ಕೆಆರ್‍ಎಸ್ ಜಲಾಶಯದ 143 ಕ್ರೆಸ್ಟ್ ಗೇಟ್ ಬದಲಿಸುವ ಕಾಮಗಾರಿಗೆ ಆರ್ಥಿಕ ಬಿಡ್ ಅಂತಿಮ

– ಎಸ್.ಟಿ. ರವಿಕುಮಾರ್

ಮೈಸೂರು: ವಿಶ್ವ ಪ್ರಸಿದ್ಧ ಕೃಷ್ಣರಾಜ ಸಾಗರ ಅಣೆಕಟ್ಟೆಯ ಅತೀ ಹಳೆಯ 143 ಕ್ರೆಸ್ಟ್ ಗೇಟ್‍ಗಳನ್ನು ಬದಲಿ ಸುವ ಕಾಲ ಸನ್ನಿಹಿತವಾಗಿದೆ.

ಕಾವೇರಿ ನೀರಾವರಿ ನಿಗಮ (ಅಓಓ)ವು, ಕೆಆರ್‍ಎಸ್ ಅಣೆಕಟ್ಟೆ ನಿರ್ಮಾಣ ಸಂದರ್ಭ 80 ವರ್ಷಗಳ ಹಿಂದೆ ಅಳವಡಿಸಿದ್ದ 173 ಗೇಟುಗಳ ಪೈಕಿ ಕಾವೇರಿ ನದಿಗೆ ನೀರು ಹರಿಸುವ 143 ಗೇಟ್ (ಸ್ಲೂಸ್ ಗೇಟ್)ಗಳನ್ನು ಬದಲಾಯಿಸಲು ಯೋಜನೆ ರೂಪಿಸಿತ್ತು. 68 ಕೋಟಿ ರೂ. ವೆಚ್ಚದ ಈ ಮಹತ್ತರ ಯೋಜನೆಗೆ ಹಣಕಾಸಿನ ನೆರವು ನೀಡಲು ವಿಶ್ವ ಬ್ಯಾಂಕ್ ಒಪ್ಪಿರುವು ದರಿಂದ ಕಾವೇರಿ ನೀರಾವರಿ ನಿಗಮ ಸಿದ್ಧಗೊಳಿಸಿದ್ದ ಸಮಗ್ರ ಯೋಜನಾ ವರದಿ (ಡಿಪಿಆರ್)ಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು.

ಇದೀಗ ಟೆಂಡರ್ ಪ್ರಕ್ರಿಯೆ ಅಂತ್ಯ ಗೊಂಡಿದ್ದು, ಗುಜರಾತ್ ಮೂಲದ ಮೆ. ಹಾರ್ಡ್‍ವೇರ್ ಗ್ರೂಪ್ಸ್ ಕನ್‍ಸ್ಟ್ರಕ್ಷನ್ ಕಂಪನಿಗೆ 68 ಕೋಟಿ ರೂ.ನ ಕ್ರೆಸ್ಟ್ ಗೇಟ್‍ಗಳ ಬದಲಿಸುವ ಕಾಮಗಾರಿ ಒಪ್ಪಿ ಸಲು ಫೈನಾನ್ಸಿಯಲ್ ಬಿಡ್ ಸಹ ಮೂರು ದಿನಗಳ ಹಿಂದೆ ಅಂತಿಮವಾಗಿದೆ.

ಟೆಂಡರ್‍ನಲ್ಲಿ ಭಾಗವಹಿಸಿದ್ದ ಮೂರು ಕಂಪನಿಗಳ ಪೈಕಿ ರಾಜ್ಯ ಹಾಗೂ ಹೊರ ರಾಜ್ಯದ ಹಲವು ಅಣೆಕಟ್ಟೆಗಳ ಪೈಕಿ ನಿರ್ವ ಹಣೆ ಮತ್ತು ಗೇಟ್ ಬದಲಿಸುವ ಕಾಮಗಾರಿ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿ ಸಿದ ಅನುಭವವಿರುವುದರಿಂದ ಅರ್ಹತೆ ಆಧಾರದ ಮೇಲೆ ಕೆಆರ್‍ಎಸ್ ಅಣೆಕಟ್ಟೆಯ 143 ಕ್ರೆಸ್ಟ್‍ಗೇಟ್‍ಗಳನ್ನು ಬದಲಿಸುವ 68 ಕೋಟಿ ರೂ. ಯೋಜನೆ ಜಾರಿಗೊಳಿ ಸುವ ಜವಾಬ್ದಾರಿಯನ್ನು ಹಾರ್ಡ್‍ವೇರ್ ಗ್ರೂಪ್ಸ್ ಕಂಪನಿಗೆ ಒಪ್ಪಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಸೂಪ ರಿಂಟೆಂಡಿಂಗ್ ಇಂಜಿನಿಯರ್ (ಕೆಆರ್‍ಎಸ್ ವಿಭಾಗ) ರಮೇಂದ್ರ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಫೈನಾನ್ಸಿಯಲ್ ಬಿಡ್ ಅಂತಿಮವಾಗಿರುವ ಹಾರ್ಡ್‍ವೇರ್ ಗ್ರೂಪ್ಸ್ ಕಂಪನಿಯು ನಾಗಾರ್ಜುನ ಸಾಗರ, ಅಲಮಟ್ಟಿ, ಇಡಕಲ್, ಘಟಪ್ರಭ, ನಾರಾಯಣಪುರ ಅಲ್ಲದೆ, ದೇಶಾದ್ಯಂತ ಹಲವು ರಾಜ್ಯಗಳ ಅಣೆಕಟ್ಟೆಗಳಲ್ಲಿ ಯಶಸ್ವಿಯಾಗಿ ಕಾಮಗಾರಿ ಪೂರೈಸಿರುವ ಅನುಭವ ಹೊಂದಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿರುವ ಚೀಫ್ ಇಂಜಿನಿಯರ್ ನೇತೃತ್ವದ ತಾಂತ್ರಿಕ ಉಪಸಮಿತಿ (ಖಿeಛಿhಟಿiಛಿಚಿಟ Sub ಅommiಣಣee)ಯ ಸದಸ್ಯರು ಇಂದು ಸಭೆ ನಡೆಸಿದ್ದು, ಫೈನಾನ್ಸಿಯಲ್ ಬಿಡ್ ಸಂಬಂಧ ಅನುಮೋದನೆಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ನಂತರ ಸರ್ಕಾರ ವಿಶ್ವ ಬ್ಯಾಂಕಿಗೆ ವರದಿ ಸಲ್ಲಿಸಲಿದ್ದು, ಅತೀ ಶೀಘ್ರ ವಲ್ರ್ಡ್ ಬ್ಯಾಂಕ್ ಡ್ಯಾಂಗಳ ನಿರ್ವಹಣಾ ಯೋಜನೆಯಡಿ ಷರತ್ತು ವಿಧಿಸಿ ಕ್ರೆಸ್ಟ್ ಗೇಟ್‍ಗಳನ್ನು ಬದಲಾಯಿಸಲು ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲಿದೆ.

