ಪ.ಜಾ, ಪ.ಪಂ ವ್ಯಕ್ತಿಗಳ ಮೇಲಿನ ದೌರ್ಜನ್ಯ ದೂರು ಸಲ್ಲಿಕೆಗೆ ಅವಕಾಶ ವಿಸ್ತರಣೆ

ಚಾಮರಾಜನಗರ:  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯ ಎಸಗಿದ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯಕ್ಕೆ ಒಳಗಾದ ದೂರುಗಳಿದ್ದಲ್ಲಿ ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಜೂನ್ 30ರವರೆಗೂ ಸ್ವೀಕರಿಸಲಿದೆ.

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಸಮಸ್ಯೆ, ಕುಂದುಕೊರತೆಗಳ ನಿವಾರಣಾ ಸಭೆಯನ್ನು ಜುಲೈ 26 ಹಾಗೂ 27ರಂದು ಬೆಂಗಳೂರಿನಲ್ಲಿ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತೀರ್ಮಾನಿಸಿದೆ.

ಹೀಗಾಗಿ ದೂರುಗಳಿದ್ದಲ್ಲಿ ರಿಜಿಸ್ಟ್ರಾರ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಮಾನವ ಅಧಿಕಾರ ಭವನ, ಬ್ಲಾಕ್-ಸಿ, ಜಿಪಿಓ ಕಾಂಪ್ಲೆಕ್ಸ್, ಐಎನ್‍ಎ, ನವದೆಹಲಿ – 1100023 ಇಲ್ಲಿಗೆ ದೂರುಗಳನ್ನು ನೊಂದಾಯಿತ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸಬಹುದು. ಅಲ್ಲದೆ ಇ-ಮೇಲ್ ವಿಳಾಸ jrlawnhrc.nic@in ಗೆ ಅಥವಾ ಫ್ಯಾಕ್ಸ್ ಸಂಖ್ಯೆ 011-24651334 ಮೂಲಕವೂ ಕಳುಹಿಸಬಹುದು. ದೂರುದಾರರು ಸಂಪರ್ಕಕ್ಕಾಗಿ ಅವರ ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ವಿಳಾಸ ವನ್ನು ನಮೂದಿಸಬೇಕು. ವಿಚಾರಣೆಗೆ ಅರ್ಹವೆಂದು ಕಂಡುಬಂದ ದೂರುಗಳನ್ನು ಸಾರ್ವಜನಿಕ ವಿಚಾರಣೆಗೆ ತೆಗೆದುಕೊಳ್ಳಲಾಗುವುದೆಂದು ಪ್ರಕಟಣೆ ತಿಳಿಸಿದೆ.