿಸಿದ್ದ ಕ್ರಮ ಸರಿ ಎಂದು ಕಾಂಗ್ರೆಸ್‍ನವರು ಒಪ್ಪುತ್ತಾರಾ?

ಮೈಸೂರು,ಜ.8(ಪಿಎಂ)- ಜವಾಹರ ಲಾಲ್ ನೆಹರೂ ವಿವಿಯನ್ನು (ಜೆಎನ್‍ಯು) ಮಾಜಿ ಪ್ರಧಾನಿ ಇಂದಿರಾ ಗಾಂಧಿ 45 ದಿನಗಳ ಕಾಲ ಮುಚ್ಚಿಸಿದ್ದರು. ಇಂದಿರಾ ಅವರ ಈ ಕ್ರಮವನ್ನು ಕಾಂಗ್ರೆಸ್‍ನವರು ಸರಿ ಎಂದು ಒಪ್ಪಿಕೊಳ್ಳುತ್ತಾರಾ? ಇದಕ್ಕೆ ಅವರು ಉತ್ತರ ಕೊಡಲಿ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಮೈಸೂರು ವಿವಿ ಓಆರ್‍ಐ ಆವರಣ ದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಜೆಎನ್‍ಯುನಲ್ಲಿ ನಡೆದ ಹಿಂಸಾಚಾರ ಸಂಬಂಧ ಘಟನೆ ನಡೆದ ಕೂಡಲೇ ಕೇಂದ್ರ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಆದರೆ ಪ್ರತಿಭಟನೆ ನೆಪ ದಲ್ಲಿ ಸಿನಿಮಾದವರನ್ನು ಕರೆದುಕೊಂಡು ಹೋಗಿ ಪ್ರಕರಣಕ್ಕೆ ಬೇರೆ ರೂಪ ಕೊಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇಂದು ಕಾಂಗ್ರೆಸ್‍ನವರು ಮಾತನಾಡು ತ್ತಾರೆ. ಆದರೆ ಇದೇ ಇಂದಿರಾಗಾಂಧಿ 45 ದಿನಗಳ ಕಾಲ ಜೆಎನ್‍ಯು ಮುಚ್ಚಿಸಿ ದ್ದರು. ಇದು ಸರಿ ಎಂದು ಕಾಂಗ್ರೆಸ್‍ನವರು ಒಪ್ಪಿಕೊಳ್ಳುತ್ತಾರೆಯೇ? ದೇಶ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಈ ಕ್ರಮ ಕೈಗೊಂಡಿದ್ದರು ಎಂದಾ ದರೂ ಒಪ್ಪಿಕೊಳ್ಳುತ್ತಾರಾ? ಇದಕ್ಕೆ ಉತ್ತರ ಕೊಡಲಿ ಎಂದು ಕಿಡಿಕಾರಿದರು.

ಜೆಎನ್‍ಯು ಘಟನೆಯಲ್ಲಿ ಹಿಂದೂ ಸಂಘಟನೆಗಳ ಕೈವಾಡವಿಲ್ಲ. ಎಬಿವಿಪಿಯವರ ಮೇಲೆಯೂ ಹಲ್ಲೆ ನಡೆದಿರುವ ವೀಡಿಯೋಗಳು ಹೊರಬರು ತ್ತಿವೆ ಎಂದರಲ್ಲದೆ, ಹಿಂದೂ ಸಂಘಟನೆ ಯೊಂದು ಹಲ್ಲೆ ಹೊಣೆ ಹೊತ್ತಿರುವುದಾಗಿ ಹೇಳಿಕೊಂಡಿದೆಯಲ್ಲಾ? ಎಂಬುದಕ್ಕೆ ಉತ್ತರಿಸಿ, ಹಿಂದೂ ಸಂಘಟನೆ ಕೈವಾಡ ವಿಲ್ಲ. ಒಂದು ವೇಳೆ ಇದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.

ಜೆಎನ್‍ಯು ಹಿಂಸಾಚಾರ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದರು, ದೇಶದಲ್ಲಿ 600ಕ್ಕೂ ಹೆಚ್ಚು ವಿವಿಗಳು ಇವೆ. ಜೆಎನ್‍ಯು, ಜಾಮಿಯಾ ಮಿಲಿಯಾ ಇವೆರಡೇ ಅಲ್ಲ. ಈ ಎರಡರ ಹೊರತಾಗಿ ಎಲ್ಲಾ ಕಡೆ ಚೆನ್ನಾಗಿ ಪಾಠ-ಪ್ರವಚನ ನಡೆಯುತ್ತಿದೆ. ಯಾವುದೇ ಹೋರಾಟಕ್ಕೆ ಅವರನ್ನು ಬೆಂಬಲ ನೀಡಬೇಡಿ ಎಂದು ಹೇಳಲ್ಲ. ದೀಪಿಕಾ ಪಡುಕೋಣೆಯವರ ಸಿನಿಮಾ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ಒಳ್ಳೆಯ ಸಿನಿಮಾವಾದರೆ ಜನ ನೋಡು ತ್ತಾರೆ. ಹಾಗೆಯೇ ಒಳ್ಳೆಯ ವಿಚಾರವಾದರೆ ಖಂಡಿತ ಬೆಂಬಲ ನೀಡಲಿ ಎಂದರು.

ಮುಷ್ಕರ ವಿಪಕ್ಷಗಳ ಕುತಂತ್ರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಹಿತಕ್ಕಾಗಿ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಸಹಿಸದೇ ವಿರೋಧ ಪಕ್ಷಗಳು ನಡೆಸಿದ ಕುತಂತ್ರವೇ ಇಂದಿನ ಮುಷ್ಕರ ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.

ಮೋದಿಯವರ ಉತ್ತಮ ಆಡಳಿತಕ್ಕೆ ಎರಡನೇ ಬಾರಿಗೆ ದೇಶದ ಜನತೆಯ ಶ್ರೀರಕ್ಷೆ ದೊರೆತು ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂತು. ಬಳಿಕ ಮೋದಿ ಯವರು ಹಲವು ದಿಟ್ಟ ಕ್ರಮಗಳನ್ನು ಕೈಗೊಂಡರು. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದರು.

ಬಾಂಗ್ಲಾ, ಪಾಕಿಸ್ತಾನ, ಆಫ್ಘಾನಿಸ್ತಾನ ದಲ್ಲಿ ತುಳಿತಕ್ಕೆ ಒಳಗಾದವರಿಗೆ ಮಾನವೀಯ ನೆಲಗಟ್ಟಿನಲ್ಲಿ ದೇಶದ ಪೌರತ್ವ ಕೊಡುವ ಅತ್ಯಂತ ಗುರುತರ ಕೆಲಸವನ್ನು ಮೋದಿ ಮಾಡಿದರು. ಆದರೆ ವಿಪಕ್ಷಗಳು `ನಿಮ್ಮನ್ನು ದೇಶದಿಂದ ಓಡಿಸುತ್ತಾರೆ’ ಎಂದು ಅಮಾಯಕ ಮುಸಲ್ಮಾನರಲ್ಲಿ ಆತಂಕ ಸೃಷ್ಟಿ ಮಾಡಿವೆ ಎಂದು ದೂರಿದರು.

ಮುಷ್ಕರ, ಪ್ರತಿಭಟನೆ ಹೆಸರಿನಲ್ಲಿ ರಾಜ್ಯದ ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮಾಡುವವರ ವಿರುದ್ಧ ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ ಅವರಂತೆ ಹಾನಿ ಮಾಡಿದವರೇ ನಷ್ಟ ಭರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇನೆ ಎಂದರು.