ಕೆಆರ್‍ಎಸ್ ಅಣೆಕಟ್ಟೆ ನಿರ್ಮಿಸುವಾಗ 1932 ರಲ್ಲಿ ವಿವಿಧ ಮಟ್ಟದ ಒಟ್ಟು 173 ಕ್ರೆಸ್ಟ್ ಗೇಟ್‍ಗಳನ್ನು ಅಳವಡಿಸಲಾಗಿತ್ತು. ಹಲವು ಬಾರಿ ದುರಸ್ತಿ ಮೂಲಕ ನಿರ್ವಹಣೆ ಮಾಡಿದ್ದರೂ ನೀರು ಸೋರಿಕೆಯಾಗುತ್ತಿದ್ದರಿಂದ ಹಾಗೂ ಸರಿಯಾಗಿ ಕಾರ್ಯಾಚರಣೆ ಮಾಡುತ್ತಿರಲಿಲ್ಲವಾದ ಕಾರಣ 2015ರಲ್ಲಿ +80 ಅಡಿಯ 16, +50 ಅಡಿಯ 3 ಹಾಗೂ +60 ಅಡಿ ಮಟ್ಟದ 3 ಸೇರಿ ಒಟ್ಟು 22 ಕ್ರೆಸ್ಟ್ ಗೇಟ್ (ನಾಲೆಗಳಿಗೆ ನೀರು ಹರಿಸುವ)ಗಳನ್ನು 18.8 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮವು ಬದಲಿಸಿತ್ತು. ಕಾವೇರಿ ನದಿಗೆ ನೀರು ಬಿಡುವ ಉಳಿದ 143 ಕ್ರೆಸ್ಟ್ ಗೇಟ್‍ಗಳನ್ನು ಇದೇ ಪ್ರಥಮ ಬಾರಿಗೆ ಬದಲಿಸುವ ಬೃಹತ್ ಕಾಮಗಾರಿಯನ್ನು ಒಳಹರಿವು ಜಾಸ್ತಿಯಾಗಿ ಜಲಾಶಯದ ನೀರಿನ ಮಟ್ಟ ಅಧಿಕವಾಗದಿದ್ದರೆ ಮಾತ್ರ ಈಗಲೇ ಆರಂಭಿಸಲಾಗುವುದು. ಒಂದು ವೇಳೆ ಮಳೆ ಬಿದ್ದು ಹೆಚ್ಚಿನ ಪ್ರಮಾಣದ ನೀರು ಜಲಾಶಯಕ್ಕೆ ಬಂದಲ್ಲಿ, ಮುಂದಿನ ವರ್ಷ ಕೆಲಸ ಆರಂಭಿಸಲಾಗುವುದು.

9 ತಿಂಗಳ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಟೆಂಡರ್‍ನಲ್ಲಿ ನಮೂದಿಸಲಾಗಿದೆ. ವಲ್ರ್ಡ್ ಬ್ಯಾಂಕ್‍ನಿಂದ ಪಡೆದ ಹಣವನ್ನು 25 ವರ್ಷದೊಳಗಾಗಿ ಹಂತ ಹಂತವಾಗಿ ಪ್ರತೀ ವರ್ಷ ಪಾವತಿಸಬೇಕಾಗಿದೆ. ತೆರವುಗೊಳಿಸಿದ ಹಳೆಯ ಕ್ರೆಸ್ಟ್ ಗೇಟ್‍ಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಬೇಕಾಗಿದೆ. ಪ್ರಸ್ತುತ ಕೆಆರ್‍ಎಸ್ ಜಲಾಶಯದಲ್ಲಿ ಇಂದು 79.7 ಅಡಿ ನೀರಿದ್ದು, ಮೇ-ಜೂನ್ ತಿಂಗಳಲ್ಲಿ ವಾಡಿಕೆಯಂತೆ ಮುಂಗಾರು ಮಳೆಯಾಗದ ಕಾರಣ ನೀರಿನ ಮಟ್ಟ ಕುಸಿದಿದೆ. ಕಳೆದ ವರ್ಷ ಜುಲೈ ಮೊದಲ ವಾರವೇ ಜಲಾಶಯ ಭರ್ತಿಯಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದಂಪತಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.